ಚಾಮರಾಜನಗರ-ರಾಮಸಮುದ್ರ- ಇಲ್ಲಿನ ಹೊಸದುರ್ಗಿ ಬೀದಿ ಬಡಾವಣೆಯೊಂದರಲ್ಲಿ ರವಿವಾರ ಮಧ್ಯಾಹ್ನ 1ಗಂಟೆಯಲ್ಲಿ ಇದ್ದಕ್ಕಿದ್ದ ಹಾಗೆ ನೋಡ ನೋಡುತ್ತಿದ್ದಂತೆ ವಿದ್ಯುತ್ ಕಂಬವೊಂದು ಕೆಳಗಡೆ ಉರುಳಿ ಬೀಳುತ್ತಿರುವುದನ್ನು ಗಮನಿಸಿದ ನಿವಾಸಿಗಳು ಕೆಇಬಿ ಇಂಜಿನಿಯರ್ ಮಂಜುನಾಥ ಅವರಿಗೆ ಕರೆ ಮಾಡಿ ಅಪಾಯವನ್ನು ನಿವಾರಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸಿಬ್ಬಂದಿಗಳನ್ನು ಕರೆಸಿ ಎಲ್ಲಾ ವಿದ್ಯುತ್ ತಂತಿಯನ್ನು ಕತ್ತರಿಸಿ ಸಮಯ ಪ್ರಜ್ಞೆಯನ್ನು ಮೆರೆದು ಮುಂದೆ ಆಗಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ ಮಂಜುನಾಥ್ ರವರಿಗೆ ಓಂ ಶಾಂತಿ ನ್ಯೂಸ್ ಸರ್ವಿಸ್ನ ಬಿಕೆ ಆರಾಧ್ಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಹಾಗೆಯೇ ಮಂಜುನಾಥ್ ರವರೂ ಸಹ ನಿವಾಸಿಗಳನ್ನು ಅಬಿನಂದಿಸಿದ್ದಾರೆ. ಮಳೆಗಾಲದಲ್ಲಿ ಇದು ಸರ್ವೆಸಾಮಾನ್ಯವಾಗಿರುತ್ತದೆ. ಎಲ್ಲೇ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದ್ದರೆ, ಕಂಬಗಳು ಬೀಳುವ ಸ್ತಿತಿಯಲ್ಲಿದ್ದರೆ, ತಂತಿಗಳ ಮೇಲೆ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದರೆ ತಕ್ಷಣ ವಿದ್ಯುತ್ ಮಂಡಳಿಗೆ ಮಾಹಿತಿ ತಿಳಿಸುವಂತೆ ತಿಳಿಸಿದ್ದಾರೆ