ಬೆಂಗಳೂರು – ಬಿಸಿ ನೀರು ಕಾಯಿಸುವ ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ತಾಯಿ, ಮಗಳು ಮೃತಪಟ್ಟ ಘಟನೆ ಬೆಂಗಳೂರಿನ ಚಿಕ್ಕಬಾಣಾವರದ ಮನೆಯೊಂದರಲ್ಲಿ ಸಂಭವಿಸಿದೆ.
ಸ್ಥಳೀಯ ನಿವಾಸಿ ಮಂಗಳಾ(35) ಹಾಗೂ ಅವರ ಮಗು ಗೌತಮಿ (7) ಮೃತಪಟ್ಟವರು. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರದವರೆನ್ನಲಾದ ಮಂಗಳಾ, ಪತಿ ನರಸಿಂಹಮೂರ್ತಿ ಜೊತೆ ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಚಿಕ್ಕಬಾಣಾವರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನರಸಿಂಹಮೂರ್ತಿ ಅವರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಮಗು ಗೌತಮಿಗೆ ಸ್ನಾನ ಮಾಡಿಸಲು ಮಂಗಳಾ ಹೋಗಿದ್ದರು. ಗ್ಯಾಸ್ ಗೀಸರ್ ಆನ್ ಮಾಡಿ ಬೀಸಿನೀರಿನಿಂದ ಸ್ನಾನ ಮಾಡಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿದ್ದರಿಂದ ಯಾಯಿ ಮಗಳು ಉಸಿರಾಡಲು ಸಾಧ್ಯವಾಗದೇ ಪ್ರಜ್ಞೆ ತಪ್ಪಿ ಬಿದ್ದಿದ್ದರು.
ಎಷ್ಟೊತ್ತಾದರೂ ಮಂಗಳಾ ಅವರು ಮನೆಯಿಂದ ಹೊರಗೆ ಬಂದಿರಲಿಲ್ಲ. ಆದ್ದರಿಂದ ಏನಾಯಿ ತೆಂದು ಕೇಳಲು ಮನೆಯ ಮಾಲೀಕರು ಮನೆಯೊಳಗೆ ಹೋಗಿದ್ದಾಗಲೇ ವಿಷಯ ಗೊತ್ತಾಗಿದೆ. ಆದರೆ ಅಷ್ಟರಲ್ಲಿ ಅವರುಗಳ ಪ್ರಾಣ ಹೋಗಿತ್ತು ಎನ್ನಲಾಗಿದೆ. ತಾಯಿ-ಮಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.