ಬೆಳಗಾವಿ.ಹೊಂಬೆಳಕು ಸಾಂಸ್ಕೃತಿಕ ಸಂಘ ಹಾಗೂ ಶ್ರೀ ಚನ್ನ ಲೀಲಾ ಟ್ರಸ್ಟ್ ನವೋದಯ ನಗರ ಧಾರವಾಡ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ರಾಷ್ಟ್ರಕೂಟ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ, ಸನ್ಮಾನ ಶ್ರೀಮತಿ ಲೀಲ ಕಲಕೋಟಿ ವಿರಚಿತ ಮಹಾಮಹಿಮ ‘ಶ್ರೀ ಮಲ್ಲನಗೌಡರು’ ಕೃತಿ ಲೋಕಾರ್ಪಣೆ ಮತ್ತು ಕವಿಗೋಷ್ಠಿ ದಿ.೧೧ ರಂದು ಕನ್ನಡ ಸಾಹಿತ್ಯ ಭವನ ಚನ್ನಮ ಸರ್ಕಲ್ ಬೆಳಗಾವಿಯಲ್ಲಿ ಜರುಗಿತು
ಅಧ್ಯಕ್ಷತೆಯನ್ನು ಸಾಹಿತಿ ಸ.ರಾ.ಸುಳಕೂಡೆ. ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಲೀಲಾ ಕಲಕೋಟಿ ಹಿರಿಯ ಸಾಹಿತಿಗಳು ಧಾರವಾಡ ಆಗಮಿಸಿದ್ದರು. ಪ್ರಶಸ್ತಿ ಪ್ರದಾನ ಮತ್ತು ಕೃತಿ ಬಿಡುಗಡೆಯನ್ನು ವಿದ್ಯಾಧರ ಮುತಾಲಿಕ ದೇಸಾಯಿ ಅವರು ಮಾಡಿದರು.
ವಿಶೇಷ ಆಮಂತ್ರಿತರಾಗಿ ಡಾಕ್ಟರ್ ಅನುಪಮಾ ಖೋತ, ಡಾ ಬಿ ಜಿ ಕಾಲಿಮಿಚಿ೯ ಆಗಮಿಸಿದ್ದರು ಪುಸ್ತಕ ಪರಿಚಯವನ್ನ ಡಾ. ಸರಸ್ವತಿ ಕಳಸದ ಹಿರಿಯ ಸಾಹಿತಿಗಳು ಹುಬ್ಬಳ್ಳಿ ಅವರು ಮಾಡಿದರು ಮಾಲತಿ ವಸಂತ ಮುದಕವಿ, ಡಾ. ಅಶೋಕ್ ನರೋಡೆ, ಅರುಣಾ ನರೇಂದ್ರ , ಲೀಲಾ ಅ. ರಜಪೂತ, ಡಾ. ಪ್ರೇಮಾನಂದ ಟಿ ಲಕ್ಕಣ್ಣವರ್, ಅಂದಾನಪ್ಪ ವಿಭೂತಿ, ಕೆ ಎಮ್ ರೂಪಕಲಾ, ಎ ಬಿ ದಿವಾಕರ ಬಲ್ಲಾಳ, ಮಾಲಾ ಅಕ್ಕಿ ಶೆಟ್ಟಿ,ಸಂತೋಷ್ ನಾಯಕ್, ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಮಾಡಿದರು. ರಾಮಚಂದ್ರ ಬಲವಂತ ರಾವ್ ದೋಂಗಡೆ ಹಿರಿಯ ನಾಗರಿಕರು ಮತ್ತು ಸಾಹಿತಿಗಳು ಧಾರವಾಡ ಇವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ನಂತರ ಕವಿಗೋಷ್ಠಿ ನಡೆಯಿತು. ಅಧ್ಯಕ್ಷತೆಯನ್ನ ಶಶಿಕಲಾ ಲಕ್ಷ್ಮಣರಾವ್ ಪಾವಸೆ, ಅವರ ವಹಿಸಿದ್ದರು ಬಿ. ಎಚ. ಶಿಗಿಹಳ್ಳಿ, ಇಂದಿರಾ ಮೋಟೆಬೆನ್ನೂರ್, ಅನುರಾಧ ಕಂಚಿರ ಜಹಾನ್ ಕೋಳೂರು, ಇಂದಿರಾ ಹೋಳ್ಕರ್, ಶಾರದಾ ಜೆ ಕೆ, ರಾಜೇಶ್ವರಿ ಹೆಗಡೆ, ಮಮತಾ ಶಂಕರ, ಡಾ. ಅಡಿವಪ್ಪ ಐಟಗಿ, ಪ್ರಸಾದ್ ಕುಲಕರ್ಣಿ, ಡಾ. ಶೋಭಾ ಆರ್ ಬನಶಂಕರಿ, ನಿರ್ಜಾ ಗಣಾಚಾರಿ, ಶ್ರೀಕಾಂತ ದೇವಲತ್ತಿ , ಸುರೇಶ ರಾಜಾಮಾನೆ, ಮಂಜುಳಾ.ಬ. ಕುಶಪ್ಪನವರ, ಕವನ ವಾಚನ ಮಾಡಿದರು ಅಶೋಕ.ಉಳ್ಳೆಗಡ್ಡಿ, ಸ್ವಾಗತಿಸಿದರು ಎಂ ವೈ ಮೆಣಸಿನಕಾಯಿ, ಕೊನೆಯಲ್ಲಿ ವಂದಿಸಿದರು. ನೀರಜಾ ಗಣಾಚಾರಿ, ವೀರಭದ್ರ ಅಂಗಡಿ ನಿರೂಪಿಸಿದರು.