spot_img
spot_img

ವೇದಾಂತ ಫೌಂಡೇಶನ್ ವತಿಯಿಂದ 31 ಗ್ರಾಮಗಳ ದಂಪತಿಗಳಿಗೆ ಸ್ಮಾರ್ಟ್ ಕೃಷಿಕ ಪ್ರಶಸ್ತಿ ಪ್ರದಾನ

Must Read

- Advertisement -

ಬೆಳಗಾವಿ – ಕೃಷಿಕರು ಅಧಿಕ ಲಾಭ ಸಿಗುವ ಬೆಳೆಗಳನ್ನು ಬೆಳೆಸಲು ಇಚ್ಚಿಸುತ್ತಾರೆ. ಇದರಿಂದ ಕಬ್ಬಿನ ಗದ್ದೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕೇಂದ್ರ ಸರಕಾರದ ಧೋರಣೆಯಿಂದ ಮುಂದಿನ ದಿನಗಳಲ್ಲಿ ಕಬ್ಬಿಗೆ ಉತ್ತಮ ಬೆಲೆ ಸಿಗಬಹುದು. ಈ ದರವು ಐದು ಸಾವಿರದ ವರೆಗೂ ಹೋಗಬಹುದು ಎಂದು ವಿಧಾನ ಪರಿಷತ್ ನ ಮಾಜಿ ಸದಸ್ಯರಾದ ಮಹಾಂತೇಶ ಕವಟಗಿಮಠ ಇವರು ಅಭಿಪ್ರಾಯ ಪಟ್ಟರು.

ವೇದಾಂತ ಫೌಂಡೇಶನ್ ವತಿಯಿಂದ ದಿ.28ರಂದು ಮಹಿಳಾ ವಿದ್ಯಾಲಯದ ಸಭಾಗ್ರಹದಲ್ಲಿ ಸ್ಮಾರ್ಟ್ ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ನೆರವೇರಿತು. ಆ ಸಂದರ್ಭದಲ್ಲಿ ಅಧ್ಯಕ್ಷ ಭಾಷಣದಲ್ಲಿ ಅವರು ಹೀಗೆ ಹೇಳಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ಪರಿಸರದ 31ಕೃಷಿಕ ದಂಪತಿಗಳನ್ನು ಸನ್ಮಾನಿಸಲಾಯಿತು.

ಬೆಳಗಾವಿ ತಾಲ್ಲೂಕಿನ ಕೃಷಿಕರು ಕಬ್ಬಿನ ಕೃಷಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿದ್ದಾರೆ. ಆದರೆ ನಿರೀಕ್ಷಿತ ಫಸಲು ಸಿಗುತ್ತಿಲ್ಲ. ಆದುದರಿಂದ ಕೃಷಿಕರು ಆಧುನಿಕ ತಂತ್ರ ಜ್ಞಾನವನ್ನು ಪಡೆಯಬೇಕಾಗಿದೆ. ವಿಶ್ವದಲ್ಲಿ ಇಸ್ರೇಲಿನ ಕೃಷಿಯನ್ನು ಅತ್ಯಾಧುನಿಕ ಎಂದು ತಿಳಿಯಲಾಗಿದೆ. ಅಲ್ಲಿ ನೀರಿನ ಯೋಗ್ಯ ಉಪಯೋಗದೊಂದಿಗೆ ಆಧುನಿಕ ತಂತ್ರಜ್ಞಾನದ ಉಪಯೋಗವನ್ನು ಮಾಡಲಾಗಿದೆ. ಬೆಳಗಾವಿಯ ಪರಿಸರದಲ್ಲಿ ಅಧಿಕ ಪ್ರಮಾಣದಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಅವುಗಳಿಗೆ ಯೋಗ್ಯ ಬೆಲೆ ದೊರೆತರೆ ಕೃಷಿಕರು ಉತ್ತಮ ಜೀವನವನ್ನು ನಡೆಸಬಹುದು ಎಂದು ಅವರು ಹೇಳಿದರು.

