Homeಸುದ್ದಿಗಳುಕಲಬುರಗಿ ವಿಶ್ವ ವಿದ್ಯಾಲಯಕ್ಕೆ ಬಸವೇಶ್ವರ ಹೆಸರು ನಾಮಕರಣ ಕ್ಕೆ ಆಗ್ರಹ

ಕಲಬುರಗಿ ವಿಶ್ವ ವಿದ್ಯಾಲಯಕ್ಕೆ ಬಸವೇಶ್ವರ ಹೆಸರು ನಾಮಕರಣ ಕ್ಕೆ ಆಗ್ರಹ

ಬೀದರ – ಭೀಮಣ ಖಂಡ್ರೆಯವರ ಕಾಲದಿಂದಲೂ ಕಲಬುರಗಿ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರು ಇಡಬೇಕೆಂದು ಹೋರಾಟ ಮಾಡುತ್ತಾ ಬಂದಿದ್ದಾರೆ. ನಮ್ಮ ಹೋರಾಟ ಇನ್ನೂ ಜೀವಂತ ಇದೆ. ಈ ಹೋರಾಟಕ್ಕೆ ಮಾನ್ಯತೆ ಕೊಡಬೇಕು ಎಂದು ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ  ಉಪಾಧ್ಯಕ್ಷೆ ಡಾ.ಗುರಮ್ಮ ಸಿದ್ದಾರೆಡ್ಡಿ ಆಗ್ರಹಿಸಿದರು.

ಬೀದರನಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, ಇದಕ್ಕೆ ದಲಿತ ಸಮುದಾಯದವರು ಅಡ್ಡಿ ಪಡಿಸಿದರೆ ಅವರಿಗೆ ಇನ್ನೊಂದು ಕಡೆ ವ್ಯವಸ್ಥೆ ಮಾಡಿಕೊಡುವುದು ಸೂಕ್ತ. ಬೇರೆ ವಿಶ್ವ ವಿದ್ಯಾಲಯಕ್ಕೆ ಅಂಬೇಡ್ಕರ್ ಅವರ ಹೆಸರು ಇಡಬೇಕು ಎಂದರು.

ಜಾತಿಗಣತಿ ವರದಿ ಬಿಡುಗಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಉಪಾಧ್ಯಕ್ಷೆ, ರಾಜ್ಯ ಸರ್ಕಾರ ಜಾತಿ ಜಾತಿಯಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಾ ಬಂದಿದೆ‌ ಸಮಾಜ ಒಡೆವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬಾರದು. ಜಾತಿಗಣತಿ ಮೊದಲಿಂದಲೂ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಜಾತಿಗಣತಿ ಮಾಡುವುದರಿಂದ ಸಮಾಜದಲ್ಲಿ ಒಡಕು ಹುಟ್ಟುತ್ತದೆ ಸಮಾಜದಲ್ಲಿ ಒಳಜಗಳ ಹೆಚ್ಚಾಗುತ್ತದೆ.ಸಮಾಜದಲ್ಲಿ ವೈಷಮ್ಯ ಹುಟ್ಟುತ್ತದೆ ಸಮಾಜ ಬೆಳವಣಿಗೆ ಆಗಲು ಸಾಧ್ಯವಿಲ್ಲ ಎಂದರು.

ಶಾಮನೂರು ಶಿವಶಂಕರಪ್ಪ ನಮ್ಮ ರಾಷ್ಟ್ರೀಯ ವೀರಶೈವ ಲಿಂಗಾಯತ ಅಧ್ಯಕ್ಷರು ಕೊಡ ವಿರೋಧ ವ್ಯಕ್ತಪಡಿಸಿದ್ದಾರೆ.

ದೇಶ ರಾಜ್ಯ ಅಭಿವೃದ್ಧಿ ಆಗಬೇಕೆಂದು ನಮ್ಮ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ನಾಯಕರ ಅಭಿಪ್ರಾಯ. ಅದಕ್ಕಾಗಿ ರಾಜ್ಯ ಸರ್ಕಾರ ಜಾತಿಗಣತಿ ವರದಿ ಬಿಡುಗಡೆ ಮಾಡಿದರೆ ನಾವು ವಿರೋಧ ಮಾಡುತ್ತೇವೆ ಎಂದು ಡಾ.ಗುರಮ್ಮ ಹೇಳಿದರು.


ವರದಿ: ನಂದಕುಮಾರ ಕರಂಜೆ,ಬೀದರ

RELATED ARTICLES

Most Popular

error: Content is protected !!
Join WhatsApp Group