ಬೀದರ ಜಿಲ್ಲೆಯಲ್ಲಿ ಬಿಜೆಪಿ ಧೂಳಿಪಟ ಆಗುತ್ತದೆ ; ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭವಿಷ್ಯ

Must Read

ಖಂಡ್ರೆಗೆ ಭವ್ಯ ಸ್ವಾಗತ, ಬಿಜೆಪಿಯಲ್ಲಿ ಢವಢವ !

ಬೀದರ್ – ಸ್ಥಳೀಯ ಬಿಜೆಪಿ ನಾಯಕರ ಅಧಿಕಾರದ ದರ್ಪ, ದುರ್ನಡತೆ, ಅಕ್ರಮ ಮತ್ತು ಸ್ವಜನ ಪಕ್ಷಪಾತದಿಂದ ಜಿಲ್ಲೆಯ ಜನತೆ ಬೇಸತ್ತಿದ್ದಾರೆ. ಹೀಗಾಗಿ ಬಹಿರಂಗವಾಗಿ ಕಾಂಗ್ರೆಸ್ ಪಕ್ಷಕ್ಕೆ, ಅಭ್ಯರ್ಥಿಗೆ ಸಮರ್ಥನೆ ಕೊಡುತ್ತೇವೆ ಅಂತ ಹೇಳುವ ಮುಖಾಂತರ ಔರಾದ ನಲ್ಲಿ ಎಲ್ಲಕಿಂತ ಹೆಚ್ಚು ಬೆಂಬಲ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಬೀದರ ಜಿಲ್ಲೆಯಲ್ಲಿ ಎಲ್ಲಾ‌ ಕಡೆ ಸುತ್ತಾಡಿದ್ದೇನೆ ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬೀಮರಾವ ಪಾಟೀಲಗೆ ಗೆಲುವು ಖಚಿತ ಆಗಿದೆ. ಜಿಲ್ಲೆಯಲ್ಲಿ ಬಿಜೆಪಿ ಧೂಳಿಪಟ ಆಗುತ್ತದೆ ಎಂದು ಈಶ್ವರ ಖಂಡ್ರೆ ಹೇಳಿದರು.

ಜಿಲ್ಲೆಯ ಔರಾದ ತಾಲೂಕಿಗೆ ಭೇಟಿ ನೀಡಿ ವಿಧಾನ ಪರಿಷತ್ ಸದಸ್ಯ ಸ್ಥಾನದ ಚುನಾವಣೆ ಪ್ರಚಾರದ ಸಂಬಂಧ ಸುಮಾರು 23 ಗ್ರಾಮಪಂಚಾಯತಗಳಿಗೆ ಕಾಂಗ್ರೆಸ್ ಮುಖಂಡ ಹುಮನಾಬಾದ ಕ್ಷೇತ್ರದ ಶಾಸಕ‌ ರಾಜಶೇಖರ ಪಾಟೀಲ ಹಾಗೂ ಪಕ್ಷ ಮುಖಂಡರ ಜೊತೆ ಔರಾದ ತಾಲೂಕಿನ ಎಲ್ಲಾ ಗ್ರಾಮಪಂಚಾಯತಿ ಯಲ್ಲಿ ಸುಮಾರು 300 ಗ್ರಾ.ಪಂ ಸದಸ್ಯರ ಪೈಕಿ 200ಕ್ಕೂ ಅಧಿಕ ಪಂಚಾಯಿತಿ ಸದಸ್ಯರು ಎಲ್ಲಾ ಗ್ರಾಮ ಪಂಚಾಯತ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಿದ್ದಾರೆ.ನಗರದ ಬಿಜೆಪಿ ನಾಯಕರಲ್ಲಿ ಈಗ ಢವ ಢವ ಪ್ರಾರಂಭ ಆಗಿದ್ದು ಎಂದ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಹೇಳಿದರು.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group