spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

spot_img
- Advertisement -

ಮುಕ್ತಾಯಕ್ಕ

ಹನ್ನೆರಡನೆ ಶತಮಾನ
ಜನ್ಮಸ್ಥಳ _ ಲಕ್ಕುಂಡಿ
ವಚನಗಳು_ 37
ಅಂಕಿತನಾಮ_ ಅಜುಗಣ್ಣ ತಂದೆ

ಮುಕ್ತಾಯಕ್ಕ ಲಕ್ಕುಂಡಿ ಗ್ರಾಮದವಳು ಲಕ್ಕುಂಡಿ ಗ್ರಾಮ ಗದಗ ಜಿಲ್ಲೆಯಲ್ಲಿದೆ, ಮುಕ್ತಾಯಕ್ಕ ಅಜ್ಜಗಣ್ಣನ ಸಹೋದರಿ. ಇವರಿಬ್ಬರಲ್ಲಿ ಅನನ್ಯ ಭ್ರಾತೃ ಪ್ರೇಮ.
ತಂದೆ ತಾಯಿ ತೀರಿದ ಮೇಲೆ ಅಧ್ಯಾತ್ಮದ ಗುರೂವು ತಂದೆ ಎಲ್ಲವೂ ಅಜಗಣ್ಣನೇ ಆಗಿದ್ದನು. ಮುಕ್ತಾಯಕ್ಕಳನ್ನು ಮಸಳೆ ಕಲ್ಲು ಎಂಬ ಗ್ರಾಮಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಸಂಶೋಧನೆಯ ಪ್ರಕಾರ ರಾಯಚೂರು ಜಿಲ್ಲೆಯ ಮಸರ ಕಲ್ಲು ಗ್ರಾಮ ಎಂದು ಹೇಳಲಾಗುವುದು.

- Advertisement -

12 ಶತಮಾನದ ಶಿವಶರಣೆಯರಲ್ಲಿ ವಿಶಾಲ ಮನೋಭಾವ, ದಿಟ್ಟ ವ್ಯಕ್ತಿತ್ವ ಸ್ವತಂತ್ರ ಪ್ರವೃತ್ತಿಯ ಶರಣೆ ಎಂದು ಮುಕ್ತಾಯಕನನ್ನು ಗುರುತಿಸುತ್ತೇವೆ. ಈಕೆ ಪ್ರಖರ ವೈಚಾರಿಕತೆಯ ತಾತ್ವಿಕ ಪರಿಜ್ಞಾನದ , ಸೈದ್ಧಾಂತಿಕ ವಿಶ್ಲೇಷಣೆಯ ಉನ್ನತ ತತ್ವಜ್ಞಾನಿ.

ಮುಕ್ತಾಯಕ್ಕ ವಚನ ಸಾಹಿತ್ಯದ ಧ್ರುವತಾರೆ ಎಂದು ಕರೆಯಲಾಗುತ್ತದೆ ಅಕ್ಕಮಹಾದೇವಿಯು ಭಕ್ತಿ ಮಾರ್ಗ, ತಾರ್ಕಿಕ ಜ್ಞಾನಮಾರ್ಗ ಹೊಂದಿದರೆ, ಮುಕ್ತಾಯಕ್ಕ ವೈಚಾರಿಕತೆಯ ದಿಟ್ಟ ನಿಲುವಿನ ಜ್ಞಾನಮಾರ್ಗ ಹೊಂದಿದವಳು. ಈಕೆಯ 37 ವಚನಗಳು ಲಭ್ಯವಾಗಿವೆ. ವಚನಗಳ ಅಂಕಿತನಾಮ ಅಜಗಣ್ಣ ತಂದೆ ಎಂದು ಇವೆ

ಅವಳು ತನ್ನ ವಚನದಲ್ಲಿ ಅಲ್ಲಮಪ್ರಭು, ಬಸವಣ್ಣ, ಚನ್ನಬಸವಣ್ಣ ,ಮರಳು ಶಂಕರ ದೇವರ ಮುಂತಾದ ಶರಣರ ಕಾರುಣ್ಯದಿಂದ ತಾನು ಪ್ರಭಾವಿತಳಾದುದನ್ನು ವಿನಮ್ರತೆಯಿಂದ ಸ್ಮರಿಸಿದ್ದಾಳೆ.

