spot_img
spot_img

ವಿಕಲಚೇತನರ ಬೇಡಿಕೆ ಈಡೇರಿಕೆಗೆ ಮನವಿ

Must Read

- Advertisement -

ಕೊಪ್ಪಳ: ವಿಕಲಚೇತನರ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ವಿಕಲಚೇತನ ನೌಕರರ ಸಂಘದ ವತಿಯಿಂದ ವಸತಿ ಸಚಿವರಾದ ವಿ.ಸೋಮಣ್ಣ ಅವರಿಗೆ ಇಂದು ಬೆಂಗಳೂರಿನ ಅವರ ನಿವಾಸದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಸರಕಾರದಿಂದ ನೀಡಲಾಗುವ ಮನೆಗಳಲ್ಲಿ ವಿಕಲಚೇತನರಿಗೆ ಮೀಸಲಿಡಬೇಕಾದ ಮನೆಗಳನ್ನು ಮೀಸಲಿಡದೇ ಪ್ರಭಾವ ಬಳಸಿ ಬೇರೆಯವರು ಅದರ ಸೌಲಭ್ಯವನ್ನು ಪಡೆಯುತ್ತಿದ್ದು, ಕೂಡಲೇ ಸರಕಾರವು ವಿಕಲಚೇತನರಿಗೆ ಕಡ್ಡಾಯವಾಗಿ ವಿವಿಧ ಯೋಜನೆಗಳನ್ನು ನೀಡಲಾಗುವ ಮನೆಗಳ ಹಂಚಿಕೆಯಲ್ಲಿ ವಿಕಲಚೇತನರಿಗೆ ಶೇಕಡಾ ೫ ರಷ್ಟು ಮನೆಗಳನ್ನು ಮೀಸಲಿಡುವುದರ ಜೊತೆಗೆ ಅದರ ಸಮರ್ಪಕವಾದ ರೀತಿಯಲ್ಲಿ ಅನುಷ್ಟಾನ ಆಗುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ಮಾಡಬೇಕು ಹಾಗೂ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ವತಿಯಿಂದ ನೀಡಲಾಗುವ ನಿವೇಶನ ಹಾಗೂ ಮನೆಗಳ ಹಂಚಿಕೆಯಲ್ಲಿ ವಿಕಲಚೇತನ ನೌಕರರ ಶೇಕಡಾ ೫ ರಷ್ಟು ಮನೆ ಹಾಗೂ ನಿವೇಶನಗಳನ್ನು ಮೀಸಲಿಡುವುದರ ಜೊತೆಗೆ ವಿಕಲಚೇತನ ನೌಕರರ ಖರೀದಿ ಮಾಡುವ ನಿವೇಶನ ಹಾಗೂ ಮನೆಯ ಹಣದ ಮೇಲೆ ಶೇಕಡಾ ೨೫ ರಷ್ಟು ಹಣವನ್ನು ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಬಳಿಕ ಸಚಿವರಾದ ವಿ.ಸೋಮಣ್ಣ ಮಾತನಾಡುತ್ತಾ,ನಿಮ್ಮ ಸಂಘದ ಬೇಡಿಕೆಗಳು ನ್ಯಾಯಯುತವಾಗಿದ್ದು,ಅವುಗಳ ಬಗ್ಗೆ ಅಧಿಕಾರಿಗಳು ಜೊತೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಅಲ್ಲದೇ ಎಲ್ಲಾ ಯೋಜನೆಗಳನ್ನು ವಸತಿಗಳ ಹಂಚಿಕೆಯಲ್ಲಿ ವಿಕಲಚೇತನರಿಗೆ ಮೀಸಲಾತಿ ನೀಡುವಂತೆ ಹಾಗೂ ಅದರ ಸಮರ್ಪಕವಾದ ರೀತಿಯಲ್ಲಿ ಅನುಷ್ಠಾನ ಮಾಡುವಂತೆ ಜೊತೆಗೆ ಅದರ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ತಿಳಿಸುತ್ತೆನೆ ಎಂದು ಹೇಳಿದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group