ಬಿಸಿಯೂಟ ಶುಚಿರುಚಿಯಾಗುವ ಮೂಲಕ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕ ಶಕ್ತಿಯಾಗಿದೆ – ವಿಶ್ವಾಸ ವೈದ್ಯ

Must Read

ಯರಗಟ್ಟಿ: “ಮಕ್ಕಳಿಗೆ ಅಡುಗೆ ಮಾಡುವ ಮೂಲಕ ಅಲ್ಲಿ ಶುಚಿ ರುಚಿಯಾದ ಕಾರ್ಯವನ್ನು ಮಾಡುವ ಮೂಲಕ ಅಡುಗೆಯವರು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಕಾರ್ಯ ಮಾಡುತ್ತಿರುವುದು ಅಭಿಮಾನದ ಸಂಗತಿ. ಸರಕಾರದ ಈ ಯೋಜನೆಯ ಮೂಲಕ ಅಡುಗೆದಾರರಿಗೆ ಇಂದು ರಂಗೋಲಿ ಸ್ಪರ್ಧೆ, ಅಡುಗೆ ಸ್ಪರ್ಧೆ, ಕಾವ್ಯಗಾಯನ ಸ್ಪರ್ಧೆ ಕೂಡ ಆಯೋಜಿಸುವ ಮೂಲಕ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ”ಎಂದು ಸವದತ್ತಿ ತಾಲೂಕಿನ ಜನಪ್ರಿಯ ಶಾಸಕ ವಿಶ್ವಾಸ ವೈದ್ಯ ಕರೆ ನೀಡಿದರು.

     ಅವರು ಯರಗಟ್ಟಿಯ ಶ್ರೀ ಮಹಾಂತ ದುರದುಂಡೇಶ್ವರ ಮಠದಲ್ಲಿ ಯರಗಟ್ಟಿ ಹಾಗೂ ಮುರಗೋಡ ವಲಯಗಳ ಅಡುಗೆಯವರಿಗೆ ಜರುಗಿದ ಅಡುಗೆಯವರ ತರಬೇತಿ  ಮತ್ತು ವಿವಿಧ ಸ್ಪರ್ಧೆಗಳನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

   “ಕೇವಲ ಅಡುಗೆ ಮಾಡುವುದಷ್ಟೇ ಅಲ್ಲ ಇತ್ತೀಚಿನ ವರ್ಷಗಳಲ್ಲಿ ಮಕ್ಕಳಿಗೆ ಹಾಲು,ಮೊಟ್ಟೆ ವಿತರಿಸಲಾಗುತ್ತಿದ್ದು ಶೀಘ್ರದಲ್ಲಿ ಸರಕಾರ ರಾಗಿಮಾಲ್ಟ ಕೂಡ ವಿತರಿಸುವ ಚಿಂತನೆಯಲ್ಲಿ ತೊಡಗಿದೆ. ಇವುಗಳ ಜೊತಗೆ ವಿಟಮಿನ್ ಮಾತ್ರೆಗಳ ಕೂಡ ವಿತರಿಸಲಾಗುತ್ತಿದೆ. ಇವೆಲ್ಲವುಗಳ ಸದುಪಯೋಗ ಪಡೆದುಕೊಂಡ ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ ಗುಣಾತ್ಮಕ ಶಿಕ್ಷಣ ಪಡೆಯುವಲ್ಲಿ ಮಕ್ಕಳ ಶಿಕ್ಷಣ ಕೂಡ ಸಾಗಲಿ” ಎಂದು ಕರೆ ನೀಡಿದರು.

     ಜಿಲ್ಲಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಲಕ್ಷ್ಮಣರಾವ ಯಕ್ಕುಂಡಿ ಮಾತನಾಡಿ “ ಅಕ್ಷರದಾಸೋಹ ಯೋಜನೆ ೨೦೦೨-೦೩ ರಲ್ಲಿ ಜಾರಿಗೆ ಬಂದಿದ್ದು ಆಗಾಗ ತರಬೇತಿ ನೀಡುವ ಮೂಲಕ ಅಡುಗೆಯವರಲ್ಲಿ ಇಲಾಖೆಯ ಮಹತ್ವದ ಕಾರ್ಯಕ್ರಮ ಕೂಡ ತಿಳಿಯಲು ಈ ತರಬೇತಿ ಅವಶ್ಯಕ. ತರಬೇತಿ ಸದುಪಯೋಗ ಎಲ್ಲಾ ಅಡುಗೆದಾರರು ಪಡೆದುಕೊಂಡು ಶಾಲೆಯಲ್ಲಿ ಕಾರ್ಯ ಕೈಗೊಳ್ಳುವ ಮೂಲಕ ಅಕ್ಷರ ದಾಸೋಹ ಯೋಜನೆ ಸಮರ್ಪಕವಾಗಿಸಲು ಕೈಜೋಡಿಸಿ ” ಎಂದು ಕರೆ ನೀಡಿದರು. 

  ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ದಂಡಿನ ಮಾತನಾಡಿ “ಬಹಳಷ್ಟು ಅಡುಗೆ ದಾರರು ಪದವೀಧರರಾಗಿದ್ದು ಅವರು ಬೋಧನೆಯಲ್ಲಿ ಕೂಡ ತಮ್ಮ ಪ್ರೋತ್ಸಾಹ ನೀಡುತ್ತಿರುವರು. ಶಾಸಕ ವಿಶ್ವಾಸ ವೈದ್ಯ ಅವರು ಶಾಲೆಗಳಿಗೆ ಹೋದಾಗ ಮಕ್ಕಳ ಜೊತೆ ಊಟ ಮಾಡುವ ಮೂಲಕ ಸರಳತೆ ಮೆರೆದಿರುವರು.ಅಕ್ಷರ ದಾಸೋಹ ಕಾರ್ಯ ಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಅವರ ಸರಳತೆಗೆ ಮಾದರಿ” ಎಂದು ನುಡಿದರು. 

     ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಯಶವಂತ ಕುಮಾರ್ ಮಾತನಾಡಿ,”ಅಡುಗೆ ತಯಾರಿಸುವ ಜೊತೆಗೆ ಮಕ್ಕಳ ಪ್ರತಿದಿನ ಊಟ ಬಡಿಸುವಾಗ ಮುಂಜಾಗೃತೆ ಮುಖ್ಯ. ಮಕ್ಕಳ ಪೌಷ್ಟಿಕಾಂಶ ಮಾತ್ರೆ ನೀಡುವುದು. ಮೊಟ್ಟೆ ಬಾಳೆಹಣ್ಣು ಚಕ್ಕಿ ವಿತರಣೆ ಮಹತ್ವದ್ದು ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಮಕ್ಕಳಿಗೆ ಸಮರ್ಪಕವಾಗಿ ದೊರೆಯಬೇಕು. ಉತ್ತಮ ಅಡುಗೆ ತಯಾರಿಕೆ ಜೊತೆಗೆ ಶುಚಿತ್ವದ ಕಡೆಗೂ ಮಹತ್ವ ಗಮನ ಹರಿಸುವುದು ಮುಖ್ಯ”ಎಂದು ತರಬೇತಿ ಸದುಪಯೋಗ ಪಡೆಯಲು ಅಡುಗೆದಾರರಿಗೆ ಕರೆ ನೀಡಿದರು. 

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾದ ಮೈತ್ರಾದೇವಿ ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿ ಇಂದು ರಂಗೋಲಿ, ಅಡುಗೆ ಸ್ಪರ್ಧೆ ಹಾಗೂ ಕಾವ್ಯಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಅಡುಗೆಯವರು ತಮ್ಮ ವಿಭಿನ್ನ ವ್ಯಕ್ತಿತ್ವ ಹೊರಹೊಮ್ಮುವ ಮೂಲಕ ಅಡುಗೆ ಮಾಡುವ ಜೊತೆಗೆ ತಮ್ಮಲ್ಲಿ ಕಲೆಯನ್ನು ಹೊರಹೊಮ್ಮಿಸಲು ಈ ತರಬೇತಿ ಸಾರ್ಥಕತೆ ಪಡೆದಿದೆ ಎಂದು ತರಬೇತಿ ಕುರಿತು ಮಾತನಾಡಿದರು. 

