spot_img
spot_img

ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ – ಬಿ ಇ ಓ ಹಿರೇಮಠ ಅಭಿಮತ

Must Read

- Advertisement -

ಬೆಳಗಾವಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ರಿ ಜಿಲ್ಲಾ ಘಟಕ ಬೆಳಗಾವಿ ಇದರ ವತಿಯಿಂದ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕ ಶಿಕ್ಷಕಿಯರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಗುರು ರತ್ನ, ಪ್ರಶಸ್ತಿ ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ಪ್ರಶಸ್ತಿ ಹಾಗು ಗಣ್ಯ ಮಾನ್ಯರ, ಸತ್ಕಾರ ಸಮಾರಂಭ ನಡೆಯಿತು

ಈ ಕಾರ್ಯಕ್ರಮದಲ್ಲಿ ಶಾಲೆಗೆ ಭೂದಾನ ಮಾಡಿದ ಶ್ರೀಮತಿ ಫಹಮೀದಾ ಬಾನು ಮನಿಯಾರ್ ಕ್ಯಾಸ್ಮಿ ಇವರಿಗೆ ಸನ್ಮಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಎಸ್ ಸಿ, ಎಸ್ ಟಿ  ಸಮಾನ ಮನಸ್ಕರ ಶಿಕ್ಷಕರ ವೇದಿಕೆ ಉದ್ಘಾಟನೆಯಾಯಿತು.

- Advertisement -

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಡೈಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ, ಡಾ.ರವಿ ಭಜಂತ್ರಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್ ಪಿ ದಾಸಪ್ಪನವರ, ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಲೀಲಾವತಿ ಹಿರೇಮಠರವರು ಆಗಮಿಸಿ ಮಾತನಾಡಿ, ಶಿಕ್ಷಕರು ಶಾಲೆಗಳ ಹಾಗೂ ವಿದ್ಯಾರ್ಥಿಗಳ ಪ್ರಗತಿಗೆ ನಿಷ್ಠೆ, ಪ್ರಾಮಾಣಿಕತೆ ಯ ಮನೋಭಾವನೆಯಿಂದ ಕಾರ್ಯ ನಿರ್ವಹಿಸಬೇಕು ಶೈಕ್ಷಣಿಕ ಪ್ರಗತಿಯೇ ಧ್ಯೇಯವಾಗಲಿ ಶಿಕ್ಷಕರ ವೃತ್ತಿ ಪವಿತ್ರ ಕಾರ್ಯವಾಗಿದೆ ಇಂದು ಶಿಕ್ಷಕರಿಗೆ ಸಮುದಾಯದ ಸಹಕಾರ ಬೇಕು ಎಂದು ಹೇಳಿ, ಇಂದು ಶಿಕ್ಷಕರ ಉತ್ತಮ ಕಾರ್ಯಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಡೈಟ್ ಉಪನ್ಯಾಸಕರಾದ ಬಸವರಾಜ ಕುಸಗಲ್ಲ, ಮಾಸ್ತಮರಡಿಯ ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ,ಶಿಕ್ಷಕ ಸಂಘದ ಚಂದ್ರು ಕೋಲಕಾರ, ಎಸ್ ಸಿ ಎಸ್ ಟಿ ಸಮಾನ ಮನಸ್ಕ ಶಿಕ್ಷಕರ ವೇದಿಕೆ ಅಧ್ಯಕ್ಷೆ ಸುಮಾ ದೊಡಮನಿ ಸಂಜು ಕೋಲಕಾರ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮೈಲಾರ ಹೊರಕೇರಿ ಕಿತ್ತೂರಿನ ದುಂಡಪ್ಪ ಹೊಳಿ, ವರದಿಗಾರ ರುದ್ರಪ್ಪ ಹುಬ್ಬಳ್ಳಿ ವಿಕಲಚೇತನ ನೌಕರರ  ಸಂಘದ ನಗರ ಘಟಕ ಅಧ್ಯಕ್ಷ ಎಮ್ ಬಿ ಮರಲಕ್ಕನವರ,ವಿವೇಕಾನಂದ ಹೊಳಿ ಗ್ರಾಮೀಣ ಶಿಕ್ಷಣ ಸಂಯೋಜಕರಾದ ರಾಜೇಂದ್ರ ಕುಮಾರ ಚಲವಾದಿ ಖಾನಾಪೂರ ತಾಲೂಕಾ ಅಧ್ಯಕ್ಷ ಬಸವರಾಜ ಮೇದಾರ, ಪ್ರಧಾನ ಕಾರ್ಯದರ್ಶಿ ಪ್ರವೀಣ ಪಾಳೇಕರ್,ಆರ್, ಆಯ್ ಮೆಟ್ಯಾಲಮಠ, ಎಸ್ ಎಸ್ ಕಿತ್ತೂರು, ಎಸ್ ಎಮ್ ಚೌಗಲೆ,ಬಡಿಗೇರ, ನದಾಫ, ಪೂರ್ಣಿಮಾ ಚಿಕಲೆ, ಎಸ್ ಎಸ್ ಬಾಳಿಗಟ್ಟಿ, ಪುಷ್ಪಾ ಖನ್ನಿನಾಯ್ಕರ್ ಜಾಧವರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಐವತ್ತನಾಲ್ಕು ಜನ ಶಿಕ್ಷಕ-ಶಿಕ್ಷಕಿಯರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಗುರು ರತ್ನ ಪ್ರಶಸ್ತಿ ನೀಡಲಾಯಿತು. ಆರಂಭದಲ್ಲಿ ಲಕ್ಷ್ಮಣ್ ಮೇತ್ರಿ, ಪ್ರಾರ್ಥಿಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ  ಸುರೇಶ ಸಕ್ರೆಣ್ಣವರರವರು ಪ್ರಾಸ್ತವಿಕವಾಗಿ ಸ್ವಾಗತಿಸಿದರು ಶಿಕ್ಷಕರಾದ ಮೆಳವಂಕಿ, ಮಾನೆಯವರು ಕಾರ್ಯಕ್ರಮ ನಿರೂಪಿಸಿದರು. ಸಮಾನ ಮನಸ್ಕ ಶಿಕ್ಷಕರ ವೇದಿಕೆ ಅಧ್ಯಕ್ಷರಾದ ಸುಮಾ ದೊಡಮನಿಯವರು ವಂದಿಸಿದರು.

- Advertisement -
- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group