ಬೀದರ – ನಗರದ ಪಾಪನಾಶ ಶಿವಲಿಂಗ ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಇತ್ತೀಚೆಗೆ ಭಗವಂತ ಖೂಬಾ v/s ಖಂಡ್ರೆ ಟಾಕ್‌ವಾರ್ ನಡೆದ ಘಟನೆ ಇನ್ನೂ ಹಸಿರಾಗಿದೆ
ಈ ಹಿನ್ನೆಲೆಯಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ನೇರಾನೇರ ಜೀವ ಬೆದರಿಕೆ ಹಾಕಿದ್ದಾನೆ.
ಕೆಲದಿನದ ಹಿಂದೆ ಸಚಿವ ಈಶ್ವರ ಖಂಡ್ರೆ ಕುರಿತಾಗಿ ಅವಾಚ್ಯ ಪದಬಳಸಿ ನಿಂದಿಸಿದ್ದ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ವಿಡಿಯೋ ಬಂದಿತ್ತು.ಈಗ ಖೂಬಾ ವಿರುದ್ದ ನಾಲಗೆ ಹರಿಬಿಟ್ಟ ಕೈ ಕಾರ್ಯಕರ್ತನ ವಿಡಿಯೋ ವೈರಲ್ ಆಗಿದೆ
ಭಾಲ್ಕಿ ತಾಲೂಕಿನ ನಿಟ್ಟೂರು ಬಿ ಗ್ರಾಮದ ತುಕಾರಾಮ ಹಣಮಂತರಾಯ ದೊಡ್ಡಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಮಾಡಿ ಖೂಬಾ ವಿರುದ್ದ ಅವಾಚ್ಯ ಪದಬಳಸಿ ನಿಂದನೆ ಮಾಡಿದ್ದಾನೆ ರಾಸ್ಕಲ್, ಕಳ್ಳ ನನ್ನ ಮಗನೆ , ನಾಲಾಯಕ್ , ಎಂದೆಲ್ಲಾ ಅವಾಚ್ಯ ಶಬ್ದಗಳಿಂದ ಖೂಬಾ ಅವರ ನಿಂದನೆ ಮಾಡಿದ್ದು ಖಂಡ್ರೆ ವಿರುದ್ದ ಮಾತನಾಡಿದ್ರೆ ನಿನ್ನ ನಾಲಿಗೆ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ
10 ವರ್ಷಗಳಲ್ಲಿ ನಿನ್ನ ಸಾಧನೆ ಏನು, ಯಾವ ಕಾರ್ಯಕರ್ತನನ್ನ ಬೆಳೆಸಿದ್ದೀಯಾ..? ಮೋದಿ ಹೆಸರ ಮೇಲೆ ಚುನಾವಣೆ ಗೆದ್ದಿದ್ದೀಯಾ, ತಾಕತ್ತಿದ್ದರೆ ಗ್ರಾಪಂ ಚುನಾವಣೆ ನಿಂತು ಗೆಲ್ಲು ಎಂಬೆಲ್ಲ ಮಾತುಗಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ.
ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ನಡೆಸುವ ಘಟನೆಗಳು ತೀರಾ ವೈಯಕ್ತಿಕ ಮಟ್ಟಕ್ಕೆ ಹೋಗಿದ್ದು ಖಂಡನೀಯ. ಜಿಲ್ಲೆಯ ಜನರ ದೃಷ್ಟಿಯಿಂದ ಇದು ಅನಾರೋಗ್ಯಕರ ಬೆಳವಣಿಗೆ. ಜಿಲ್ಲಾ ಪೊಲೀಸ್ ಇಲಾಖೆ ಗಮನಿಸಿ ಇಂತಹ ಹೇಳಿಕೆ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಯಾರೇ ಇರಲಿ ಕಿಡಿಗೇಡಿ ವಿರುದ್ಧ ಕ್ರಮಕ್ಕೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ

