ಸಿಂದಗಿ: ನಿಜವಾದ ಜೀವನದ ಬಗ್ಗೆ ಪರಿಕಲ್ಪನೆ ನೀಡುವ ನಮ್ಮ ಭಾವನೆ ಗಳನ್ನು ನಿರ್ಮಲವಾಗಿರಿಸುವಂಥ ಇದು ಎಲ್ಲ ಧರ್ಮಗಳ ರಾಷ್ಟ್ರಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಸಿಮಿತಗೊಳ್ಳದ ಜಾಗತಿಕ ವಿಶ್ವಸಂಸ್ಥೆಯಾಗಿದೆ ಅಲ್ಲದೆ ನಾರಿ ಸ್ವರ್ಗಕ್ಕೆ ದಾರಿ ಎನ್ನುವಂತೆ ಜಾಗತಿಕ ನೆಲಗಟ್ಟಿನಲ್ಲಿ ನಾರಿಯರಿಂದಲೇ ನಡೆಯಲ್ಪಡುವ ಏಕೈಕ ಸಂಸ್ಥೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ಸಂಸ್ಥೆಯಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷರಾದ ಹಾಸಿಮಪಿರ ವಾಲಿಕಾರ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಶಿವಸ್ಮೃತಿ ಕವಿಗೋಷ್ಠಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರಿಗೆ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುತ್ತಿರುವ ಏಕೈಕ ಸಂಸ್ಥೆ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆ ಈ ಸಂಸ್ಥೆಯಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಅರ್ಥಪೂರ್ಣ ವಾಗಿ ಆಚರಿಸುತ್ತಿರುವುದು ಅಲ್ಲದೆ ಎಲ್ಲ ಹಬ್ಬಗಳು ಹಗಲು ಹೊತ್ತಿನಲ್ಲಿ ಆಚರಿಸಿದರೆ ಇಡೀ ಬೆಳಕನ್ನು ಬಿಂಬಿಸುವ ರಾತ್ರಿ ಹೊತ್ತಿನಲ್ಲಿ ಆಚರಿಸುವ ಏಕೈಕ ಹಬ್ಬ ಮಹಾಶಿವರಾತ್ರಿ ಹಬ್ಬವಾಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ ರಾಜಯೋಗಿನಿ ಬ್ರಹ್ಮಾಕುಮಾರಿ ಪವಿತ್ರಾ ಅಕ್ಕನವರು, ಅಧ್ಯಕ್ಷತೆ ವಹಿಸಿದ ವಿಜಯಪುರದ ಸಾಹಿತಿ ವಿದ್ಯಾವತಿ ಅಂಕಲಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿದರು.
ಮನಗೂಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಎಸ್.ಐ.ಬಿರಾದಾರ ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ಬಸವರಾಜ ಅಗಸರ. .ಎಸ್.ವಾಯ್.ಬಿರಾದಾರ. ಪದ್ಮಾರವಿ ಹಿರೇಕುರಬರ. ಈರನಗೌಡ ಹಂದಿಗನೂರ.ಸಂಗನಗೌಡ ಹಚ್ಚಡದ.ಮಲ್ಲಿಕಾರ್ಜುನ ಧರಿ. ಮಾಹಾದೇವಿ ಹಿರೇಮಠ. ಎಂ.ಆರ್.ಡೋಣಿ. ಶಿವಕುಮಾರ ಶಿವಸಿಂಪಗೇರ. ಶಿವಾನಂದ ಗುಗ್ಗರಿ. ಶ್ರೀಮಂತ ಹೊಳಿ. ಅಶೋಕ ಬಿರಾದಾರ. ರಾಜು ಕೊಪ್ಪಾ.ಬಸವರಾಜ ಬೋರಗಿ. ಈರನಗೌಡ ಪಾಟೀಲ. ಶೈಲಶ್ರೀ ನ್ಯಾಮಣ್ಣನವರ ಸೇರಿದಂತೆ ಕವಿಗಳು ತಮ್ಮಸ್ವ ರಚಿತ ಶಿವಸ್ಮೃತಿ ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು.
ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಮೇಘಾ ಶಿವ ಸ್ಮೃತಿ ನೃತ್ಯದ ಮೂಲಕ ಪ್ರಾರ್ಥನೆಗೆ ಹೆಜ್ಜೆ ಹಾಕಿದಳು. ಶಿಕ್ಷಕ ಸಿದ್ಧಲಿಂಗ ಚೌಧರಿ ನಿರೂಪಿಸಿದರು. ಎಸ್.ಎಸ್.ಬುಳ್ಳಾ ವಂದಿಸಿದರು.