ಕಾಂಗ್ರೆಸ್ಸಿಗರೆ , ಸ್ವಲ್ಪವಾದರೂ ಯೋಗ್ಯತೆ ಇಟ್ಕೊಂಡು ಮಾತನಾಡಿ!

Must Read

ನರೇಂದ್ರ ಮೋದಿ… ದಿನದ ೧೮ ಗಂಟೆ ಕೆಲಸ, ದಿನವೊಂದರಲ್ಲಿ ಸಾವಿರಾರು ಕಿ ಮೀ ಪ್ರಯಾಣ ಮಾಡಿದರೂ ದಣಿವರಿಯದ ಜೀವ, ೨೫ ವರ್ಷಗಳ ಸಾರ್ವಜನಿಕ ಜೀವನದಲ್ಲಿ ಒಂದೇ ಒಂದು ಕಳಂಕವಿಲ್ಲ, ಪ್ರಾಮಾಣಿಕತೆಗಾಗಿ ಬೈಸಿಕೊಳ್ಳುವ ಏಕೈಕ ವ್ಯಕ್ತಿ, ಒಂದು ದಿನವೂ ಆಸ್ಪತ್ರೆಯ ಕಡೆಗೆ ಮುಖ ಮಾಡಿಲ್ಲ, ಅತ್ಯುನ್ನತ ಪದವಿ ಹೊಂದಿದ್ದರೂ ಅತ್ಯಂತ ಸರಳ ಜೀವನ ಪದ್ಧತಿ, ತಾಯಿ,ಅಣ್ಣ ತಮ್ಮ ಸಂಬಂಧಿಕರಿಗಾಗಿ ಪ್ರಜೆಗಳನ್ನು ಲೂಟಿ ಹೊಡೆದ ಹಣ ಸಂಗ್ರಹ ಮಾಡಲಿಲ್ಲ, ದುಡಿಯದೇ ಸಾವಿರಾರು ಕೋಟಿ ಗಳಿಸಲಿಲ್ಲ, ಸ್ವಂತ ಹಣದಲ್ಲಿ ವೈಯಕ್ತಿಕ ಖರ್ಚು ಮಾಡುವ ವ್ಯಕ್ತಿ, ಹಗಲೂ ರಾತ್ರಿ ದೇಶದ ಬಗ್ಗೆಯೇ ಚಿಂತೆ-ಚಿಂತನೆ, ಸರಳ-ಸಾದಾ ಆರೋಗ್ಯಕರ ಜೀವನ, ಸ್ವಂತಕ್ಕೆ ಬಂದ ಕಾಣಿಕೆಗಳನ್ನು ಹರಾಜು ಹಾಕಿ ಬಂದ ಹಣ ಗಂಗಾ ನದಿಯ ಸ್ವಚ್ಛತೆಗೆ ಹಾಕುವ ವಿಶಾಲ ಹೃದಯ, ಯಾವುದೇ ಜಾತಿ-ಧರ್ಮದ ತುಷ್ಟೀಕರಣಕ್ಕೆ ಇಳಿಯದೆ ಸರ್ವರ ಸಮಾನವಾಗಿ ಕಾಣುವ ದೃಷ್ಟಿ, ವೈಯಕ್ತಿಕ ದೂಷಣೆ ಮಾಡಿದವರಿಗೂ ಸಿಹಿ ಹಂಚುವ ದೊಡ್ಡಗುಣದ ವ್ಯಕ್ತಿತ್ವ , ರಾಜಕಾರಣದಲ್ಲಿ ಎಲ್ಲರ ಆದಾಯ ಹೆಚ್ಚಾದರೆ ಇವರ ಆದಾಯ ಕೆಳಗಿಳಿದಿದೆ!

