ಬೀದರ: ಜಿಲ್ಲೆಯ ಭಾಲ್ಕಿ ಯಿಂದ ಹೊರಟ ಬಸ್ 20 ಕಿಲೋಮೀಟರ್ ಮಾತ್ರ ತಲುಪಿದ್ದು ಬಸ್ ಕಂಡಕ್ಟರ್ ಇನ್ನೂ ಬಸ್ ನಲ್ಲಿ ಇದ್ದ ಪ್ರಯಾಣಿಕರ ಟಿಕೆಟ್ ತೆಗೆದು ಕೊಳ್ಳುವ ಸಂದರ್ಭದಲ್ಲಿ ಮೇಲಧಿಕಾರಿ ತಪಾಸಣೆ ಮಾಡುವಾಗ ಒಬ್ಬ ಮಹಿಳೆ ಮಾತ್ರ ಬಸ್ ನಲ್ಲಿ ಟಿಕೆಟ್ ತೆಗೆದುಕೊಂಡಿಲ್ಲ ಎಂಬ ಕಾರಣಕ್ಕೆ ಹತ್ತು ಸಾವಿರ ದಂಡವನ್ನು ಕಂಡಕ್ಟರ್ ಮೇಲೆ ಹಾಕಿದ ಹಿನ್ನೆಲೆಯಲ್ಲಿ ಬೀದರ್ ವಿಭಾಗೀಯ ಘಟಕ ಕಾರ್ಯಾಲಯದಲ್ಲಿ ಬಸ್ ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದರು.
ಬಸ್ ಕಂಡಕ್ಟರ್ ಹೇಳಿಕೆ ಪ್ರಕಾರ ಕೆಎಸ್ ಆರ್ ಟಿಸಿ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ತಾನು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಹೇಳಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಜಿಲ್ಲಾ ವಿಭಾಗೀಯ ಕಚೇರಿಯಲ್ಲಿ ಈ ಹೈಡ್ರಾಮ್ ನಡೆಯಿತು.
ಭಾಲ್ಕಿ ಯಿಂದ ಹೈದ್ರಾಬಾದ್ ಬಸ್ ಮೇಲೆ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿರುವ ರಾಮಕೃಷ್ಣ ಎಂಬ ಸಿಬ್ಬಂದಿಗೆ ಬಸ್ ಪರಿಶೀಲನೆ ನಡೆಸುವ ಮೂಲಕ ಓರ್ವ ಮಹಿಳೆಯ ಟಿಕೆಟ್ ನೀಡಿಲ್ಲ ಎಂದು ಆರೋಪಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಏಕಾಂಗಿಯಾಗಿ ಪ್ರತಿಭಟನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ ಕಂಡಕ್ಟರ್ ರಾಮಕೃಷ್ಣ. ನನಗೆ ನ್ಯಾಯ ಬೇಕು ಕಿರುಕುಳ ನೀಡುವ ಮೂಲಕ ನನ್ನನ್ನು ಅಮಾನತು ಮಾಡಲು ಮುಂದಾಗಿರುವದು ಯಾವ ನ್ಯಾಯ ಎಂದು ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ.
ಅಲ್ಲಿಯೇ ಇದ್ದ ಸಿಬ್ಬಂದಿ ರಾಮಕೃಷ್ಣ ಅವರ ಆತ್ಮಹತ್ಯಾ ಪ್ರಯತ್ನಕ್ಕೆ ತಡೆ ಹಾಕಿದ್ದು ಮುಂದಿನ ವಿಚಾರಣೆ ನಡೆಸಲಾಗಿದೆ.
ವರದಿ: ನಂದಕುಮಾರ ಕರಂಜೆ,