ಪುಸ್ತಕ ಪರಿಚಯ : ಓದುಗರ ಹೃದಯಾಂತರಾಳದ ಪ್ರತಿಬಿಂಬ

Must Read

ಹೃದಯಾಂತರಾಳ: ಪುಸ್ತಕ ವಿಮರ್ಶೆ

ಸರಳ ಕನ್ನಡದಲ್ಲಿ ಗಹನವಾದ ವಿಷಯಗಳನ್ನು ಕಟ್ಟಿಕೊಡುವ ಪ್ರಯತ್ನ ಈ ಕವನ ಸಂಕಲನದಲ್ಲಿ ಕಂಡುಬರುತ್ತದೆ. ಓದುಗರಿಗೆ ತಮ್ಮದೇ ಅಂತರಾಳದ ಮಾತುಗಳಂತೆ ಭಾಸವಾಗುವುದು ಇಲ್ಲಿನ ಕವನಗಳ ವಿಶೇಷತೆ. ದಿನನಿತ್ಯದ ಬದುಕಿನ ಸಣ್ಣಪುಟ್ಟ ಘಟನೆಗಳಲ್ಲೂ ದರ್ಶನ ಪಡೆಯುವ ಕವಿಯ ಕಣ್ಣುಗಳು ಇಲ್ಲಿನ ಕವಿತೆಗಳಿಗೆ ಜೀವ ತುಂಬಿದ ಹಾಗೇ ಇವರ ಕವನಗಳು ಈ ಪುಸ್ತಕದಲ್ಲಿ ಪ್ರಕಟವಾಗಿದೆ.

ಆತ್ಮೀಯರಾದ ಆನಂದ ಸರ್ ಇವರ ಹೃದಯಾಂತರಾಳ ಕೃತಿಯು ಅಂತರಂಗದ ಮಿಡಿತಗಳಿಗೆ ಕನ್ನಡಿ ಹಿಡಿದಂತಿದೆ. ಈ ಪುಸ್ತಕದಲ್ಲಿರುವ ಕವನಗಳು ಸಾಮಾನ್ಯವಾಗಿ ಮನುಷ್ಯನ ಮನಸ್ಸಿನ ಆಳದ ತುಡಿತಗಳು, ಪ್ರೀತಿ, ವಿರಹ ಮತ್ತು ಜೀವನದ ಸಂಕೀರ್ಣ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ.

ಕವನ ಸಂಕಲನವು ಮನುಷ್ಯನ ಒಳಗಿನ ಸೂಕ್ಷ್ಮ ಸಂವೇದನೆಗಳು ಮತ್ತು ಭಾವನೆಗಳನ್ನು ಅತ್ಯಂತ ಸುಂದರವಾಗಿ ಬಿಂಬಿಸುತ್ತದೆ. ಈ ಕೃತಿಯಲ್ಲಿನ ಕವಿತೆಗಳು ಮುಖ್ಯವಾಗಿ ಪ್ರೀತಿ, ಸ್ನೇಹ, ಗುರುವಿನ ಬಗ್ಗೆ, ಶಿವನ ಬಗ್ಗೆ, ಸಂಗೊಳ್ಳಿರಾಯಣ್ಣನ ಬಗ್ಗೆ, ಕಿತ್ತೂರು ರಾಣಿ ಚೆನ್ನಮ್ಮನ ಬಗ್ಗೆ, ಬಸವಣ್ಣನ ಬಗ್ಗೆ, ಸಿದ್ದಗಂಗಾ ಮಠದ ಪೂಜ್ಯರ ಬಗ್ಗೆ, ಪ್ರಕೃತಿ ಕಲರವ ಬಗ್ಗೆ, ತಾಯಿಯ ಬಗ್ಗೆ, ಕನ್ನಡ ನಾಡು ನುಡಿಯ ಬಗ್ಗೆ, ಮತ್ತು ಕೌಟುಂಬಿಕ ಜೀವನದ ಆಳವಾದ ಅರ್ಥವನ್ನು ವಿವರಿಸುತ್ತವೆ. ಜೀವನದ ಸಣ್ಣಪುಟ್ಟ ಸಂಗತಿಗಳನ್ನು ಕವಿಯು ಎದೆಯಿಂದ ಎದೆಗೆ ದಾಟಿಸುವ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಸಾಲುಗಳು ಓದುಗರ ಮನಸ್ಸಿನಲ್ಲಿ ಭರವಸೆಯನ್ನು ಮೂಡಿಸುತ್ತವೆ. ಸರಳವಾದ ಭಾಷೆ ಮತ್ತು ಪ್ರಭಾವಶಾಲಿ ಶೈಲಿಯು ಈ ಸಂಕಲನದ ವಿಶೇಷತೆಯಾಗಿದ್ದು, ಆಧುನಿಕ ಜೀವನದ ಜಂಜಾಟದ ನಡುವೆ ಮಾನವೀಯ ಸಂಬಂಧಗಳ ಮಹತ್ವವನ್ನು ನೆನಪಿಸುತ್ತದೆ. ಭಾವಜೀವಿಗಳಿಗೆ ಮತ್ತು ಕಾವ್ಯಪ್ರೇಮಿಗಳಿಗೆ ಇದು ಖಂಡಿತವಾಗಿಯೂ ಆಪ್ತವೆನಿಸುವ ಕೃತಿಯಾಗಿದೆ.