ಹೀಗೆ ಒಂದೇ ಎರಡೇ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದಲೇ ಭಾರತದಾದ್ಯಂತ ಪ್ರಸಿದ್ಧಿ ಹೊಂದಿದ್ದರು. ಅವರು ತಮ್ಮ ರಾಜ್ಯಕ್ಕೆ ಮಾಡಿದ ಕೆಲಸಗಳು ಗುಜರಾತ್ ಮಾದರಿ ಎಂದೇ ಪ್ರಸಿದ್ಧವಾಗಿವೆ. ಉಳಿದ ರಾಜ್ಯಗಳು ಅವನ್ನು ಪಾಲಿಸುವಂಥ ಅಭಿವೃದ್ಧಿ ಗುಜರಾತ್ ನಲ್ಲಿ ಆಗಿದೆ. ಅದೇ ವರ್ಚಸ್ಸಿನ ಮೇಲೆ ಭಾರತದ ಪ್ರಧಾನಿಯಾದ ಮೋದಿಯವರು ಇಡೀ ವಿಶ್ವಾದ್ಯಂತ ದೇಶದ ಘನತೆಯನ್ನು ಹೆಚ್ಚಿಸಿದರು. ಈ ಕಾಂಗ್ರೆಸ್ಸಿಗರು ಪತ್ರ ಬರೆದು ಮೋದಿಯವರಿಗೆ ಅಮೇರಿಕದ ವೀಸಾ ಕೊಡಬೇಡಿ ಎಂದಿದ್ದರು. ಆಮೇಲೆ ಅಮೇರಿಕವೇ ಮೋದಿಯವರಿಗೆ ಕೆಂಪು ಹಾಸಿನ ಸ್ವಾಗತ ಮಾಡಿತು ಅಷ್ಟೇ ಅಲ್ಲ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಚಾರಕ್ಕೂ ಮೋದಿ ಬರಬೇಕಾಯಿತು ! ವಿದೇಶಕ್ಕೆ ಹೋದಾಗ ಗುಂಪಿನಲ್ಲಿ ಗೋವಿಂದ ಎಂದು ಇರುತ್ತಿದ್ದ ಕಾಂಗ್ರೆಸ್ ಪಕ್ಷದ ಪ್ರಧಾನಿಯವರಂತಾಗದೆ ಮೋದಿ ಇರುವಲ್ಲಿಯೇ ಅಮೇರಿಕದ ಅಧ್ಯಕ್ಷರು ಬಂದು ಮಾತನಾಡಿಸುವಂತಾಯಿತು. ಯುದ್ಧಗ್ರಸ್ತ ಉಕ್ರೇನ್ ನಲ್ಲಿ ಭಾರತದ ಧ್ವಜ ಹಿಡಿದವರಿಗೆ  ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲು ದಾರಿ ಮಾಡಿಕೊಟ್ಟರು. ಇಂಥ ಅಂತಾರಾಷ್ಟ್ರೀಯ  ವರ್ಚಸ್ಸನ್ನು ಈ ಹಿಂದಿನ ಯಾವುದೇ ಪ್ರಧಾನಿ ಗಳಿಸಿಲ್ಲ. ಅದರಲ್ಲೂ ಕಾಂಗ್ರೆಸ್ಸಿನ ಪ್ರಧಾನಿಗಳು ನಮ್ಮನ್ನು ಬಿಟ್ಟು ಹೋದ ಪಾಕಿಸ್ತಾನದ ಗದ್ದ ತುಟಿ ಹಿಡಿದು ರಮಿಸಿಕೊಂಡೇ ಬಂದರು, ಚೀನಾ ಜೊತೆ ಭಾಯಿ ಭಾಯಿ ಎಂಬ ನಾಟಕವಾಡಿಕೊಂಡು ಭಾರತದ ಭೂಮಿಯನ್ನು ಬಿಟ್ಟು ಕೊಟ್ಟರು. ಆದರೆ ಚೀನಕ್ಕೆ ದಿಟ್ಟ ಉತ್ತರ ಕೊಟ್ಟ ಮೋದಿಯವರು ಚೀನಾ ಹಾರಾಟಕ್ಕೆ ಲಗಾಮು ಹಾಕಿದರು.

ಕೊರೋನಾ ಸಮಯದಲ್ಲಂತೂ ಮೋದಿಯವರು ಕೈಗೊಂಡ ಕ್ರಮಗಳು ನಭೂತೊ ನ ಭವಿಷ್ಯತಿ. ಕೊರೋನಾದಿಂದ ಇಡೀ ಜಗತ್ತೇ ತಲ್ಲಣಗೊಂಡಾಗ ಕಡಿಮೆ ಸಮಯದಲ್ಲಿಯೇ ಅದಕ್ಕೆ ಲಸಿಕೆ ಕಂಡು ಹಿಡಿದು ಇಡೀ ದೇಶಕ್ಕೇ ಉಚಿತವಾಗಿ ಮೂರು ಡೋಸ್ ಗಳನ್ನು ಪೂರೈಸಿ ದೇಶವನ್ನು ಕಾಪಾಡಿದರು. ನಿಜವಾಗಲೂ ಹೇಳಬೇಕೆಂದರೆ ಕೊರೋನಾ ಕಾಲದಲ್ಲಿ  ಮೋದಿಯವರ ಹೊರತಾಗಿ ಬೇರೆ ಯಾರೇ ಪ್ರಧಾನಿ ಇದ್ದರೂ ಪರಿಸ್ಥಿತಿ ಗಂಭೀರವಾಗಿರುತ್ತಿತ್ತು. ಕಾಂಗ್ರೆಸ್ಸಿಗರಿಗೆ ಪ್ರಾಮಾಣಿಕತೆ ಇದ್ದರೆ ಈ ಸಂಗತಿಯನ್ನು ಒಪ್ಪಬೇಕು ಅವರು.

