ದಿ. ದುಂಡಪ್ಪ ಚೌಕಶಿ ಸ್ಮರಣಾರ್ಥ ರಕ್ತದಾನ ಶಿಬಿರ

Must Read

ಗೋಕಾಕ – ಗೋಕಾಕ ನಾಡಿನ ರಾಜಕೀಯ, ಸಹಕಾರಿ ಧುರೀಣ, ಉಪ್ಪಾರ ಸಮಾಜದ ಹಿರಿಯ ಮುಖಂಡ, ಜಿಲ್ಲಾ ಪರಿಷತ್ ಮಾಜಿ ಸದಸ್ಯರು ಹಾಗೂ ಪ್ರಭಾಶುಗರ್ ನಿರ್ದೇಶಕರಾಗಿದ್ದ ಗೋಕಾಕ ತಾಲ್ಲೂಕಿನ ಬಡಿಗವಾಡ ಗ್ರಾಮದ ದಿವಂಗತ ದುಂಡಪ್ಪ ಮಲ್ಲಪ್ಪ ಚೌಕಶಿ ಯವರ “8ನೇ ಪುಣ್ಯ ಸ್ಮರಣೆ” ನಿಮಿತ್ತವಾಗಿ ಐಚ್ಚಿಕ ರಕ್ತದಾನ ಶಿಬಿರವನ್ನು ರೋಟರಿ ರಕ್ತ ಭಂಡಾರ ಹಾಗೂ ರೋಟರಿ ಸೇವಾ ಸಂಘ ಗೋಕಾಕ ಹಾಗೂ ಡಿ ಎಂ ಚೌಕಶಿ ಪ್ರತಿಷ್ಠಾನಗಳ ಜಂಟಿ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ 108 ಜನ ಚೌಕಶಿ ಕುಟುಂಬದ ಮಕ್ಕಳು ಹಾಗೂ ಹಿರಿಯರನ್ನ ಹೊರತು ಪಡಿಸಿ ಒಂದೆ ಕುಟುಂಬದ 23 ಜನ ರಕ್ತದಾನ ಮಾಡಿದರು ಇವರೊಂದಿಗೆ ಇನ್ನೂ ಅನೇಕ ಜನ ಬಂಧುಗಳು ಹಾಗೂ ಅಭಿಮಾನಿಗಳು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಗೋಕಾಕ ಕ್ಷೇತ್ರದ ಹಿರಿಯ ಮುಖಂಡರಾದ ಅಶೋಕ ಪುಜೇರಿ, ಘಟಪ್ರಭಾ ಪೋಲಿಸ್ ಇನ್ಸಪೆಕ್ಟರ್ ಬಸವರಾಜ ಕಾಮನಬೈಲ, ಜಿಲ್ಲಾ ಪಂಚಾಯಿತ ಮಾಜಿ ಸದಸ್ಯರಾದ ರಾಜು ಕತ್ತಿ, ಕುಮಾರ ಚೌಕಶಿ, ತಾಲೂಕ ಪಂಚಾಯತ ಮಾಜಿ ಸದಸ್ಯರಾದ ಈರಪ್ಪ ಸಂಪಗಾರ, ನಿಂಗಣ್ಣ ಮಾಳ್ಯಾಗೊಳ, ನಿಂಗಪ್ಪ ಕಮತಿ, ರೋಟರಿ ರಕ್ಕ ಭಂಡಾರದ ಸೋಮಶೇಖರ ಮಗದುಮ್ಮ, ಬಸವರಾಜ ಹುಳ್ಳೆರ, ಸುರೇಶ ಬಿರಾದಾರ ಪಾಟೀಲ, ಸಹೋದರಾದ ಕಲ್ಲಪ್ಪ ಚೌಕಶಿ, ಕೆಂಪಣ್ಣ ಚೌಕಶಿ ಪುತ್ರರಾದ ನ್ಯಾಯಾವಾದಿ ಮಲ್ಲಿಕಾರ್ಜುನ ಚೌಕಶಿ, ಯಲ್ಲಾಲಿಂಗ ಚೌಕಶಿ, ಶಿವಾನಂದ ಚೌಕಶಿ, ನಾಗರಾಜ ಚೌಕಶಿ, ಯುವ ಮುಖಂಡರಾದ ಪರಪ್ಪ ಗಿರೆಣ್ಣವರ, ಮಲ್ಲು ಸಂಪಗಾರ, ಮಲಿಕ ಅರಭಾವಿ, ಅವ್ವಣ್ಣ ಮದಿಹಳ್ಳಿ, ನೀಲಪ್ಪ ಜಾಗನೂರ, ಬಾಬು ಪಣಿಬಂಧ, ರಾಜು ಧುಮಾಳೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು. ವಿವಿಧ ಇಲಾಖೆ ಹಾಗೂ ಸಹಕಾರಿ ಸಂಘಗಳ ಅಧಿಕಾರಿ ವರ್ಗದವರು ಹಾಗೂ ಚೌಕಶಿ ಕುಟುಂಬ ವರ್ಗದವರು, ಬಡಿಗವಾಡ ಗ್ರಾಮದ ಸಮಸ್ತ ಗುರು ಹಿರಿಯರು ಆಪ್ತರು ಹಾಗೂ ಅಭಿಮಾನಿಗಳು ಹಾಜರಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group