- Advertisement -
ಮೂಡಲಗಿ: ರೋಗ ನಿರೋಧಕ ಶಕ್ತಿ ಹೊಂದಲು ಹಾಗೂ ಕೊರೋನಾ ರೋಗ ಬಾಧಿಸದಂತೆ ಮುನ್ನೆಚ್ಚರಿಕೆಗಾಗಿ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯುವುದು ಅವಶ್ಯವಿದೆ ಎಂದು ಆಶಾ ಕಾರ್ಯಕರ್ತೆ ಶಕುಂತಲಾ ಗೋಲಶೆಟ್ಟಿ ಹೇಳಿದರು.
ಗುರುವಾರ ಇಲ್ಲಿನ ವಾರ್ಡ ನಂ 17 ಕೆಇಬಿ ಪ್ಲಾಟ್, ಈರಣ್ಣ ನಗರದ ಹನುಮಾನ ದೇವಸ್ಥಾನ ಆವರಣದಲ್ಲಿ ಕೋವಿಡ್ ಲಸಿಕಾ ಶಿಬಿರದಲ್ಲಿ ಮಾತನಾಡಿದ ಅವರು, ಇಲ್ಲಿನ ನಿವಾಸಿಗಳ ಅನುಕೂಲತೆಗಾಗಿ ಈ ವ್ಯವಸ್ಥೆ ಮಾಡಲಾಗಿದೆ ಇದರ ಸದುಪಯೋಗ ಪಡೆದು ಕೋವಿಡ್ ನಿರ್ಮೂಲನೆಗೆ ಸಹಕರಿಸಬೇಕು. ಯಾವುದೇ ಕಾರಣಕ್ಕೂ ಯಾರೂ ಹೆದರದೆ ಎಲ್ಲರೂ ಲಸಿಕೆ ಪಡೆಯಿರಿ ಎಂದರು.
ಆರೋಗ್ಯ ಸಿಬ್ಬಂದಿಗಳಾದ ತಸ್ಲೀಮ ಪೀರಜಾದೆ, ಚೇತನ್ ನಿಶಾನಿಮಠ, ಅಜ್ಜಪ್ಪ ಕರಿಮಸಿ ಹಾಗೂ ಆಶಾ ಕಾರ್ಯಕರ್ತೆಯರಾದ ಮಹಾದೇವಿ ಹಣಬರ, ರತ್ನಾ ದಳವಾಯಿ ಇದ್ದರು.
- Advertisement -
ಈ ಶಿಬಿರದಲ್ಲಿ 300 ಜನರು ಕೋವಿಡ್ ಲಸಿಕೆ ಪಡೆದರು.