ಮೂಡಲಗಿ:-ಪ್ರತಿಯೊಬ್ಬರಿಗೂ ಶಿಕ್ಷಣ ಎಷ್ಟು ಅವಶ್ಯಕವಾಗಿದೆಯೋ,ಸಂಸ್ಕಾರ ಕೂಡಾ ಅಷ್ಟೇ ಮುಖ್ಯವಾಗಿದೆ ಎಂದು ಮುಕುಂದ ಮಹಾರಾಜರು ಹೇಳಿದರು.
ತಾಲೂಕಿನ ಗುಜನಟ್ಟಿ ಗ್ರಾಮದ ಶ್ರೀ ಮಾಧವಾನಂದ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ 18 ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಒಳ್ಳೆಯ ಸಂಸ್ಕಾರವನ್ನು ತಂದೆ ತಾಯಿ ಗುರುಗಳಿಂದ ಮಾತ್ರ ಕೊಡಲು ಸಾಧ್ಯ. ಪ್ರತಿ ಶಾಲೆಯಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿದರೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಆದರ್ಶ ವ್ಯಕ್ತಿಗಳಾಗಿ ಬೆಳೆಯುತ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ, ಶಿಕ್ಷಕರ ಪಾಠವು ಶ್ರೇಷ್ಠವಾಗಿ ,ವೈಚಾರಿಕವಾಗಿ ಮಕ್ಕಳಿಗೆ ಹೃದಯ ತಟ್ಟಿ ಅವರ ಭವಿಷ್ಯಕ್ಕೆ ಪ್ರೇರಣೆಯಾಗಲಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಪ್ರಾಚಾರ್ಯ ಸುರೇಶ ಲಂಕೇಪ್ಪನವರ, ರಾಮಣ್ಣ ನಾಯಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ಕೃಷ್ಣಪ್ಪ ಬಂಡ್ರೋಳಿ, ಶಾಲೆಯ ಅಧ್ಯಕ್ಷ ಜಗದೀಶ ಬಂಡ್ರೋಳಿ,ಸಮೂಹ ಸಂಪನ್ಮೂಲ ಅಧಿಕಾರಿ ಎಸ್.ವಾಯ ಧ್ಯಾಗಾನಟ್ಟಿ, ಮುಖಂಡರಾದ ಮಲ್ಲಪ್ಪ ಬಂಡ್ರೋಳಿ,ಬಸವರಾಜ ಬಂಡ್ರೋಳಿ,ಸಿದ್ಧಾರೂಢ ರೋಡೆತ್ತಿನವರ ,ಮುಖ್ಯೋಪಾಧ್ಯಾಯರಾದ ಎಸ್. ಬಿ ಮದಿಹಳ್ಳಿ ಸೇರಿದಂತೆ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು
ಮನೋಜ್ ಬಂಡ್ರೋಳಿ ಕಾರ್ಯಕ್ರಮ ನಿರೂಪಿಸಿದರು. ವಂದನಾರ್ಪನೆಯನ್ನು ಮಾದೇವ ಸನದಿ ಮಾಡಿದರು.