ಸಿಂದಗಿ : ಹಾಲುಮತಸ್ಥರು ಜಾಗ್ರತರಾಗಿ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ ಹೇಳಿದರು.
ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದ ಹತ್ತಿರ ರವಿಕಾಂತ ನಾಯಿಕೋಡಿ ಅವರ ನೂತನ ಮನೆಯ ಆವರಣದಲ್ಲಿ ಹಮ್ಮಿಕೊಂಡ ಕ್ರಾಂತಿವೀರ ಬ್ರಿಗೇಡ್ ಕಾರ್ಯಕ್ರಮ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂದು ಸಣ್ಣ ಸಣ್ಣ ಸಮುದಾಯಗಳು ರಾಜಕೀಯವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ತುಳಿತಕ್ಕೆ ಒಳಗಾಗುತ್ತಿವೆ ಅಂಥ ಸಮುದಾಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಮ್ಮ ಕ್ರಾಂತಿವೀರರ ಬ್ರಿಗೇಡ್ ದ್ವನಿ ಎತ್ತುವ ಕೆಲಸ ಪ್ರಾಮಾಣಿಕವಾಗಿ ನಿರ್ವಹಿಸಲಿದೆ ಬರುವ ಫೆ, ೪ ರಂದು ೧೦೦೮ ಶ್ರೀಗಳ ಪಾದಪೂಜೆ ಮೂಲಕ ಕೊಲ್ಲಾಪುರ ಶ್ರೀಗಳಿಂದ ವಿಜಯಪುರ ಜಿಲ್ಲೆ ಬಸವನಾಡು ಬಸವನ ಬಾಗೇವಾಡಿ ಯಲ್ಲಿ ಕ್ರಾಂತಿವೀರ ಬ್ರಿಗೇಡ್ ಸಮಾವೇಶ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ ಯಾವುದೇ ಪಕ್ಷದ ಬೆಳವಣಿಗೆಗಾಗಿ ಅಥವಾ ಒಬ್ಬ ವ್ಯಕ್ತಿ ಬೆಳವಣಿಗೆಗಾಗಿ ಸಂಘಟನೆ ಮಾಡುತ್ತಿಲ್ಲ ಹಿಂದುಳಿದ ವರ್ಗಗಳ ಏಳಿಗೆಗಾಗಿ ಮತ್ತು ಹಿಂದುತ್ವ ಉಳಿವಿಗಾಗಿ ಸಂಘಟನೆ ಮಾಡುತ್ತಿದ್ದೇವೆ ಕಾರಣ ಸಿಂದಗಿ ಹಾಗೂ ಆಲ್ಮೆಲ್ ತಾಲೂಕಿನಿಂದ ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಘಟನೆಗೆ ಬಲ ತುಂಬಬೇಕು ಎಂದು ಕರೆ ನೀಡಿದರು.
ಹಾಲುಮತ ಸಮುದಾಯದ ಮುಖಂಡ ರವಿಕಾಂತ ನಾಯ್ಕೊಡಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಈಶ್ವರಪ್ಪನವರು ತಮ್ಮ ರಾಜಕೀಯ ಜೀವನದಲ್ಲಿ ಕೇವಲ ಹಾಲುಮತ ಸಮುದಾಯದ ಕಷ್ಟ ಅಲ್ಲದೆ ಅನೇಕ ಸಣ್ಣ ಪುಟ್ಟ ಸಮುದಾಯದ ಏಳಿಗೆಗಾಗಿ ಶ್ರಮಿಸಿದ್ದಾರೆ ಸಣ್ಣ ಪುಟ್ಟ ಸಮಾಜದ ಮಕ್ಕಳು ಶಿಕ್ಷಣವಂತರಾಗಬೇಕು ಸರ್ಕಾರಿ ಸೌಲಭ್ಯಗಳು ಬಡವರ ಮನೆ ಬಾಗಿಲಿಗೆ ಮುಟ್ಟಬೇಕು ಬಡ ಮಕ್ಕಳು ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಮುಂದೆ ಬರಬೇಕು ಎನ್ನುವುದು ಈಶ್ವರಪ್ಪನವರ ಕನಸಾಗಿದೆ ಅ ಕನಸನ್ನ ನನಸಾಗಿಸುವ ನಿಟ್ಟಿನಲ್ಲಿ ನಾವೆಲ್ಲರು ಪಕ್ಷಾತೀತವಾಗಿ ಸಮಾವೇಶಕ್ಕೆ ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಗೋ ಎಂದರೆ ತಾಯಿ, ಅವಳನ್ನು ಕಣ್ಣೆದುರೇ ಕೊಲೆ ಮಾಡುವ ಕಾರ್ಯ ನಡೆಯುತ್ತಿದೆ ಸದ್ಯಕ್ಕೆ ಮಹಾತ್ಮ ಗಾಂಧೀಜಿ ಏನಾದ್ರು ಬದುಕಿದ್ರೆ ಇದನ್ನ ನೋಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಗೋ ಮಾತೇ ಹಾಗೂ ಮಠ ಮಾನ್ಯಗಳ ಅಭಿವೃದ್ಧಿ ಮತ್ತು ಹಿಂದುತ್ವ ಉಳಿವು, ಈ ಸಂಘಟನೆಯ ಮುಖ್ಯ ಕಾರ್ಯವಾಗಿದೆ.
……ಮಾಜಿ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ
ಕಾರ್ಯಕ್ರಮದಲ್ಲಿ ಶ್ರೀ ರಾವುತರಾಯ ದೇವರು ಮೋರಟಗಿ, ಕುರುಬ ಸಂಘದ ಅಧ್ಯಕ್ಷ ನಿಂಗಣ್ಣ ಬಿರಾದಾರ, ನಾಗಪ್ಪ ಶಿವೂರ, ಸಿದ್ದು ಬುಳ್ಳಾ, ಶರಣಪ್ಪ ಹಿರೇಕುರುಬರ, ಮಲ್ಲಿಕಾರ್ಜುನ ಸಾವಳಸಂಗ, ನಿಂಗಣ್ಣ ಬುಳ್ಳಾ, ಶಿಲ್ಪಾ ಕುದರಗೊಂಡ, ಸಿದ್ದು ಹದನೂರ, ಪ್ರಕಾಶ ಹಿರೇಕುರುಬರ, ಸಂತೋಷ ಹರನಾಳ ಸೇರಿದಂತೆ ಅನೇಕರು ಇದ್ದರು.