- Advertisement -

ಗುರು ವಚನದಿಂದಲ್ಲದೆ ಲಿಂಗವನರಿಯಬಾರದು .
ಗುರು ವಚನದಿಂದಲ್ಲದೆ ಜಂಗಮವನರಿಯಬಾರದು.
ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು.
ಹಿಂದಣ ಜನ್ಮದಲ್ಲಿ ಲಿಂಗವ ಪೂಜಿಸಿ ಇಂದು ಜ್ಞಾನೋದಯವಾದಡೆ ಗುರುವಿಲ್ಲದೆ ಮುನ್ನ ಆಯಿತ್ತೆನ್ನಬಹುದೇ?
ತನ್ನಲ್ಲಿ ತಾನು ಸನ್ನಿಹಿತನಾದೆನೆಂದಡೆ
ಗುರುವಿಲ್ಲದೆ ಆಗದು ಕೇಳಾ
ಎನ್ನ ಆಜಗಣ್ಣನೆಂಬ ಗುರುವಿಲ್ಲದೆ
ಆರೂಡಿಯ ಕೂಟ ಸಮನಿಸದು ಕೇಳಾ.

ಈ ವಚನದಲ್ಲಿ ಮುಕ್ತಾಯಕ್ಕ ಗುರುವಿಲ್ಲದೆ ಏನೇನೂ ಇಲ್ಲ ಎಂದಿದ್ದಾರೆ. ಮುಂದೆ ಗುರಿ ಹಿಂದೆ ಗುರು ಇದ್ದರೆ ಯಾವುದೇ ಕಾರ್ಯ ಸಫಲವಾಗುವುದೆಂದು ಶರಣರ ನುಡಿ. ಗುರಿಯು ಸುಜ್ಞಾನಯುತವಾಗಿದ್ದರೆ ಮಾನವ ತನ್ನ ನಡೆ-ನುಡಿಯಲ್ಲಿ ಸತ್ಯ ಶುದ್ಧ ವಾಗಿ ಬದುಕಿ ಇತರರಿಗೂ ಮಾರ್ಗದರ್ಶನ ನಾಗುವನು ಎಂಬ ಅಭಿಪ್ರಾಯ ಮುಕ್ತಾ ಯಕ್ಕಳದು

ಅದಕ್ಕೋಸ್ಕರ ಲಿಂಗವನರಿಯ ಬೇಕಾದರೆ ಗುರುವಿನ ಮಾರ್ಗದರ್ಶನ ಅತಿ ಮುಖ್ಯವಾಗಿ ಬೇಕು ಎಂದಿದ್ದಾಳೆ. ಇಷ್ಟ ಲಿಂಗವು ಬರೀ ಕುರುಹಾಗದೆ ಇದು ದೇವನರಿಯುವ ಸಾಧನ ಎಂದು ಗುರುವಚನದಿಂದ ಲಿಂಗವನರಿಯಬೇಕೆಂದಿದ್ದಾಳೆ.
ಇಲ್ಲಿ ಬಸವಣ್ಣನವರ ಒಂದು ವಚನದ ಸಾರ ನೆನಪಾಗುವುದು

ತನುವನ್ನು ಗುರುವಿಗೆ, ಮನವನ್ನು ಲಿಂಗಕ್ಕೆ, ಧನವನ್ನು ಜಂಗಮಕ್ಕೆ ಅರ್ಪಿಸಬೇಕು. ತ್ರಿವಿಧವನ್ನು ಅರ್ಪಿಸದೆ ಲಿಂಗವೆಂಬ ಕುರುಹು ಹಿಡಿದು ಆಯುಷ್ಯ ಕಳೆಯುವವರ ಮೆಚ್ಚನ್ನು ನಮ್ಮ ಕೂಡಲಸಂಗಮದೇವ ನೆಂದಿದ್ದಾರೆ.

