ಹಳ್ಳೂರ ಪಿಕೆಪಿಎಸ್ ಚುನಾವಣೆಗೆ ಅಭ್ಯರ್ಥಿಗಳ ಭರ್ಜರಿ ಪ್ರಚಾರ   

Must Read

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ದಿ 22 ರಂದು ನಡೆಯಲಿರುವ ಪಂಚವಾರ್ಷಿಕ  ಚುನಾವಣೆಯಲ್ಲಿ ಒಟ್ಟು 23 ಜನ ನಾಮಪತ್ರ ಸಲ್ಲಿಸಿದ್ದಾರೆ.

ಪರಿಶಿಷ್ಟ ಜಾತಿಯ ವರ್ಗದಲ್ಲಿ  ರಾಜು ತಳವಾರ ಅವಿರೋಧ ಆಯ್ಕೆಯಾಗಿದ್ದಾರೆ. ಮಂಗಳವಾರದಂದು ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಎರಡು ಪೆನಲದವರು ದೇವಿಗೆ ಪೂಜೆ ಸಲ್ಲಿಸಿ ಪ್ರಚಾರ ಕರಪತ್ರ ಬಿಡುಗಡೆಗೊಳಿಸಿದರು. ನಂತರ ಎರಡು ಪೆನಲದವರು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರತಿ ಸಲಕ್ಕಿಂತ ಈ ವರ್ಷ ತೀವ್ರ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಒಳಒಳಗೆ ಗುಂಪು ಸಭೆ ನಡೆಸಿ ತಂತಮ್ಮ ಪೆನಲದವರನ್ನು ಗೆಲ್ಲಿಸಬೇಕೆಂದು ಶತ ಪ್ರಯತ್ನ ನಡೆದಿದೆ. ಇದರಲ್ಲಿ ಯಾರ ಪ್ರತಿಷ್ಠೆ   ಜನ ಬೆಂಬಲ, ಮತ್ತೇನು ಅವಲಂಬಿಸಿ ಯಾರ ಕೈ ಹಿಡಿದು ಮೇಲುಗೈ ಸಾಧಿಸುತ್ತಾರೆಂದು ಕಾದು ನೋಡಬೇಕಾಗಿದೆ.                        ಸಾಲಗಾರ ಸಾಮಾನ್ಯ ಸ್ಥಾನಕ್ಕೆ ಗಿರಮಲ್ಲಪ್ಪ ಕೌಜಲಗಿ, ಸುರೇಶ ಕತ್ತಿ, ಹಣಮಂತ ತೇರದಾಳ, ಚಂದ್ರಶೇಖರ ಸಪ್ತಸಾಗರ, ಮಹೇಶ ಸಂತಿ, ಕಾಂತು ಲೋಕನ್ನವರ, ರಮೇಶ ಲೋಕನ್ನವರ, ಹೊಳೆಪ್ಪ ಪಾಲಬಾಂವಿ, ಗುರುನಾಥ ಬೋಳನ್ನವರ, ಯಾದಪ್ಪ ನಿಡೋಣಿ ಮತ್ತು ಮಹಾವೀರ ಛಬ್ಬಿ. ಸಾಲಗಾರ ಹಿಂದುಳಿದ “ಅ” ವರ್ಗ ಸ್ಥಾನಕ್ಕೆ ಬಸಪ್ಪ ದುರದುಂಡಿ, ತುಕಾರಾಮ ಕುರಬರ,ಸನದಿ.   ಸಾಲಗಾರ ಹಿಂದುಳಿದ “ಬ” ವರ್ಗ ಸ್ಥಾನಕ್ಕೆ ಪುಂಡಲೀಕ ಹೊಸಟ್ಟಿ. ಬಾಳಪ್ಪ ನೇಸೂರ. ಸಾಲಗಾರ ಮಹಿಳಾ ಮಹಿಳಾ ಸ್ಥಾನಕ್ಕೆ ರತ್ನವ್ವ ಕೌಜಲಗಿ, ಸುವರ್ಣಾ ಪಾಲಬಾಂವಿ, ನೀಲವ್ವ ಕೌಜಲಗಿ ಮತ್ತು ಕಲಾವತಿ ಲಿಂಗದ. ಸಾಲಗಾರ ಪರಿಶಿಷ್ಟ ಜಾತಿ ಚಂದ್ರಕಾಂತ ಮಾವರಕರ ಮತ್ತು ರೇವಪ್ಪ ಸಿಂಪಿಗೇರ.

ಬಿನ್ ಸಾಲಗಾರ ಸ್ಥಾನಕ್ಕೆ ಸುರೇಶ ಡಬ್ಬನ್ನವರ, ಬಾಳಪ್ಪ ಶಿವಾಪೂರ, ಒಟ್ಟು 23 ಜನ ಚುನಾವಣಾ ಕಣದಲ್ಲಿ ಉಳಿದು ಸ್ಪರ್ಧೆ ಮಾಡುತ್ತಿದ್ದಾರೆ. ಎಂದು ಚುನಾವಣೆ ರಿಟರ್ನಿಂಗ ಅಧಿಕಾರಿ ಪಿ‌. ವಾಯ್. ಕೌಜಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group