ಶಾಸಕರ ಮಾದರಿ ಶಾಲೆ ಗುರ್ಲಹೊಸೂರನಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ

Must Read

ಸವದತ್ತಿ: ಪಟ್ಟಣದ ಗುರ್ಲಹೊಸೂರಿನ ಸರಕಾರಿ ಶಾಸಕರ ಮಾದರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ನಿಮಿತ್ತ ಮಕ್ಕಳಿಗಾಗಿ ಹಲವಾರು ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಮ್ಯುಜಿಕಲ್ ಚೇರ್,ಲಿಂಬು ಸ್ಪೂನ್,ಕಪ್ಪೆಜಿಗಿತ,ಗಾಯನ ,ಕ್ಲೆ ಮಾಡೆಲಿಂಗ್ , ಸುಪರ್ ಮಿನಿಟ್ ಹಾಗೂ ಚಿತ್ರಕಲಾ ಸ್ಪರ್ಧೆಗಳು ಹಾಗೂ ಮಕ್ಕಳಿಂದ ಪಾಠ ಬೋಧನೆಯಂತಹ ಹಲವಾರು ಕಾರ್ಯಕ್ರಮಗಳಲ್ಲಿ ಶಾಲೆಯ ಸಾಕಷ್ಟು ಮಕ್ಕಳು ಆಸಕ್ತಿಯಿಂದ ಭಾಗವಹಿಸಿ ಸಂಭ್ರಮಿಸಿದರು.ಈ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ,ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಕ್ಕಳು ಚಾಚಾ ನೆಹರು ಕುರಿತು ಮಾತನಾಡಿದರು ಮತ್ತು ಇಡೀ ಕಾರ್ಯಕ್ರಮವನ್ನು ಮಕ್ಕಳೇ ನಡೆಸಿದ್ದು ವಿಶೇಷ.

ಈ ಸಂದರ್ಭದಲ್ಲಿ ಶಾಲೆಯ ಪದವೀಧರ ಪ್ರಧಾನ ಗುರುಗಳಾದ ಎಮ್ ಬಿ ಕಮ್ಮಾರ ,ಸಹಶಿಕ್ಷಕರಾದ ಎಸ್ ಹೆಚ್ ಕರಿಗಾರ,ಎಮ್ ಜಿ ದೊಡಮನಿ,ಪಿ ಎಸ್ ಶಿಂಧೆ,ಎಮ್ ಎಮ್ ಮಾಟೋಳ್ಳಿ, ಬಿ ಎನ್ ದೊಡ್ಡಕಲ್ಲನ್ನವರ ಹಾಗೂ ಶಿಕ್ಷಕಿಯರಾದ ಶ್ರೀಮತಿ ಜಿ ಸಿ ಗುಂಡಾರ,ಎಸ್ ಎಸ್ ಮಿರ್ಜಿ,ಜಿ ಕೆ ಕೆಂಪಯ್ಯನವರ,ಬಿ ಕೆ ಸಂತಿ,ಎನ್ ಆರ್ ಯಕ್ಕುಂಡಿ ಹಾಗೂ ವ್ಹಿ ಆರ್ ಗೊರಗುದ್ದಿ ಶ್ರೀಮತಿ. ಎನ್.ಆರ್.ಜಂಬೂನವರ. ಹಾಜರಿದ್ದರು.ಶಿಕ್ಷಕರು ಮಕ್ಕಳಿಗೆ ಕೇಕ್ ಹಂಚುವದರ ಮೂಲಕ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಪಿ.ಎಸ್ ಶಿಂಧೆಯವರು ಜವಾಹರಲಾಲ್ ನೆಹರು ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಿದರು. ಹಾಗೂ ಎಸ್ ಹೆಚ್ ಕರಿಗಾರ ಇವರು ನೆಹರು ಅವರಿಗೆ ಮಕ್ಕಳ ಮೇಲಿದ್ದ ಪ್ರೀತಿಯ ಕುರಿತು ಮಾತನಾಡಿದರು ಹಾಗೂ ಪದವೀಧರ ಪ್ರಧಾನ ಗುರುಗಳಾದ ಎಮ್. ಬಿ.ಕಮ್ಮಾರ ಇವರು ಮಾತನಾಡುತ್ತಾ ” ಮಕ್ಕಳೆಲ್ಲರೂ ನಾಳಿನ ದೇಶದ ಭವಿಷ್ಯ,,, ದೇಶ ನಿರ್ಮಾಣಕ್ಕೆ ಶಿಕ್ಷಣದ ಅವಶ್ಯಕತೆ ಹಾಗೂ ಮಕ್ಕಳ ಪಾತ್ರ ಏನು. ” ಎಂಬುದನ್ನು ತಿಳಿಸಿದರು.ಎಂಟನೇಯ ತರಗತಿಯ ವಿದ್ಯಾರ್ಥಿನಿ ಭಕ್ತಿಪ್ರೀಯಾ ಇವಳು ಮತ್ತು ಅವಳ ಸಂಗಡಿಗರು ಕೂಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸಿದರು.

Latest News

ಕಲಬುರಗಿ ವಿಮಾನ ನಿಲ್ದಾಣ ಸ್ತಬ್ಧ: ರಾಜ್ಯ ಸರಕಾರದ ಮೌನದಿಂದ ಅಭಿವೃದ್ಧಿಗೆ ಹಿನ್ನಡೆ

371 ಜೆ ವ್ಯಾಪ್ತಿಯ ವಿಮಾನ ನಿಲ್ದಾಣಕ್ಕೆ ಗ್ರಹಣ: ಜನಪ್ರತಿನಿಧಿಗಳ ಮೌನಕ್ಕೆ ಆಕ್ಷೇಪಇತ್ತೀಚೆಗಷ್ಟೇ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸಂಕಲ್ಪ...

More Articles Like This

error: Content is protected !!
Join WhatsApp Group