     ಇದೇ ಸಂದರ್ಭದಲ್ಲಿ ರಂಗೋಲಿ ಕಾವ್ಯ ಗಾಯನ,ಅಡುಗೆ ಸ್ಪರ್ಧೆಯಲ್ಲಿ ಬಹುಮಾನಿತರಾದವರಿಗೆ ಬಹುಮಾನ ವಿತರಿಸಲಾಯಿತು. ವೈದ್ಯ ಪೌಂಡೇಶನ್ ವತಿಯಿಂದ ಅಡುಗೆ ಸುರಕ್ಷಿತಾ ಕಿಟ್ ವಿತರಿಸಲಾಯಿತು. ನಿವೃತ್ತ ಅಡುಗೆಯವರ ಬೀಳ್ಕೊಡುಗೆ ಕೂಡ ಈ ಸಂದರ್ಭದಲ್ಲಿ ಜರುಗಿಸಲಾಯಿತು

     ವೇದಿಕೆಯಲ್ಲಿ ತಹಶೀಲ್ದಾರ್ ಎಂ. ಎನ್. ಮಠದ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ಧಬಸನ್ನವರ, ತಾಲೂಕು ವೈದ್ಯಾಧಿಕಾರಿ ಶ್ರೀಪಾದ ಸಬನೀಸ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ ಕುರಿ, ಪರಸಗಡ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮನೋಹರ ಚೀಲದ, ಶಿವಪುತ್ರಪ್ಪ ನಂಜನ್ನವರ, ಯರಗಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ ಎನ್ ತಹಶೀಲ್ದಾರ್, ಬಸವರಾಜ ಅರಿಬೆಂಚಿ, ಆರೋಗ್ಯ ಇಲಾಖೆಯ ಎಸ್. ಡಿ. ಗಾಂಜಿ,  ಗಿರೀಶ ಮುನವಳ್ಳಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. 

       ಇದೇ ಸಂದರ್ಭದಲ್ಲಿ ಅಡುಗೆ ಅನಿಲ ಬಳಕೆ ಕುರಿತು ಗ್ಯಾಸ್ ಏಜೆನ್ಸಿ ಅವರಿಂದ ತರಬೇತಿ ಜರುಗಿತು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮೀರಾ ಮರನಾಳ, ಗುರುದೇವಿ ಮಲಕನ್ನವರ, ಎನ್.ಬಿ.ಪೆಂಟೇದ, ಎ.ಕೆ.ಮುಳ್ಳೂರ, ಎಸ್.ಎಸ್.ಮಲ್ಲನ್ನವರ, ಎಂ.ಎಂ.ಮಲಕನ್ನವರ, ವ್ಹಿ.ಎಸ್.ಬಡಿಗೇರ, ಎಂ.ಜಿ.ಬಾಳೇಕುಂದರಗಿ, ರಫೀಕ ಮುರಗೋಡ, ಸಮನ್ವಯ ಸಂಪನ್ಮೂಲ ಶಿಕ್ಷಕ ವೈ. ಬಿ. ಕಡಕೋಳ ಎಸ್. ಡಿ. ಎಂ. ಸಿ ಸದಸ್ಯ ಶಿವಾನಂದ ಬಳಿಗಾರ ಸೇರಿದಂತೆ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳ ನಿರ್ಣಾಯಕವಾಗಿ ವಿಜಯ ಪಡಿ, ನಾಗಮ್ಮ  ಕುರಿ, ಬಿ. ಕೆ. ಪಾಟೀಲ, ಚಾಂದಖಾನವರ, ಆಶಾ ಫರೀಟ್, ವೈ. ಬಿ. ಕಡಕೋಳ, ರೇಖಾ ಗಿರಿಯಪ್ಪಗೋಳ, ಅಭಿಷೇಕ ಪಾಟೀಲ, ಸಂಜಯ ಮಾಳಗಿ, ಎಸ್. ಎಂ. ನಾಯರ್ ಮೊದಲಾದವರು ನಿರ್ಣಾಯಕ ಪಾತ್ರ ವಹಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಆಶಾ ಫರೀಟ್ ಪ್ರಾರ್ಥನಾ ಗೀತೆ ಹೇಳಿದರು. ವ್ಹಿ. ಎಂ. ಮರಡಿ ಸ್ವಾಗತಿಸಿದರು. ಬಹುಮಾನ ವಿತರಣೆ ಕಾರ್ಯಕ್ರಮ ವನ್ನು ಶಿವಾನಂದ ಮಿಕಲಿ ನಡೆಸಿಕೊಟ್ಟರು. ಎಸ್. ಆರ್.ತೋಟಗಿ ನಿರೂಪಿಸಿದರು. ವ್ಹಿ. ಎಸ್. ಬಡಿಗೇರ ವಂದಿಸಿದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group