ಮಾ.1ರಿಂದ 6 ರವರೆಗೆ ಕೋಣನಕುಂಟೆ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮತ್ತು ವರ್ಧoತಿ ಮಹೋತ್ಸವ

Must Read

    ಮಂತ್ರಾಲಯ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 404ನೇ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮತ್ತು 430ನೇ ವರ್ಧಂತಿ  ಮಹೋತ್ಸವವನ್ನು ಬೆಂಗಳೂರು ಕೋಣನಕುಂಟೆಯ ಚುಂಚಘಟ್ಟ ಕೊತ್ತನೂರು ಮುಖ್ಯ ರಸ್ತೆಯಲ್ಲಿರುವ ಗುರುರಾಜ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲಮೃತಿಕಾ ಬೃಂದಾವನ ಸನ್ನಿಧಾನದಲ್ಲಿ ಆಯೋಜಿಸಲಾಗಿದೆ.

ಮಾರ್ಚ್ 1ರ ಬೆಳಗ್ಗೆ 108 ಜನರಿಂದ ಶ್ರೀ ಅಪ್ಪಣ್ಣಾಚಾರ್ಯ ಕೃತ  ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ ಲಕ್ಷ ಪುಷ್ಪಾರ್ಚನೆ 11:00ಗೆ ಪಾದುಕಾ ಪಟ್ಟಾಭಿಷೇಕ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಮೂ. ಶ್ರೀಶಾನಂದ ವೇದವ್ಯಾಸಾಚಾರ್ ರವರಿಂದ  ಮಹೋತ್ಸವದ ಉದ್ಘಾಟನೆ

ಸಂಜೆ ಪಂ.ಪೇರೂರು ಜೀವೇಶಾಚಾರ್ಯ ಅವರ ನೇತೃತ್ವದಲ್ಲಿ ವ್ಯಾಸದಾಸ ಸಾಹಿತ್ಯ ಸ್ತೋತ್ರಗಳೊಂದಿಗೆ ವಿಶೇಷ ಶ್ರೀನಿವಾಸ ಕಲ್ಯಾಣ ಮಹೋತ್ಸವ, ವಿದ್ವಾನ್ ಶ್ರೀ ಗಿರೀಶ್ ಹಾಗೂ ಕುಮಾರಿ ವಿದುಷಿ ಸಿರಿ ಕೃಷ್ಣ ರವರಿಂದ ಸಂಗೀತ ನಡೆಯಲಿದೆ.

     ಮಾ.2 ಭಾನುವಾರ ಸಂಜೆ ಶ್ರೀರಾಮ ಕಲಾಸಂಘ ರವರು ನಡೆಸಿಕೊಡುವ ತಾಳಮದ್ದಳೆ , ಸೀತೆಗೆ ರಾಮ ಮುದ್ರಿಕೆ ಪ್ರದಾನ. ಮಾ 3. ಸೋಮವಾರ ಸಂಜೆ ವೈ ವಿ ಗುಂಡೂರಾವ್ ಅವರ ನೇತೃತ್ವದಲ್ಲಿ ಧಾರ್ಮಿಕ ಸಂವಾದ ಕಾರ್ಯಕ್ರಮ ವಿಷಯ- ಶ್ರೀ ರಾಘವೇಂದ್ರ ಸಕಲ ಪ್ರದಾತ.
ಮಾ 4 ಮಂಗಳವಾರ ವಿದ್ವಾನ್ ಶ್ರೀ ಫಣಿಂದ್ರ  ಆಚಾರ್ ರವರ ನೇತೃತ್ವದಲ್ಲಿ ದುರ್ಗಾ ದೀಪ ನಮಸ್ಕಾರ.
ಮಾ 5 ಬುಧವಾರ ಸಂಜೆ ಗಮಕಿ ಡಾ.ಎಂ.ಆರ್ ಸತ್ಯನಾರಾಯಣ ಅವರ ಸಾರಥ್ಯದಲ್ಲಿ ಕರ್ನಾಟಕ ಭಾರತ ಕಥಾ ಮಂಜರಿ ಸೌಗಂಧಿಕಾ ಪ್ರಕರಣ ಹನುಮ ಭೀಮಸಮಾಗಮ ಗಮಕವಾಚನ ವ್ಯಾಖ್ಯಾನ.
ಮಾ 6 ಗುರುವಾರ ಸಂಜೆ ಉತ್ಸವ ರಾಯರಿಗೆ ಸಹಸ್ರ ದೀಪಾಲಂಕಾರ ಉಂಜಲ್ ಸೇವೆ ಚತುರ್ವೇದ  ಪಾರಾಯಣ ಸಂಗೀತ ವಿದುಷಿ ಶ್ರೀಮತಿ ಸುಮಲತಾ ಮಂಜುನಾಥ್, ನಾದಸ್ವರ ಲಕ್ಷ್ಮಿಪತಿ ಮತ್ತು ತಂಡದಿಂದ ಇದರೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group