ಸಿಂದಗಿ: ದ್ವಿತೀಯ ಪಿ ಯು ಸಿ ವಾರ್ಷಿಕ ಪರೀಕ್ಷೆ ಮಾ. 9 ರಿಂದ 29 ರ ವರೆಗೆ ನಡೆಯಲಿದ್ದು ಸತತ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಿ ಮಕ್ಕಳ ಗುಣಮಟ್ಟವನ್ನು ಹೆಚ್ಚಿಸಿದ್ದೀರಿ ಅದು ಅನಾವರಣಗೊಳ್ಳುವ ಹಂತಕ್ಕೆ ತಲುಪಿಸಿದ್ದೀರಿ. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರಿಪೂರ್ಣವಾಗಿ ಪರೀಕ್ಷೆಗಳನ್ನು ಬರೆಯಬೇಕು ನಕಲು ಮುಕ್ತ ಪರೀಕ್ಷೆಗಳು ನಡೆಯಬೇಕು ಎಂದು ಜಿಲ್ಲಾ ಉಪನಿರ್ದೇಶಕರ ಪ್ರತಿನಿಧಿ ಹೊಸಮನಿ ಹೇಳಿದರು.
ಪಟ್ಟಣದ ಆರ್.ಡಿ.ಪಟೇಲ ಕಾಲೇಜಿನ ಸಭಾಭವನದಲ್ಲಿ ದ್ವಿತೀಯ ಪಿ ಯು ಸಿ ವಾರ್ಷಿಕ ಪರೀಕ್ಷೆ ಮಾ. 9 ರಿಂದ 29 ರ ವರೆಗೆ ನಡೆಯಲಿರುವುದರಿಂದ ಸಿಂದಗಿ, ದೇವರ ಹಿಪ್ಪರಗಿ ಮತ್ತು ಆಲಮೇಲ ತಾಲೂಕಿನ ಪ್ರಾಚಾರ್ಯರು, ಮುಖ್ಯ ಅಧೀಕ್ಷಕರುಗಳ ಪಿಯುಸಿ ಪರೀಕ್ಷಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಿಂದಗಿ, ದೇವರ ಹಿಪ್ಪರಗಿ ಮತ್ತು ಆಲಮೇಲ್ ಪ್ರಾಚಾರ್ಯರು, ಮುಖ್ಯ ಅಧಿಕ್ಷಕರುಗಳ ಹಾಗೂ ಕೆ. ಎ. ಉಪ್ಪಾರ ಮತ್ತು ಕಾಲೇಜಿನ ಪ್ರಾಚಾರ್ಯ ವಿ ಡಿ ಪಾಟೀಲ ನೇತೃತ್ವದಲ್ಲಿ ಸಭೆ ಜರುಗಿತು.