ಹುನಗುoದ ಘಟಕದಿಂದ ಕಂಟ್ರಾಕ್ಟರ್ ಮತ್ತು ಪರೀಟ ಅವರಿಗೆ ಸನ್ಮಾನ : ಅಧಿಕಾರಿಗಳೊಂದಿಗೆ ಸಹನೆ, ಪ್ರೀತಿಯಿಂದ ನಡೆದುಕೊಳ್ಳಿ
ಹುನಗುಂದ: ರಾಜಕೀಯ ಪ್ರಭಾವ ಮತ್ತು ಒತ್ತಡದಿಂದ ನಿಜವಾದ ಗುತ್ತಿಗೆದಾರರಾಗಲು ಸಾಧ್ಯವಿಲ್ಲ. ಅಧಿಕಾರಿಗಳೊಂದಿಗೆ ಸಹನೆ,ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡುವವರೇ ನಿಜವಾದ ಗುತ್ತಿಗೆದಾರರು ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಕಾರ್ಯಕಾರಿಣಿ ಸಮಿತಿ ನೂತನ ಸದಸ್ಯ ಮೆಹಬೂಬ ಕಂಟ್ರಾಕ್ಟರ ಹೇಳಿದರು.
ಮಂಗಳವಾರ ಪಟ್ಟಣದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಹುನಗುಂದ ತಾಲೂಕ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಕಾರ್ಯಕಾರಿಣಿ ಸಮಿತಿಯ ನೂತನ ಸದಸ್ಯ ಮೆಹಬೂಬ ಕಂಟ್ರಾಕ್ಟರ ಮತ್ತು ಎಸ್ಕಾಂ ವ್ಯಾಪ್ತಿಯ ಪ್ರತಿನಿಧಿ ಮಹೇಶ ಪರೀಟ ಅವರ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಅಭೂತಪೂರ್ವ ಗೆಲುವಿಗೆ ಹುನಗುಂದ ತಾಲೂಕಿನ ಗುತ್ತಿಗೆದಾರರೇ ಕಾರಣ. ಅದರಲ್ಲೂ ೧೦೨ ಮತ್ತು ೧೦೩ನೇ ಸರ್ವಸಾಧಾರಣ ಸಭೆಯನ್ನು ಹುನಗುಂದದಲ್ಲಿ ಆಯೋಜಿಸಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದರಿಂದ ನಾನು ರಾಜ್ಯದಲ್ಲಿ ಗುರುತಿಸಿ ಇಂದು ಕೇಂದ್ರ ಕಾರ್ಯಕಾರಿಣಿ ಸಮಿತಿಗೆ ಆಯ್ಕೆಯಾಗಲು ಸಾಧ್ಯವಾಗಿದೆ. ಹೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮಧ್ಯ ಅವಿನಾಭವ ಸಂಬಂಧವಿರಬೇಕು. ನಾವು ಕೆಲಸ ಮಾಡುವ ಮುಂಚೆ ಪವರ್ ಮೆನ್ ಮತ್ತು ಶಾಖಾಧಿಕಾರಿಗಳ ಅನುಮತಿ ಪಡೆದಾಗ ಮಾತ್ರ ನಮ್ಮ ಕೆಲಸ ಸುರಳಿತವಾಗಿ ನಡೆಯಲು ಸಾಧ್ಯ.ಕೆಲವು ನ್ಯೂಯತೆಗಳಿಂದ ಅವಘಡ ಸಂಭವಿಸಿದಾಗ ಲೈಮನ್ ಮತ್ತು ಅಧಿಕಾರಿಗಳನ್ನು ಹೊಣೆ ಮಾಡುವುದನ್ನು ಬಿಡಬೇಕು. ಅಧಿಕಾರಿ ವರ್ಗವು ಕೂಡಾ ಗುತ್ತಿಗೆದಾರರಿಗೆ ಸಹಕಾರ ನೀಡಬೇಕು ಎಂದರು.
