spot_img
spot_img

ಯುವಜನರು ನಾಡು-ನುಡಿ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು: ಬಿ.ಟಿ.ಸಚ್ಚಿದಾನಂದ

Must Read

- Advertisement -

ಪಿರಿಯಾಪಟ್ಟಣದಲ್ಲಿ ವಿದ್ಯಾರ್ಥಿ ಜಾಗೃತಿ ಕಾರ್ಯಕ್ರಮ

ವಿದ್ಯಾರ್ಥಿಗಳು ಕನ್ನಡ ನಾಡು-ನುಡಿಗಳ ಬಗ್ಗೆ ಅಪ್ರತಿಮ ಒಲವು ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು ಎಂದು ಕರುನಾಡ ಜನಜಾಗೃತಿ ಸಮಿತಿ ರಾಜ್ಯಾಧ್ಯಕ್ಷರಾದ ಬಿ.ಟಿ.ಸಚ್ಚಿದಾನಂದ ಕರೆ ನೀಡಿದರು.

ಕರುನಾಡ ಜಾಗೃತಿ ವೇದಿಕೆಯು ಪಿರಿಯಾಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು- ನುಡಿಯ ಜಾಗೃತಿ, ತಾಂತ್ರಿಕ ಶಿಕ್ಷಣ ಹಾಗೂ ಸ್ವಾವಲಂಬನೆ, ಏಕಾಗ್ರತೆ ಹಾಗೂ ಆದ್ಯಾತ್ಮಿಕ ಚಿಂತನೆಗಳನ್ನು ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

- Advertisement -

ಕನ್ನಡ ನಾಡು – ನುಡಿ ಸಂರಕ್ಷಣೆ, ಗ್ರಾಮೀಣ ಸಂಸ್ಕೃತಿಯ ರಕ್ಷಣೆ,ಪರಿಸರ ಸಂರಕ್ಷಣೆಗೆ ಕರುನಾಡ ಜನಜಾಗೃತಿ ವೇದಿಕೆ ಕಟಿಬದ್ದವಾಗಿದೆ ಎಂದವರು ನುಡಿದರು.

ಕನ್ನಡ ನಾಡು ನುಡಿಯ ಇತಿಹಾಸ ಹಾಗೂ ಕನ್ನಡ ನಾಡು-ನುಡಿಯ ಪ್ರಸಕ್ತ ಪರಿಸ್ಥಿತಿಯನ್ನು ಕುರಿತು ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ಹಾಗೂ ಪತ್ರಕರ್ತರಾದ ಡಾ.ಭೇರ್ಯ ರಾಮಕುಮಾರ್ ಮಾತನಾಡಿ ಕನ್ನಡ ಭಾಷೆಗೆ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಲಿಪಿಗೆ ಸುಮಾರು ಐದು ನೂರು ವರ್ಷಗಳ ಇತಿಹಾಸವಿದೆ.ಕನ್ನಡ ನಾಡನ್ನು ಕಟ್ಟಲು ಚಾಲುಕ್ಯರು,ಹೊಯ್ಸಳರು, ಕೆಳದಿಯ ಅರಸರು,ವಿಜಯನಗರದ ಅರಸರು, ಮೈಸೂರಿನ ಅರಸರು ಸೇರಿದಂತೆ ಹಲವಾರು ರಾಜವಂಶಗಳು ಶ್ರಮಿಸಿದ್ದಾರೆ ಎಂದು ವಿವರಿಸಿದರು.

- Advertisement -

ಕನ್ನಡನಾಡಿನ ರಾಜಧಾನಿ ಅನ್ಯ ಭಾಷೆಗಳ ಹಾವಳಿಗೆ ಸಿಲುಕಿದೆ. ಬೆಳಗಾವಿ, ಕೋಲಾರ, ಕೊಡಗು ,ಚಾಮರಾಜನಗರ ಜಿಲ್ಲೆಗಳ ಗಡಿ ಗ್ರಾಮಗಳಲ್ಲಿ ಪರಭಾಷಿಗರ ಹಾವಳಿಗೆ ಸಿಲುಕಿ ಕನ್ನಡಿಗರು ಆತಂಕಕ್ಕೆ ಒಳಗಾಗಿದ್ದಾರೆ.ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದವರು ಆತಂಕ ವ್ಯಕ್ತಪಡಿಸಿದರು.

ನ್ಯಾಯಾಲಯದ ವ್ಯವಹಾರಗಳಲ್ಲಿ, ಬ್ಯಾಂಕ್ ಹಾಗೂ ವಾಣಿಜ್ಯ ಕೇಂದ್ರಗಳಲ್ಲಿ ಅತಿ ಹೆಚ್ಚು ಸಾರ್ವಜನಿಕರು ಪಾಲ್ಗೊಳ್ಳುವುದರಿಂದ ಅಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದವರು ಒತ್ತಾಯಿಸಿದರು.