ಎಲ್ಲಿ ತಪ್ಪಿದೆವು ನಾವು ಈ ಒಂದು ಕವನದಲ್ಲಿ ಎಲ್ಲಿ ತಪ್ಪಿದೆವು ಎಂಬ ಪ್ರಶ್ನೆ ಇಂದು ನಮ್ಮ ಸಮಾಜದ ಪ್ರತಿಯೊಂದು ಹಂತದಲ್ಲೂ ಕೇಳಿಬರುತ್ತಿದೆ. ನಾವು ತಾಂತ್ರಿಕವಾಗಿ ಬಹಳ ಪ್ರಗತಿ ಹೊಂದುತ್ತಿದ್ದರೂ, ನೈತಿಕವಾಗಿ ಮತ್ತು ಮಾನವೀಯತೆಯ ದೃಷ್ಟಿಯಿಂದ ಕುಸಿಯುತ್ತಿದ್ದೇವೆಯೇ ಎಂಬ ಆತಂಕ ಮೂಡುತ್ತಿದೆ. ಎಂಬ ವಿಷಯವನ್ನು ತುಂಬಾ ಸೊಗಸಾಗಿ ವಿವರಿಸಿದ್ದಾರೆ. ಜಗ ಬೆಳಗುವ ದೇವತೆ ಹೆಣ್ಣು ಕವನದಲ್ಲಿ ಜಗ ಬೆಳಗುವ ದೇವತೆ ಹೆಣ್ಣುಎಂಬ ಮಾತು ಅಕ್ಷರಶಃ ಸತ್ಯ, ಏಕೆಂದರೆ ಆಕೆ ಪ್ರೀತಿ, ತಾಳ್ಮೆ ಮತ್ತು ತ್ಯಾಗದ ಪ್ರತಿರೂಪ ಮನೆಯ ದೀಪವಾಗಿ ಸಂಸಾರವನ್ನು ಸಾಕಿ ಸಲಹುವ ಆಕೆ, ಸಮಾಜದ ಕಣ್ಣಾಗಿ ದಾರಿ ತೋರಿಸುತ್ತಾಳೆ. ಆಕೆಯ ಕನಸುಗಳಿಗೆ ರೆಕ್ಕೆ ನೀಡಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂಬ ವಿಷಯಗಳನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಹಾಗೆ ಕಣ್ಣೀರಿನ ಆತ್ಮೀಯತೆ ಎಂಬ ಕವನದಲ್ಲಿ ಕಣ್ಣೀರು ಕೇವಲ ನೋವಿನ ಹೊರಹರಿವಲ್ಲ; ಅದು ಪದಗಳಿಗೆ ನಿಲುಕದ ಭಾವನೆಗಳ ಅಭಿವ್ಯಕ್ತಿ. ಸೋತಾಗ ಸಾಂತ್ವನ ನೀಡುವ ಗೆಳೆಯನ ಹೆಗಲ ಮೇಲಿಟ್ಟ ಕಣ್ಣೀರು, ತಾಯಿಯ ಮಮತೆಯ ಮಡಿಲಲ್ಲಿ ಸುರಿಸುವ ಕಣ್ಣೀರು ಅಥವಾ ಪ್ರೀತಿಪಾತ್ರರ ಜೊತೆ ಹಂಚಿಕೊಳ್ಳುವ ಆನಂದಬಾಷ್ಪ – ಇವೆಲ್ಲವೂ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಮೌನವಾಗಿ ಹರಿಯುವ ಒಂದು ಹನಿ ಕಣ್ಣೀರು ಸಾವಿರಾರು ಮಾತುಗಳಿಗಿಂತ ಹೆಚ್ಚು ಆಪ್ತವಾಗಿ ಸಂವಹನ ಮಾಡಬಲ್ಲದು. ಸ್ವರ್ಗದಲ್ಲಿ ಸುಖವನ್ನು ಇಲ್ಲಿ ಅನುಭವಿಸುವ ಎಂದು ತುಂಬಾ ಸೊಗಸಾಗಿ ವಿವರಿಸಿದ್ದಾರೆ. ಹೀಗೆ ಎಲ್ಲಾ ಕವನಗಳಲ್ಲಿಯೂ ಕೂಡ ವಿಷಯಗಳು ಮನಮುಟ್ಟುವಂತೆ ವಿವರಿಸಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೆ ‘ಹೃದಯಾoತರಾಳ’ಎಂಬ ಅರ್ಥಪೂರ್ಣ ಕವನ ಸಂಕಲನವನ್ನು ಉಡುಗೊರೆಯಾಗಿ ನೀಡಿದ ಕವಿಯ ಸಾಧನೆ ನಿಜಕ್ಕೂ ಶ್ಲಾಘನೀಯ. ಕನ್ನಡಾಂಬೆಯ ಸೇವೆಯಲ್ಲಿ ತೊಡಗಿರುವ ನಿಮಗೆ, ತಾಯಿ ಭುವನೇಶ್ವರಿಯು ಮತ್ತಷ್ಟು ಸಾಹಿತ್ಯ ಕೃಷಿ ಮಾಡಲು ಹೆಚ್ಚಿನ ಶಕ್ತಿ ಮತ್ತು ಆಯುರಾರೋಗ್ಯವನ್ನು ನೀಡಲಿ ಎಂದು ಹಾರೈಸುತ್ತೇನೆ. ನಿಮ್ಮ ಲೇಖನಿಯಿಂದ ಇನ್ನೂ ನೂರಾರು ಪುಸ್ತಕಗಳು ಹೊರಬಂದು, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಲಿ. ಈ ಸಂಕಲನದ ಮೂಲಕ ನೀವು ಹೊರಹಾಕಿದ ಅಂತರಾಳದ ಧ್ವನಿ, ನಾಡಿನಾದ್ಯಂತ ಪಸರಿಸಲಿ. ಇವರ ಸಾಹಿತ್ಯಿಕ ಸಾಧನೆಯು ಕೇವಲ ವೈಯಕ್ತಿಕ ಬೆಳವಣಿಗೆಯಲ್ಲ, ಬದಲಿಗೆ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಸಾಕ್ಷಿಯಾಗಿದೆ. ಅಭಿನಂದನೆಗಳು ಸರ್.

ಮುತ್ತು ಯ. ವಡ್ಡರ
ಶಿಕ್ಷಕರು, ಹುನಗುಂದ
9845568484

LEAVE A REPLY

Please enter your comment!
Please enter your name here

Latest News

ಖಂಡ್ರೆ ವಿರುದ್ಧ ಮಾತನಾಡಿದರೆ ನಾಲಿಗೆ ಕತ್ತರಿಸುವೆ – ಕಾಂಗ್ರೆಸ್ ಕಾರ್ಯಕರ್ತನ ವಿಡಿಯೋ

ಬೀದರ - ನಗರದ ಪಾಪನಾಶ ಶಿವಲಿಂಗ ‌ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಇತ್ತೀಚೆಗೆ ಭಗವಂತ ಖೂಬಾ v/s ಖಂಡ್ರೆ ಟಾಕ್‌ವಾರ್ ನಡೆದ ಘಟನೆ ಇನ್ನೂ ಹಸಿರಾಗಿದೆಈ ಹಿನ್ನೆಲೆಯಲ್ಲಿ...

More Articles Like This

error: Content is protected !!
Join WhatsApp Group