Homeಸುದ್ದಿಗಳುಕಲ್ಲೋಳಿ ಹಣಮಂತ ದೇವರ ಜಾತ್ರೆಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ

ಕಲ್ಲೋಳಿ ಹಣಮಂತ ದೇವರ ಜಾತ್ರೆಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ

ಮೂಡಲಗಿ: ತಾಲೂಕಿನ ದೇವರ ಕಲ್ಲೋಳಿಯ ಶ್ರೀ ಹಣಮಂತ ದೇವರ ಜಾತ್ರೆಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಕಲ್ಲೋಳಿಯ ಜೈ ಹನುಮಾನ ಯುವ ಜನ ಸೇವಾ ಸಂಘದ ಪದಾಧಿಕಾರಿಗಳು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಗೋಕಾಕ ಘಟಕ ರಾಯಬಾಗ ಘಟಕ ಮತ್ತು ಅಥಣಿ ಘಟಕಗಳಿಗೆ ಮನವಿ ಸಲ್ಲಿಸಿದರು.

ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಹಣಮಂತ ದೇವರು ನಾಡಿನಾದ್ಯಂತ ಪ್ರಸಿದ್ಧ ದೇವಸ್ಥಾನವಾಗಿದ್ದು ಡಿ. 30-12-2023 ರಿಂದ ದಿ:06-01-2024ರ ವರೆಗೆ ಅತಿ ವಿಜೃಂಭಣೆಯಿಂದ ಜಾತ್ರಾ ಕಾರ್ತಿಕೋತ್ಸವ ಜರುಗುವುದು. ಈ ಪುಣ್ಯ ಕ್ಷೇತ್ರಕ್ಕೆ ನಾಡಿನಾದ್ಯಂತ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ದೇವರ ದರ್ಶನಕ್ಕೆ ಬರುವರು ಹಾಗೂ ಹೊರ ರಾಜ್ಯಗಳಿಂದ ಜನರು ಸಹ ಬರುವರು. ಸರ್ಕಾರದ ಮಹಿಳೆಯರ ಉಚಿತ ಪ್ರಯಾಣದಿಂದ ಬಸ್ಸಿನ ಕೊರತೆಯಾಗಿ ಬಹಳ ತೊಂದರೆಯಾಗಿದೆ. ಆದ್ದರಿಂದ ದೇವರ ದರ್ಶನ ಪಡೆಯಲು ಬರುವ ಭಕ್ತಾದಿಗಳಿಗೆ ತೊಂದರೆಯಾಗದಂತೆ ಸುತ್ತಮುತ್ತಲಿನ ತಾಲೂಕು ಘಟಕಗಳಾದ ಗೋಕಾಕ, ಮೂಡಲಗಿ, ರಾಯಬಾಗ, ಅಥಣಿ ಘಟಕಗಳಿಂದ ಸೂಕ್ತ ರೀತಿಯಲ್ಲಿ ಬಸ್ಸಿನ ಸೌಲಭ್ಯ  ಜೊತೆಗೆ ಜಾತ್ರಾ ವಿಶೇಷವಾಗಿ ಹೆಚ್ಚುವರಿ ಬಸ್ಸಗಳನ್ನು ಬಿಡಬೇಕೆಂದು ಮನವಿ ಮುಖಾಂತರ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪರಶುರಾಮ ಇಮಡೇರ, ಉಪಾಧ್ಯಕ್ಷ ಮಹಾಂತೇಶ ಕಡಲಗಿ, ಸುರೇಶ ಕಲಾಲ, ಹನುಮಂತ ತೋಟಗಿ, ಅನಿಲ ಖಾನಗೌಡ್ರ, ರಾಜಪ್ಪ ಮಾವರಕರ, ಸಿದ್ದಪ್ಪ ಪೂಜೇರಿ, ಭೀಮಶಿ ಕಡಲಗಿ, ರಾಮಣ್ಣ ಕಾಡದವರ, ಸಿದ್ದಪ್ಪ ಉಮರಾಣಿ, ನಾಗರಾಜ ಕಲಾಲ, ಪಾಂಡುರಂಗ ಬಡಿಗೇರ, ಭೀಮಶಿ ಗೋಕಾವಿ  ಮತ್ತಿತರು ಇದ್ದರು.

RELATED ARTICLES

Most Popular

error: Content is protected !!
Join WhatsApp Group