ವಿದ್ಯಾರ್ಥಿಗಳಿಂದ ಡೆಂಗ್ಯೂ ಜಾಗೃತಿ ಕಾರ್ಯಕ್ರಮ

Must Read

ಸಿಂದಗಿ; ಡೆಂಗ್ಯೂಜ್ವರವು ಒಂದು ರೀತಿಯ ಸೊಳ್ಳೆಯಿಂದ ಹರಡುವ ಒಂದು ರೋಗ. ಇದು ಒಂದು ಹಳದಿ ಜ್ವರಕ್ಕೆ ಕಾರಣವಾಗುವ ವೈರಸ್‌ಗೆ ಸಂಬಂಧಿಸಿದೆ. ಸೋಂಕಿತ ಸೊಳ್ಳೆಯ ಕಡಿತದ ಮೂಲಕ ಈ ವೈರಸ್‌ಗಳು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂದು ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಂತೋಷ್ ಹೇಳಿದರು.

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಹಾಗೂ ಬೆಂಗಳೂರಿನ ಸಂತ ಜೋಸೆಫ್ ಸ್ನಾತಕ್ಕೊತ್ತರ ಪದವಿ ಕಾಲೇಜ್ ವಿದ್ಯಾರ್ಥಿಗಳಿಂದ ಡೆಂಗ್ಯೂ ಜ್ವರ ಕುರಿತ ಜಾಗೃತಿ ಸಮಾರಂಭದಲ್ಲಿ ಮಾತನಾಡಿ, ಡೆಂಗ್ಯೂ ಜ್ವರದ ಲಕ್ಷಣಗಳು ಮುಂಚಿತವಾಗಿ ಹೊಟ್ಟೆಯಲ್ಲಿ ನೋವು, ನಿರಂತರ ವಾಂತಿ, ರಕ್ತ ಸ್ರಾವ, ಆಯಾಸ, ನಿಧಾನಗತಿಯಲ್ಲಿ ಜ್ವರ ಕಂಡುಬರುತ್ತದೆ.

ಡೆಂಗ್ಯೂ ಜ್ವರದಿಂದ ದೂರ ಇರಲು ಪ್ರಮುಖ ಮುಂಜಾಗೃತ ಕ್ರಮಗಳಾದ ಮನೆಯ ಸುತ್ತಮುತ್ತ ನೀರು ನಿಲ್ಲದ ಹಾಗೆ ನೋಡಿಕೊಳ್ಳುವುದು ಹಾಗೂ ಮನೆಯ ಒಳಗೆ ಹಾಗೂ ಹೊರಗೆ ಸ್ವಚ್ಚತೆಯನ್ನು ಕಾಪಾಡುವುದು. ಮಲಗುವಾಗ ಸೊಳ್ಳೆ ಪರದೆಯನ್ನು ಬಳಸುವುದರಿಂದ ಸೊಳ್ಳೆಗಳಿಂದ ದೂರ ಇರಬಹುದು ಎಂದರು.

ಇದರ ಜೊತೆಗೆ ಬಾಲ್ಯ ವಿವಾಹ, ಶಿಕ್ಷಣ ಮಹತ್ವ ಇವುಗಳನ್ನು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group