ಗಾಂಧಿಜೀ ಹೆಸರಿನಲ್ಲಿ ದೇಶದ ಜನರಿಗೆ ಕಾಂಗ್ರೆಸ್ ಟೋಪಿ ಹಾಕಿದೆ – ನಳಿನ್ ಕಟೀಲು

Must Read

ಬೀದರ – ಗಾಂಧೀಜಿ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ ಮೋಸ ಮಾಡಿದೆ. ಈ ಕಾಂಗ್ರೆಸ್ ನವರು ದೇಶರ ಜನರನ್ನು ಬಡವರನ್ನಾಗಿಟ್ಟರು. ಗ್ರಾಮ ಸ್ವರಾಜ್ ಕಲ್ಪನೆಗೆ ಕಾಂಗ್ರೆಸ್ ಶಕ್ತಿ ತುಂಬಿಲ್ಲ, ಶಕ್ತಿ ತುಂಬಿದ್ದು‌ ಪ್ರಧಾನಿ ಮೋದಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದರು.

ಬೀದರ್ ನ ಜನ ಸ್ವರಾಜ್ ಯಾತ್ರಾ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಈ ದೇಶಕ್ಕೆ ಕಾಂಗ್ರೆಸ್ ನ ಕೊಡುಗೆಗಳು ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ, ನಿರುದ್ಯೋಗ ಈ ನಾಲ್ಕು ಸಮಸ್ಯೆ ಕಾರಣ ಕಾಂಗ್ರೆಸ್. ನೆಹರೂರವರಿಂದ ಹಿಡಿದು ಮನಮೋಹನ್ ಸಿಂಗ್ ವರೆಗೆ ಕಳಂಕಿತರಾಗಿ ಎಲ್ಲರೂ ಜೈಲಿಗೆ ಹೋದವರು. ಲಾಲ್ ಬಹಾದ್ದೂರ್ ಶಾಸ್ತ್ರಿಯೊಬ್ಬರೆ ಕಳಂಕ ರಹಿತ ಪ್ರಧಾನಿ ಎಂದರು.

ಕಾಂಗ್ರೆಸ್ ನಿಂದ ಗರೀಬಿ ಹಠಾವೋ ಎಂಬ ಘೋಷಣೆ ಆಯಿತು ಆದರೆ ಗರೀಬಿ ಹಠಾವೋ ಆಗಿದ್ದು‌‌ ಖಂಡ್ರೆ ಹಾಗೂ ಖರ್ಗೆ ಮನೆಯಲ್ಲಿ ಮಾತ್ರ ಬಡವರದ್ದು ಮಾತ್ರ ಆಗಲಿಲ್ಲಾ ಎಂದು ವ್ಯಂಗ್ಯವಾಡಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ 15ಕ್ಕೂ ಹೆಚ್ಚು ಸೀಟು ಬಿಜೆಪಿ ಗೆಲುತ್ತದೆ.ಹೀಗಾಗಿ ಮುಂದಿನ ಚುನಾವಣೆಗೆ ಈಶ್ವರ್ ಖಂಡ್ರೆ ಬಿಜೆಪಿಗೆ ಬರುತ್ತಾರೆ ಎಂದು ಭವಿಷ್ಯ ನುಡಿದರು.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group