ಹೆಸ್ಕಾಂ ವ್ಯಾಪ್ತಿಯ ಪ್ರತಿನಿಧಿ ಮಹೇಶ ಪರೀಟ ಮಾತನಾಡಿ ಹೆಸ್ಕಾಂ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವಿವಿಧ ವಿಭಾಗದ ಅಧಿಕಾರಿ ವರ್ಗ ಮತ್ತು ಗುತ್ತಿಗೆದಾರರು ಒಂದೇ. ಆದರೆ ಕೆಲವೊಬ್ಬ ಗುತ್ತಿಗೆದಾರರು ಈ ಹೊಂದಾಣಿಕೆ ಸಂಬAಧವನ್ನು ಕೆಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಸ್ಕಾಂ ಎಇಇ ದವಲಸಾಬ ನದಾಫ್ ಮಾತನಾಡಿ ಮೆಹಬೂಬ ಕಂಟ್ರಾಕ್ಟರ ಗುತ್ತಿಗೆದಾರರ ಸಂಘದ ಕೇಂದ್ರ ಸಮಿತಿಯ ಸದಸ್ಯರಾಗಿದ್ದು ನಿಜಕ್ಕೂ ಖುಷಿ ತಂದಿದೆ. ಅವರು ಮುಂದಿನ ದಿನಗಳಲ್ಲಿ ಸಂಘದ ರಾಜ್ಯಾಧ್ಯಕ್ಷರಾಗಲಿ ಎಂದು ಶುಭ ಹಾರೈಸಿದರು.
ಶಾಖಾಧಿಕಾರಿಗಳಾದ ದತ್ತು ದಾಯಿಗುಡಿ, ಇಬ್ರಾಹಿಂ ಮ್ಯಾಗೇರಿ, ಗೋಪಾಲ ಪೂಜಾರಿ, ಮಹಮ್ಮದ್ ಅಲಿ ಕಂಟ್ರಾಕ್ಟರ, ಮಾರುತಿ ಲಮಾಣಿ ಮಾತನಾಡಿದರು.
ಈ ವೇಳೆ ಅಧಿಕಾರಿಗಳನ್ನು, ಪವರ್ ಮ್ಯಾನ್ ಹಾಗೂ ವಿವಿಧ ಗಣ್ಯರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಖಜಾಂಚಿ ರಮೇಶ ಹಿರೇಮನಿ, ಕಾರ್ಯಧ್ಯಕ್ಷ ಮಹಾಂತೇಶ ಕರ್ಜಗಿ, ರಮೇಶ ನಾಯಕ,ಎ. ಎಲ್. ಮುಜಾವರ,ಮಹಾಂತೇಶ ಹೊಸಮನಿ ಸೇರಿದಂತೆ ಅನೇಕರು ಇದ್ದರು. ಶಿವು ಕುಮಟಗಿ ಸ್ವಾಗತಿಸಿದರು, ನಬಿ ಹಿರೇಮನಿ ನಿರೂಪಿಸಿ ವಂದಿಸಿದರು.
ಹುನಗುಂದದಲ್ಲಿ ಸ್ಮಾರ್ಟ್ ಮೀಟರ್ ಔಟಲೇಟ್ ಸ್ಥಾಪಿಸಿ
ನಾವು ಸದ್ಯ ಸ್ಮಾರ್ಟ್ ಮೀಟರಗಳನ್ನು ಬಾಗಲಕೋಟೆಯಿಂದ ತರಬೇಕಿದೆ. ಅದು ದೂರಾಗಿದ್ದು ಅದರ ಔಟ್ ಲೆಟನ್ನು ಹುನಗುಂದಕ್ಕೆ ಮಾಡಬೇಕು. ನಮ್ಮ ಕೆಲವೊಬ್ಬರು ಗುತ್ತಿಗೆದಾರರು ಬೇರೆ ಸಂಘದಲ್ಲಿ ಗುರುತಿಸಿಕೊಂಡಿದ್ದರೂ ಅವರು ನಮ್ಮವರೆಂದು ಪರಿಗಣಿಸಬೇಕು.
ಸುಲೇಮಾನ ಬಂಗಾರಚುಕ್ಕಿ. ಅಧ್ಯಕ್ಷರು.ತಾಲೂಕ ಘಟಕ ಹುನಗುಂದ.

