ಗಮನ ಬೇರೆ ಕಡೆ ಸೆಳೆಯಲು ಹಿಜಾಬ್ ವಿಷಯ ತಂದ ಕಾಂಗ್ರೆಸ್ – ಕಾಶೆಂಪುರ

Must Read

ಬೀದರ  ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ಗಮನ ಇನ್ನೊಂದು ಕಡೆ ಸೆಳೆಯುವ ಉದ್ದೇಶದಿಂದ ಹಿಜಾಬ್ ವಿಷಯ ಮುನ್ನೆಲೆಗೆ ತೆಗೆದುಕೊಂಡು ಬಂದಿದ್ದಾರೆ ಎಂದು ಜೆಡಿಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಬಂಡೇಪ್ಪ ಖಾಶೇಂಪುರ್ ಹೇಳಿದರು.

      ಬೀದರನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯ ಮನಸ್ಸು ಗೆಲುವು ತಂತ್ರ ಇದು.ಈ ತಂತ್ರವನ್ನು ಪ್ರಯೋಗಿಸಿ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಲಾಭ ಪಡೆಯಲು ಸಾದ್ಯವಿಲ್ಲ ಎಂದರು.

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ  ಹಿಜಾಬ್ ವಿಷಯ ತೆಗೆದುಕೊಂಡ ಬಂದಿದ್ದಾರೆ. ರಾಜ್ಯದ ಮುಸ್ಲಿಂ ಜನರು ಚೆನ್ನಾಗಿ ಗಮನಿಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಹಿಜಾಬ್ ಯಿಂದ ಲೋಕಸಭಾ ಚುನಾವಣೆಯಲ್ಲಿ ಲಾಭ ಆಗುವುದಿಲ್ಲ. ಹಿಜಾಬ್ ಪ್ರಕರಣದಲ್ಲಿ ಕೋರ್ಟ್  ಆದೇಶದ ಪ್ರಕಾರ ರಾಜ್ಯ ಸರ್ಕಾರ ನಡೆದುಕೊಂಡು ಹೋಗಬೇಕು ಎಂದರು.

      ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯದ ಮೇಲೆ  ನಕಲಿ ಕರುಣೆ ತೋರಿಸುತ್ತದೆ. ಮುಸ್ಲಿಂ ಸಮುದಾಯಕ್ಕೆ ಹತ್ತು ಸಾವಿರ ಕೋಟಿ  ಹಣವನ್ನು ಖರ್ಚು ಮಾಡುತ್ತೇವೆ ಎಂದು ಹೇಳಿದ್ದರೂ ಇನ್ನೂ  ಮಾಡಿಲ್ಲ. ಇಡೀ ದೇಶದಾದ್ಯಂತ ಮುಸ್ಲಿಂ ಸಮುದಾಯಕ್ಕೆ ೪% ಮೀಸಲಾತಿ ನೀಡಿದವರು ಎಚ್ ಡಿ ದೇವೆಗೌಡರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಏಳು ತಿಂಗಳಾಯಿತು. ಮುಸ್ಲಿಮ್ ಸಮುದಾಯದ ಮೀಸಲಾತಿ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆ ಹಳ್ಳ ಹಿಡಿದು ಹೋಗಿದ್ದು ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂದು ಕಾಶೆಂಪುರ ಹೇಳಿದರು.

ವರದಿ : ನಂದಕುಮಾರ ಕರಂಜೆ, ಬೀದರ

Latest News

ವಾರದ ಸಾಮೂಹಿಕ ಪ್ರಾಥ೯ನೆ ಹಾಗೂ ವಚನ ವಿಶ್ಲೇಷಣೆ.

ಬೆಳಗಾವಿ - ವಚನ ಪಿತಾಮಹ ಡಾ. ಫ .ಗು. ಹಳಕಟ್ಟಿ  ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 08.02.2026ರಂದು ಸಾಮೂಹಿಕ ಪ್ರಾರ್ಥನೆ ಹಾಗೂ ವಚನ...

More Articles Like This

error: Content is protected !!
Join WhatsApp Group