ಮಹಾನಗರದ ಜನತೆಯನ್ನು ಅಭಿನಂದಿಸಿದ – ಸಂಸದ ಈರಣ್ಣ ಕಡಾಡಿ

Must Read

ಮೂಡಲಗಿ: ಮೊದಲ ಬಾರಿಗೆ ಬಿಜೆಪಿ ತನ್ನ ಚಿಹ್ನೆ ಮೇಲೆ ಸ್ಪರ್ಧೆ ಮಾಡಿದಾಗ ಬೆಳಗಾವಿ ಮಹಾನಗರದ ಜನತೆ ಅಭೂತಪೂರ್ವವಾದ ಬೆಂಬಲವನ್ನು ನೀಡಿದಕ್ಕಾಗಿ ಮಹಾನಗರದ ಜನತೆಗೆ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಸೋಮವಾರ ಸ.6 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ಕಳೆದ ಕೆಲ ದಶಕಗಳಿಂದ ಬರಿ ಜಾತಿ, ಮತ, ಭಾಷೆಯ ಆಧಾರದ ಮೇಲೆ ಚುನಾವಣೆ ಮಾಡುತ್ತಿದ್ದರಿಂದ ಜನರ ದೈನಿಕ ಜೀವನಕ್ಕೆ ಬಹಳಷ್ಟು ತೊಂದರೆಗಳಾಗಿದ್ದವು ಮತದಾರರು ರೋಸಿ ಹೋಗಿದ್ದರು. ಅಭಿವೃದ್ಧಿ ಪರವಾದಂಥ ಬಿಜೆಪಿಯ ವಿಚಾರಗಳಿಗೆ ಇವತ್ತು ಮತದಾರರು ಬಲ ತುಂಬಿದ್ದಾರೆ.

ಗೆದ್ದಿರುವಂಥ ಮಹಾನಗರ ಪಾಲಿಕೆ ಸದಸ್ಯರು ಬಹಳ ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಇಲ್ಲಿ ತನಕ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದರೂ ಕೂಡಾ ಮಹಾನಗರ ಪಾಲಿಕೆ ನಮ್ಮ ಕೈಯಲ್ಲಿ ಇಲ್ಲದ ಕಾರಣದಿಂದ ಎಲ್ಲೋ ಕೆಲವು ಕಡೆ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು ಎನ್ನುವ ಕೊರಗು ಬಹಳಷ್ಟು ಜನರಿಗೆ ಇದೆ ಅದನ್ನು ನಿವಾರಣೆ ಮಾಡುವ ದೃಷ್ಟಿಯಲ್ಲಿ ಹೆಜ್ಜೆ ಇಡಬೇಕು ಎಂದರು.

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group