ಸವದತ್ತಿ: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಂವಿಧಾನ ದಿನ ಆಚರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿಯವರು ಸಂವಿಧಾನ ದಿನದ ಅಂಗವಾಗಿ ಸಂವಿಧಾನದ ಮಹತ್ವದ ಕುರಿತು ತಿಳಿ ಹೇಳಿದರು.
ನಮ್ಮ ಸಂವಿಧಾನ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ಹಾಗೂ ನಮಗೆ ಸದಾ ಮಾರ್ಗದರ್ಶಿ.ಇದನ್ನು ಗೌರವಿಸಬೇಕಾದದ್ದು ಪ್ರತಿ ಭಾರತೀಯನ ಕರ್ತವ್ಯ. ನಮ್ಮ ಸಂವಿಧಾನದ ಪೀಠಿಕೆಯು ನಮ್ಮ ಭವ್ಯ ಪರಂಪರೆಯ ಕೈಗನ್ನಡಿ ಎಂದು ಹೇಳಿ, ಸಂವಿಧಾನದ ಪೀಠಿಕೆಯನ್ನು ಓದಿ ಎಲ್ಲರಿಂದ ಹೇಳಿಸಿದರು.
ಸದರೀ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಾ ಘಟಕದ ಅಧ್ಯಕ್ಷರಾದ ಹೆಚ್.ಆರ್.ಪೆಟ್ಲೂರ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ವೈ.ಎಂ.ಶಿಂಧೆ, ಮ್ಯಾನೇಜರ್ ಆದ ಮಕಾನದಾರ, ಸುಪರಿಡೆಂಟ್ ಹಿರೇಮಠ, ಶಿಕ್ಷಣ ಸಂಯೋಜಕರಾದ ಕಬೀರ ಡಂಗಿ ಹಾಗೂ ಕಚೇರಿ ಸಿಬ್ಬಂದಿ ಕೊಟ್ರೇಶ, ಬಾಬಾಜಾನ ಮಾಳಗಿ, ಕುಮಾರಿ ವಿದ್ಯಾ, ಪ್ರಶಾಂತ. ಮೋಟೇಕರ, ನೇಗಲಿ, ಮಾವುತ, ಸಿ.ಆರ್.ಪಿಯವರಾದ ವೀರೇಶ.ಚಂದರಗಿ, ಹೆಚ್.ಎಲ್.ನದಾಫ, ಪಾಟೀಲ ಹಾಗೂ ಇನ್ನಿತರರು ಹಾಜರಿದ್ದರು.