ಇಂಥ ನೂರಾರು ವಿಶೇಷಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹೇಳಬಹುದು. ಅವರ ಯೋಗ್ಯತೆಯ ಸಮೀಪವೂ ಸುಳಿಯದ ಕಾಂಗ್ರೆಸ್ ನಾಯಕರು ಮೋದಿಯವರ ನ್ನು ಪ್ರಾಮಾಣಿಕತೆ ಯಲ್ಲಿ ಎದುರಿಸಲಾಗದೆ ಅವಾಚ್ಯ ಶಬ್ದಗಳಲ್ಲಿ ನಿಂದಿಸುವ ತುಚ್ಛ ಕಾರ್ಯಕ್ಕೆ ಇಳಿದಿದ್ದಾರೆ. ಮೋದಿಯವರನ್ನು ಬೈಯುವಾಗ ಅವರ ಮುಖದ ಭಾವ ನೋಡಬೇಕು‌ ; ಹತಾಶೆ, ನಿರಾಶೆ, ದರಿದ್ರ ಎನ್ನುವುದು ಅವರ ಮುಖದ ಮೇಲೆ ಕುಣಿಯುತ್ತಿರುತ್ತದೆ.  ಇದು ಶತಮಾನದ ಇತಿಹಾಸ ಹೊಂದಿರುವ ಪಕ್ಷದ ನಾಯಕರಿಗೆ ಒಂಚೂರು ಶೋಭೆ ತರುವುದಿಲ್ಲ. ಆದರೆ ನಾಯಿ ಬೊಗಳಿದರೆ ದೇವಲೋಕ ಹಾಳಾಗದು ಎಂಬಂತೆ ಈ ಕಾಂಗ್ರೆಸ್ಸಿಗರು ಹತಾಶೆಯಿಂದ ಎಷ್ಟು ನಿಂದಿಸಿದರೂ ಮೋದಿಯವರ ಘನತೆ ಇನ್ನೂ ಹೆಚ್ಚುತ್ತಲೇ ಇರುತ್ತದೆ.

ಆದರೂ ನಾವು ಕಾಂಗ್ರೆಸ್ ನಾಯಕರಿಗೆ ಹೇಳುವುದೇನೆಂದರೆ, ನೀವು ಏನೇ ಟೀಕೆ ಮಾಡಿ ಅದು ಅಭಿವೃದ್ಧಿ ಪರವಾಗಿರಲಿ, ಸಾತ್ವಿಕವಾಗಿರಲಿ, ನ್ಯಾಯಬದ್ಧವಾಗಿರಲಿ. ಇಲ್ಲಿಯತನಕ ಯೋಗ್ಯತೆಯಲ್ಲಿ ಯಾವ ಕಾಂಗ್ರೆಸ್ ನಾಯಕನೂ ಮೋದಿಯವರ ಸಮಾನ ಬರುವುದಿರಲಿ ಅವರ ಪ್ರಭಾವಲಯದ ಸಮೀಪಕೂಡ ಸುಳಿದಿಲ್ಲ. ಅದಕ್ಕಾಗಿಯೇ ಹೇಳುವುದು ; ಕಾಂಗ್ರೆಸ್ಸಿಗರೆ, ಮೋದಿಯವರನ್ನು ನಿಂದಿಸುವ ಮುನ್ನ ಕನಿಷ್ಠ ಯೋಗ್ಯತೆಯನ್ನಾದರೂ ಇಟ್ಟುಕೊಂಡು ಮಾತನಾಡಿ ಅಂತ.


ಉಮೇಶ ಬೆಳಕೂಡ, ಮೂಡಲಗಿ

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group