ಇನ್ ಫೋಸಿಸ್ ಸಂಸ್ಥೆಯ ತಂತ್ರಜ್ಞರಾದ ಹಾಗೂ ಕನ್ನಡ ಪರ ಚಿಂತಕರಾದ ಡಾ.ಎಂ.ಆರ್.ವಿನಯ್ ಅವರು ಮಾತನಾಡಿ ವಿದ್ಯಾರ್ಥಿಗಳು ಕನ್ನಡ ಭಾಷೆಯ ಜೊತೆಜೊತೆಗೇ ಆಂಗ್ಲ ಭಾಷಾ ಜ್ಞಾನ, ಕಂಪ್ಯೂಟರ್ ತಂತ್ರಜ್ಞಾನ,ನಾಯಕತ್ವದ ಗುಣ ಹಾಗೂ ಸಾಮಾನ್ಯ ಜ್ಞಾನ ಇವುಗಳನ್ನು ರೂಡಿಸಿಕೊಂಡರೆ ಉತ್ತಮ ಉದ್ಯೋಗ ಪಡೆದು, ಅತ್ಯುತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ನುಡಿದರು.

ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಅವಕಾಶಗಳು, ಉದ್ಯೋಗಗಳ ಅವಕಾಶಗಳು ಬಹು ವಿಶಾಲವಾಗಿವೆ. ಅದಕ್ಕೆ ಸಂಬಂದಿಸಿದಂತೆ ತರಭೇತಿ ಹಾಗೂ ಕಷ್ಟಪಟ್ಟು ದುಡಿಯುವ ಶ್ರದ್ದೆ ಬೆಳೆಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದವರು ಕರೆ ನೀಡಿದರು. ಚಿಂತನೆಗಳನ್ನು ಕುರಿತು ಇನ್ ಫೋಸಿಸ್ ಸಂಸ್ಥೆಯ ತಾಂತ್ರಿಕ ತಜ್ಞರಾದ ‌‌‌ ‌ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹಾಗೂ ಶೈಕ್ಷಣಿಕ ಮೌಲ್ಯಗಳನ್ನು ಕುರಿತು ಆಧ್ಯಾತ್ಮಿಕ ಚಿಂತಕರಾದ ಎಸ್.ಬಿ.ಗುಣಚಂದ್ರಕುಮಾರ್ ಉಪನ್ಯಾಸ ನೀಡಿ ಮಾತನಾಡಿ ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದುದು. ಅದನ್ನು ಬಹಳ ಶ್ರದ್ದೆ ಯಿಂದ ಕಟ್ಟಿಕೊಳ್ಳಬೇಕು. ಗುರುಹಿರಿಯರನ್ನು ಗೌರವಿಸಬೇಕು. ವಿದ್ಯೆಯನ್ನು ಅಪಾರ ಶ್ರದ್ದೆ ಹಾಗೂ ಏಕಾಗ್ರತೆಯಿಂದ ಪಡೆಯಬೇಕು.ಸವಾಲುಗಳಿಗೆ ಅಂಜದೇ ಜೀವನ ಯಶಸ್ವಿಗೊಳಿಸಿ ಕೊಳ್ಳಬೇಕು ಎಂದವರು ನುಡಿದರು. ಈ ಸಂದರ್ಭದಲ್ಲಿ ವಿವಿಧ ವಿಷಯಗಳನ್ನು ಕುರಿತಂತೆ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳೊಡನೆ ಸಂವಾದ ನಡೆಸಿದರು.

ನಿವೃತ್ತ ಉಪನ್ಯಾಸಕ ಹಾಗೂ ಕರುನಾಡ ಜನಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಬಿ.ಎಂ.ಶಿವಸ್ವಾಮಿ ಅವರು ಮಾತನಾಡಿ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಲ್ಲಿ ನಾಡು,ನುಡಿ, ಪರಿಸರ,ತಂತ್ರಜ್ಞಾನ,ಪರಿಸರ, ಆಧ್ಯಾತ್ಮಿಕ ಚಿಂತನೆಗಳನ್ನು ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಿರಿಯ ಸಾಧಕರ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ನುಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನವೀನಕುಮಾರ್ ಅವರು ಮಾತನಾಡಿ ಪಿರಿಯಾಪಟ್ಟಣ ಪಟ್ಟಣದ ಪ್ರಮುಖ ವೃತ್ತಗಳಿಗೆ ಹಾಗೂ ರಸ್ತೆಗಳಿಗೆ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ನಾಮಕರಣ ಮಾಡಲು ಸರ್ಕಾರದ‌ ಹಾಗೂ ಸ್ಥಳೀಯ ಆಡಳಿತದ ಅನುಮತಿ ದೊರೆತಿದೆ. ಸದ್ಯದಲ್ಲೇ ಈ ಕಾರ್ಯ ಆರಂಬಿಸುವುದಾಗಿ ಪ್ರಕಟಿಸಿದರು.

ಶಾಲೆಯ ಉಪನ್ಯಾಸಕ ವರ್ಗದವರು, ಕರುನಾಡ ಜನಜಾಗೃತಿ ವೇದಿಕೆಯ ಮಂಜುನಾಥ್, ಗಣೇಶ್, ಸೋಮಸುಂದರ್, ಅವಿನಾಶ್. ಮೊದಲಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group