- Advertisement -

ಕೃಷಿತಜ್ಞ  ಜಯವರ್ಧನ ಇವರು ಪಾರಂಪರಿಕ ಮತ್ತು ವ್ಯವಸಾಯದ ಕೃಷಿಯಲ್ಲಿ ವ್ಯತ್ಯಾಸವಿದೆ. ಅದನ್ನು ಪ್ರತಿಯೊಬ್ಬ ಕೃಷಿಕನು ತಿಳಿದುಕೊಳ್ಳಬೇಕು.ರೈತರು ಯಾವಾಗಲೂ ಬೆಳೆಗೆ ಸಂಬಂಧಿಸಿದ ಮಾಹಿತಿಗಳನ್ನು  ನಮೂದಿಸಿ ಇಡುವುದಿಲ್ಲ. ಕಬ್ಬಿನ ಪಾರಂಪರಿಕ ಪದ್ದತಿಯ ಕೃಷಿಯಿಂದ ಅಪೇಕ್ಷಿತ ಇಳುವರಿ ಸಿಗುವುದಿಲ್ಲ. ಜಮೀನಿನಲ್ಲಿ ಪೋಷಕ ಅಂಶಗಳು ಹೆಚ್ಚಾಗಿರಬೇಕು. ಕೃಷಿ ಮಾಡುವ ಮೊದಲೇ ಈ ವಿಚಾರಗಳನ್ನು ತಿಳಿದಿರಬೇಕು ಎಂದು ಹೇಳಿದರು.

ವೇದಾಂತ ಫೌಂಡೇಶನ್ ಅಧ್ಯಕ್ಷ ಸತೀಶ್ ಪಾಟೀಲ್ ಇವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕೆ. ಬಿ. ಪಾಟೀಲ್ ಇವರು ವರದಿ ವಾಚಿಸಿದರು. ವೀರೇಶ ಕಿವಡಸಣ್ಣವರ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜಸೇವಕ ಶಿವಾಜಿ ಕಾಗಣಿಕರ, ಡಾ. ಡಿ. ಎನ್. ಮಿಸಾಳೆ, ಡಾ. ಆರಿಫ್ ಶೇಖ, ರಾಮಕೃಷ್ಣ ಪತ್ತಾರ್, ಜಯಶ್ರೀ ಪಾಟೀಲ್, ಆಸ್ಮಾ ನಾಯಿಕ್, ಬಿಜಗರ್ಣಿ ಗ್ರಾ. ಪಂ. ಅಧ್ಯಕ್ಷ ಮನೋಹರ್ ಬೆಳಗಾವಕರ, ಎನ್. ಡಿ. ಮಾದಾರ, ಅಂಬಾಜಿ ಬರಾಟೆ ನಾರಾಯಣ ನಲವಡೆ ಮುಂತಾದವರು ಉಪಸ್ಥಿತರಿದ್ದರು.

ಶೋಭಾ ಪಾಟೀಲ್, ಮಾರುತಿ ತಮುಚೆ, ಸುನಿಲ್ ಪಾಟೀಲ್, ವಿಶ್ವನಾಥ್ ಪಾಟೀಲ್, ರಾಜಶ್ರೀ ಪಾಟೀಲ್, ರಾಮಲಿಂಗ ಬಾಬರ್, ಕೆ. ಬಿ. ಪಾಟೀಲ್, ಅನುರಾಧ ತಾರೀಹಾಳಕರ, ಸುಜಾತಾ ಲೋಖಂಡೆ, ಸುನಿಲ್ ದೇಸುರ್ಕರ್ ಮುಂತಾದವರು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

- Advertisement -

ಈ ಸಂದರ್ಭದಲ್ಲಿ ಈಶ್ವರ ಪಾಟೀಲ್ ಹಾಗೂ ಶೈಲಜಾ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

- Advertisement -

1 COMMENT

  1. ನಡೆದ ಕಾರ್ಯಕ್ರಮದ ಕುರಿತ ಬರಹ ತುಂಬಾ ಚೆನ್ನಾಗಿದೆ

Comments are closed.

- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group