ಅಥಣಿ ಪಟ್ಟಣದ ಪತಂಜಲಿ ಯೋಗ ಸಮಿತಿ ವತಿಯಿಂದ ದಿನಾಂಕ 2/3/2023 ರಿಂದ 8/3/2023 ರ ವರೆಗೆ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಬಳಿಯಿರುವ ಹುಡಕೋ ಮೈದಾನದಲ್ಲಿ ಬೃಹತ್ ಇಂಟಿಗ್ರೇಟೆಡ್ ಉಚಿತ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅಥಣಿ ತಾಲ್ಲೂಕು ಪತಂಜಲಿ ಯೋಗ ಸಮಿತಿ ಯೋಗ ಪ್ರಭಾರಿ ಎಸ್ ಕೆ ಹೊಳೆಪ್ಪನವರ ಹೇಳಿದ್ದಾರೆ.
ಅಥಣಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದಿನಾಂಕ 2/3/2023 ರಿಂದ 8/3/2023 ರ ವರೆಗೆ ಈ ಉಚಿತ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆರೋಗ್ಯ ಸಂಪಾದಿಸಬೇಕೆಂದು ಮನವಿ ಮಾಡಿದ ಅವರು ಈ ಯೋಗ ಕಾರ್ಯಕ್ರಮದಲ್ಲಿ ರಾಜ್ಯ ಯೋಗಾಚಾರ್ಯ ಭವರಲಾಲ ಆರ್ಯಾಜೀ ಹಾಗೂ ಕಿಸಾನ ಸೇವಾ ಸಮಿತಿ ರಾಜ್ಯ ಪ್ರಭಾರಿ ಸಂಜಯ ಕುಸ್ತಿಗಾರ, ಉತ್ತರ ಕರ್ನಾಟಕ ಪತಂಜಲಿ ಯೋಗ ಸಮೀತಿ ರಾಜ್ಯ ಪ್ರಭಾರಿ ಕಿರಣ ಮನೋಳಕರ ಮತ್ತು ವಸಂತ ಹೊಸಮನಿ ಜಿಲ್ಲಾ ಪ್ರಭಾರಿ ಭಾರತ ಸ್ವಾಭಿಮಾನ ಟ್ರಸ್ಟ್ ಚಿಕ್ಕೋಡಿ ಹಾಗೂ ಸಂಭಾಜೀ ನಿಂಬಾಳ್ಕರ ಜಿಲ್ಲಾ ಯೋಗಪ್ರಭಾರಿ ಚಿಕ್ಕೋಡಿ ಹಾಗೂ ಅಥಣಿ ಪತಂಜಲಿ ಯೋಗ ಸಮಿತಿಯ ಹಿರಿಯ ಯೋಗ ಶಿಕ್ಷಕ ಎ ಬಿ ಪಾಟೀಲ ಮತ್ತುಯೋಗ ಶಿಕ್ಷಕ ಡಾ .ವಿ ಎಮ್ ಚಿಂಚೊಳಿಮಠ ಹಾಗೂ ಸುರೇಶ ಚಿಕ್ಕಟ್ಟಿ ಸೇರಿದಂತೆ ಅಥಣಿಯ ಪತಂಜಲಿ ಯೋಗ ಸಮೀತಿ ಎಲ್ಲ ಯೋಗ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ ಕಾರಣ ಅಥಣಿಯ ಗಣ್ಯರು ಸಹೃದಯ ಯೋಗಾಸಕ್ತರು ಅಥಣಿ ಯೋಗ ಪ್ರಿಯರು ನಾಗರಿಕರು ಮಹಿಳೆಯರು ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಹೊಳೆಪ್ಪನವರ ಮನವಿ ಮಾಡಿದರು.
ಈ ವೇಳೆ ಅಥಣಿ ಯೋಗ ಶಿಕ್ಷಕರಾದ ಶ್ರೀ ಶೈಲ ಪಾಟೀಲ , ಸಿ ಸಿ ಕರಾಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.