ತೊಂಡಿಕಟ್ಟಿ ಗ್ರಾ.ಪಂ ಅಧ್ಯಕ್ಷರಾಗಿ ಚಿಕ್ಕೂರ ಅವಿರೋಧ ಆಯ್ಕೆ

Must Read

ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ತೊಂಡಿಕಟ್ಟಿ ಗ್ರಾಮ ಪಂಚಾಯತಿಗೆ ಮಂಗಳವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಕೇಶ ದ್ಯಾವಪ್ಪ ಚಿಕ್ಕೂರ ಹಾಗೂ ಉಪಾಧ್ಯಕ್ಷರಾಗಿ ಶಾಂತವ್ವ ಗುರುಪಾದ ಅಮ್ಮೊಜಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಮದುರ್ಗದ ನೀರಾವರಿ ಇಲಾಖೆಯ ಅಧಿಕಾರಿ ಗಂಗಾಧರ ಕೋಮನವರ ತಿಳಿಸಿದ್ದಾರೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ತೊಂಡಿಕಟ್ಟಿಯ ರಾಕೇಶ ಚಿಕ್ಕೂರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಜಗುಪ್ಪಿಯ ಶಾಂತವ್ವ ಅಮ್ಮೊಜಿ ಅವರು ಮಾತ್ರ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ರಾಮಕೃಷ್ಣ ದೇಸಾಯಿ, ಚೈತ್ರಾ ಅತ್ತಾಲಟ್ಟಿ, ಲಕ್ಷ್ಮೀ ಲೆಂಕೆನ್ನವರ,ಸುಶೀಲವ್ವ ಪೂಜೇರಿ, ಮಹಾದೇವಿ ಮಾದರ, ಭೀಮಪ್ಪ ಮಾದರ, ದ್ಯಾವಕ್ಕ ಬಂತಿ, ಪತ್ರೆಪ್ಪ ನರಗುಂದ ಪತ್ರೆಪ್ಪ ಕೊಪ್ಪದ, ಪಿಡಿಒ ರಾಮನಗೌಡ ಪಾಟೀಲ, ಕಾರ್ಯದಶಿ ಮಂಜುಳಾ ಪಾಟೀಲ, ಗಣ್ಯರಾದ ವೆಂಕಣ್ಣ ಸೊಗನಾದಗಿ, ಸುಭಾಸ ಹಲಗಲಿ, ರುದ್ರಪ್ಪ ತೋರನಗಟ್ಟಿ ಮತ್ತಿತರರು ಇದ್ದರು.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸದಸ್ಯರು ಮತ್ತು ಗಣ್ಯರು ಹೂ ಮಾಲೆ ಹಾಕಿ ಅಭಿನಂದಿಸಿದರು.

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...

More Articles Like This

error: Content is protected !!
Join WhatsApp Group