ಸ್ಯಾಂಡಲ್ವುಡ್ ನ ಟಾಪ್ ನಟರಲ್ಲಿ ದರ್ಶನ್ ಹಾಗೂ ಸುದೀಪ್ ಇಬ್ಬರೂ ಕೂಡ ಇದ್ದಾರೆ. ಈಗ ಇವರಿಬ್ಬರ ನಡುವೆ ಇದ್ದ ಸ್ನೇಹ ಮುರಿದು ಬಿದ್ದು 4 ವರ್ಷಗಳೇ ಕಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಅಂತು ಅವರ ಅಭಿಮಾನಿಗಳು ಕಿತ್ತಾಟ ಮಾಡುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಹಾಗಂತ ಎಲ್ಲಾ ಅಭಿಮಾನಿಗಳು ಇದೇ ರೀತಿ ಇರುತ್ತಾರೆ ಎಂದು ಹೇಳಲಾಗುವುದಿಲ್ಲ, ದರ್ಶನ್ ಹಾಗೂ ಸುದೀಪ್ ಒಂದಾಗಲಿ ಎಂದು ಬಯಸುವ ಅಭಿಮಾನಿಗಳು ಕೂಡ ತುಂಬಾ ಜನ ಇದ್ದಾರೆ. ಅವರೆಲ್ಲರೂ ಈಗ ಟ್ವಿಟರ್ನಲ್ಲಿ ಒಂದು ಅಭಿಯಾನವನ್ನು ಶುರು ಮಾಡಿದ್ದಾರೆ.
ಸ್ಟಾರ್ ನಟರಿಬ್ಬರು ಒಂದಾದರೆ ಆದರಿಂದ ಕನ್ನಡ ಚಿತ್ರರಂಗಕ್ಕೆ ಇನ್ನೂ ಒಳ್ಳೆಯದಾಗುತ್ತದೆ ಎಂದು ಅನೇಕರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ, ಇಬ್ಬರು ಜೊತೆಯಾಗಿರುವ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡುತ್ತಿದ್ದಾರೆ. ಹಾಗೇನೆ ಡಿ ಬಾಸ್ ಕಿಚ್ಚ ಕಂಮ್ ಟುಗೆದರ್ ಎನ್ನುವ ಟ್ಯಾಗ್ ಅನ್ನು ಯೂಸ್ ಮಾಡುತ್ತಿದ್ದಾರೆ. 10 ಸಾವಿರಕ್ಕೂ ಅಧಿಕ ಬಾರಿ ಈ ಟ್ಯಾಗ್ ಬಳಕೆಯಾಗಿದ್ದು ಈಗ ಟ್ವಿಟರ್ನಲ್ಲಿ ಇದು ಟ್ರೆಂಡ್ ಶುರು ಮಾಡುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಅನೇಕ ಹಿರಿಯ ನಟರು ಕಲಾವಿದರು ಕೂಡ ಇದನ್ನೇ ಬಯಸುತ್ತಿದ್ದಾರೆ. ಸ್ಯಾಂಡಲ್ವುಡ್ನ ಒಗ್ಗಟ್ಟಿಗಾಗಿ ಇವರೆಲ್ಲರೂ ಪ್ರಯತ್ನ ಮಾಡುತ್ತಿದ್ದಾರೆ.
ಅಭಿಯಾನಕ್ಕೆ ಇನ್ನಷ್ಟು ಬಲ ಬರುವ ನಿರೀಕ್ಷೆ ಕಾಣುತ್ತಿವೆ. ಇಬ್ಬರು ಈ ಸ್ಟಾರ್ ನಟರ ಅಭಿಮಾನಿಗಳು ಜೊತೆಯಾಗಿ ಈ ರೀತಿ ಡಿಮೆಂಟ್ ಮಾಡುತ್ತಿರುವುದಕ್ಕೆ ದರ್ಶನ್ ಮತ್ತು ಸುದೀಪ್ ಕಂಡಿತ ಇದನ್ನು ಗಮನಿಸುತ್ತಿರುತ್ತಾರೆ. ಆದರೆ ಅದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಕೊಡುತ್ತಾರೆ ಎನ್ನುವಂತಹ ಕುತೂಹಲ ಎಲ್ಲರನ್ನು ಕಾಡುತ್ತಿದೆ. ದರ್ಶನ್ ಹಾಗು ಸುದೀಪ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟರು. ಇಬ್ಬರಿಗೂ ಕೋಟ್ಯಾಂತರ ಅಭಿಮಾನಿಗಳು ಇದ್ದಾರೆ. ಕೆಲವೊಂದು ಸಲ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಹಾಗೂ ಡಿ ಬಾಸ್ ಫ್ಯಾನ್ ನಡುವೆ ವಾದ-ವಿವಾದಗಳು ನಡೆಯುವುದು ಸಹ ಸಹಜವಾಗಿಬಿಟ್ಟಿದೆ. ಇದರ ನಡುವೆ ಅಭಿಮಾನಿಗಳೆಲ್ಲರೂ ಸೇರಿ ಇಂತಹ ಒಂದು ಒಳ್ಳೆಯ ಪ್ರಯತ್ನಕ್ಕೆ ಕೈ ಹಾಕಿರುವುದು ನಿಜಕ್ಕೂ ಒಳ್ಳೆಯದು, ಸ್ನೇಹದಲ್ಲಿ ಒಂದು ಮಾತು ಬರುತ್ತದೆ ಹೋಗುತ್ತದೆ ಹಾಗಂತ ಸ್ನೇಹವನ್ನು ದೂರ ಮಾಡಬಾರದು ಅಲ್ಲವಾ ಹೀಗಾಗಿ ಇವರಿಬ್ಬರನ್ನು ಒಂದು ಮಾಡಲು ಟ್ವಿಟರ್ನಲ್ಲಿ ಅಭಿಮಾನಿಗಳು ತಮ್ಮ ಪ್ರಯತ್ನವನ್ನು ಮಾಡುತ್ತಿದ್ದಾರೆ…