ಶಿವಸಾಗರ ಭವನ ಲೋಕಾರ್ಪಣೆ

Must Read

ಆಧ್ಯಾತ್ಮಿಕ ಸೇವೆಗಾಗಿ ಈಶ್ವರೀಯ ವಿಶ್ವವಿದ್ಯಾಲಯದ ಶಿವ ಸಾಗರ‌ ಭವನವನ್ನು ಲೋಕಾರ್ಪಣೆಗೊಳಿಸಿದ ಕರುಣಾಜಿ

ಶ್ರೀರಂಗಪಟ್ಟಣ (ಹುಲಿಕೆರೆ) ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ‌ ಬ್ರಹ್ಮಾಕುಮಾರಿ‌ ಈಶ್ವರೀಯ ವಿಶ್ವವಿದ್ಯಾಲಯವು ಹುಲಿಕೆರೆ ಗ್ರಾಮದ ಬಿಜಿಎಸ್ ಬಡಾವಣಿಯಲ್ಲಿ ನೂತನವಾಗಿ ನಿರ್ಮಿಸಿರುವ ಶಿವಸಾಗರ‌ ಭವನವನ್ನು ಆಧ್ಯಾತ್ಮಿಕ ‌ವಿಶ್ವಸೇವೆಗಾಗಿ ಮೌಂಟ್ಅಬು ರಾಜಸ್ಥಾನದ ಮೀಡಿಯಾ ವಿಭಾಗದ ಅಧ್ಯಕ್ಷರಾದ ರಾಜಯೋಗಿ ಬ್ರಹ್ಮಾಕುಮಾರ ಕರುಣಾಜಿಯವರು‌ ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿ ದಕ್ಷಿಣ ಭಾಗದಲ್ಲಿ ಶಿವನ ದೇವಾಲಯವನ್ನು ಕಾಣುತ್ತೇವೆ. ಈಶ್ವರೀಯ ವಿಶ್ವವಿದ್ಯಾಲಯವು ಪರಮಾತ್ಮಶಿವನ ಯಥಾರ್ಥ‌‌ ಪರಿಚಯ ನೀಡಿ ಅನುಭೂತಿ ಮಾಡಿಸಿ ಸುಖ ಶಾಂತಿಯ ಮಾರ್ಗವನ್ನು ತೋರಿಸುತ್ತಿದೆ. ಜಾತಿ ಮತ‌ಭೇದವಿಲ್ಲದೆ ಅಬಾಲವೃದ್ಧಾದಿಯಾಗಿ ಉಚಿತವಾಗಿ ರಾಜಯೋಗಾಭ್ಯಾಸ ಕಲಿಯಹುದು ಎಂದರು.

ವಿಮಾನ ನಿಲ್ದಾಣದ ನಿರ್ದೇಶಕರಾದ ಆರ್.ಮಂಜುನಾಥ್ ಮಾತನಾಡಿ, ಜೀವನದ ಬದಲಾವಣೆಗಾಗಿ ರಾಜಯೋಗ ಶಿಕ್ಷಣ ಸಂಜೀವಿನಿಯಾಗಿದೆ.‌‌ ೨೧ ದಿನಗಳ ಪ್ರಾಯೋಗಿಕ ಜೀವನದಲ್ಲಿ‌ ಅಳವಡಿಸಿಕೊಂಡಿದ್ದೇ ಆದಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಳ್ಳಬಹುದು ಎಂದು ತಮ್ಮ ಜೀವನದಲ್ಲಿ ಕಂಡುಕೊಂಡ ಅನುಭವವನ್ನು ಹಂಚಿಕೊಂಡರು.

ಮೈಸೂರು ಉಪವಿಭಾಗದ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ ಆಶೀರ್ವಚನ ನೀಡಿ ಶಿವ ಸಾಗರ ಭವನವನಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ವಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮಕ್ಕೆ ಮೊದಲು ಗ್ರಾಮದ ರಾಜಬೀದಿಗಳಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಬ್ರಹ್ಮಾಕುಮಾರ ಬ್ರಹ್ಮಾಕುಮಾರಿಯರು ಶಾಂತಿ ಸದ್ಭಾವನೆಯ ಯಾತ್ರೆಯನ್ನು ನಡೆಸಿದರು.

ಸಭೆಯಲ್ಲಿ ಬಿ ಕೆ ರಂಗನಾಥ ವೀರಂಸಿಂಗ್ ಬಿ ಕೆ ಮಣಿ ಬಿ ಕೆ ಶಾರದಾಜಿ ಬಿ ಕೆ ಮಂಜುಳ ‌ಸುಶೀಲ ಗಿರಿಗೌಡ ಬಿ ಕೆ ಆರಾಧ್ಯ ಹಾಜರಿದ್ದರು. ಸಾರ್ವಜನಿಕರಿಗೆ ನೆನಪಿನ ಕಾಣಿಕೆ ನೀಡಲಾಯಿತು.

Latest News

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು – ಡಾ. ಎಚ್ ಸಿ ಎಮ್

   ಮೈಸೂರು: ಇಂದಿನ ಮಕ್ಕಳು ನಾಳೆಯ ನಾಗರಿಕರು. ಆದ್ದರಿಂದ ಗುಣಮಟ್ಟದ ಶಿಕ್ಷಣದ ಮೂಲಕ ಅವರನ್ನು ಉನ್ನತ ವ್ಯಕ್ತಿತ್ವಗಳಾಗಿ ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದು ಮೈಸೂರು...

More Articles Like This

error: Content is protected !!
Join WhatsApp Group