ಗುರುವಚನದಿಂದಲ್ಲದೆ ಜಂಗಮನರಿಯಬಾರದು
ಜಂಗಮ (ಸಮಾಜ )ಸಮಷ್ಟಿ ಅರಿಯಬೇಕಾದರೂ ದಾಸೋಹತತ್ವದಿಂದಲೆ ಸಾಧ್ಯ ಎಂದು
ತನ್ನ ತಾನ ಅರಿಯಲು ಗುರು ಉಪದೇಶಿಸಿದ ಮಾನವ ಜನ್ಮದ ಸಾಫಲ್ಯತೆ ಅರಿತು ತಾನು ಯಾರು ಎಂದು ಅರಿಯಲು ಗುರು ವಚನವೇ ಬೇಕು ಎಂದಿದ್ದಾಳೆ.

ಹಿಂದಣ ಜನ್ಮದಲ್ಲಿ ಲಿಂಗವ ಪೂಜಿಸಿ ಇಂದು ಜ್ಞಾನೋದಯವಾದಡೆ
ಗುರುವಿಲ್ಲದ ಮುನ್ನ ಆಯಿತೆನ್ನಬಹುದೇ?

ಪುನರ್ಜನ್ಮ ಶರಣರು ಒಪ್ಪರು ಆದರೂ ಹಿಂದಿನ ಜನ್ಮದ ಪುಣ್ಯದಿಂದ ನಾನು ಲಿಂಗ ವ ಪೂಜಿಸಿದ್ದಕ್ಕಾಗಿ ಇಂದು ನನಗೆ ಜ್ಞಾನೋದಯವಾಗಿದೆ ಎಂದು ಹೇಳುವವರಿಗೆ, ಗುರುವಿಲ್ಲದೆ ಅದು ಹೇಗೆ ಸಾಧ್ಯವೆಂದು ಪ್ರಶ್ನಿಸಿದ್ದಾಳೆ.

ತನ್ನನ್ನು ತಾನು ಸನ್ನಿಹಿತನಾಗುವುದು ಸದಾಚಾರಿಯಾಗಿ ದೇವನಲ್ಲಿ ಸಂಪೂರ್ಣ ಶರಣಾಗತ ನಾಗಲು ಅರಿತು ಶರಣಾಗಲೂ ಗುರುವಿನ ಕಾರುಣ್ಯ ಬೇಕೆಂದು, ನನ್ನ ಅಜಗಣ್ಣ ಗುರುವಿನ ಕರುಣೆಯಿಂದ ನಾನು ಆರೂಡಿಯ(ನಿರ್ವಾಣ ಬಯಲು) ಸ್ಥಿತಿಗೆ ಬರಲು ಸಾಧ್ಯವಾಯಿತು ಸಾಧ್ಯವಾಗುವುದು ಎಂದು ಮುಕ್ತಾಯಕ್ಕ ತಿಳಿಸಿದ್ದಾಳೆ.
…………………………………….
ಸರಸ್ವತಿ ಬಿರಾದಾರ

- Advertisement -
- Advertisement -

Latest News

ಹಳಕಟ್ಟಿ ಭವನದಲ್ಲಿ ಶರಣ ಸಂಪ್ರದಾಯ ಮತ್ತು ಅದರ ಪ್ರಸ್ತುತತೆ ಕುರಿತು ಉಪನ್ಯಾಸ

ದಿ; 12  ರಂದು ರವಿವಾರ ಲಿಂಗಾಯತ ಸಂಘಟನೆ ವತಿಯಿಂದ ನಡೆದ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಳಗಾವಿಯ ಅನುಭಾವಿ ಸಾಹಿತಿಗಳಾದ ಎಸ್ ಬಿ ಸೋಮಣ್ಣವರ...
- Advertisement -

More Articles Like This

- Advertisement -
close
error: Content is protected !!
Join WhatsApp Group