ಬೆಳಗಾವಿ – ಉತ್ತರ ಕರ್ನಾಟಕದಲ್ಲಿ ಅಪ್ಪು ಹೆಸರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಅಥವಾ ಫಿಲಂ ಸಿಟಿ ನಿರ್ಮಾಣ ಮಾಡುವಂತೆ ಕೂಡಲಸಂಗಮ ಜಗದ್ಗುರುಗಳು ಸರ್ಕಾರಕ್ಕೆ ಸಲಹೆ ನೀಡಿದರು.
ಮಾನವೀಯತೆಯ ಮಹಾನಟ ಪುನೀತ್ ರಾಜಕುಮಾರ್ ಬೆಂಗಳೂರಿನ ನಿವಾಸಕ್ಕೆ ಮನೆಗೆ ಭೇಟಿ ನೀಡಿದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿಯವರು, ಅಪ್ಪು ಧರ್ಮ ಪತ್ನಿ ಆಶ್ವಿನಿ , ಮಗಳಾದ ಧೃತಿ ಹಾಗೂ ವಂದಿತಾ, ವಿನಯ್ ರಾಘವೇಂದ್ರ ರಾಜ್ ಕುಮಾರ್ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಪುಟ್ಟರಾಜ್ , ಮಾಜಿ ಸದಸ್ಯ ನಟರಾಜ್ , ಯುವ ನಟ ಅಭಿಲಾಷ , ನಗರ ಅಧ್ಯಕ್ಷ ಶಿವಪುತ್ರ ಮಲ್ಲೆವಾಡ , ಕಾರ್ಯದರ್ಶಿ ವೀರೇಶ ಮೊದಲಾದವರು ಉಪಸ್ತಿತರಿದ್ದರು.