Homeಸುದ್ದಿಗಳುದೇವದಾಸಿಯರಿಗೆ ಒಳ ಮೀಸಲಾತಿ ನೀಡಬೇಕು ; ಅಮ್ಮ ಫೌಂಡೇಶನ್ ಆಗ್ರಹ

ದೇವದಾಸಿಯರಿಗೆ ಒಳ ಮೀಸಲಾತಿ ನೀಡಬೇಕು ; ಅಮ್ಮ ಫೌಂಡೇಶನ್ ಆಗ್ರಹ

ಚಿಕ್ಕೋಡಿ: ರಾಜ್ಯದಲ್ಲಿ36 ಸಾವಿರ ದೇವದಾಸಿಯರಿದ್ದಾರೆ. ದೇವದಾಸಿಯರಿಗೆ ಸರಕಾರದ ನೇಮಕಾತಿಗಳಲ್ಲಿ ಒಳ ಮೀಸಲಾತಿ ನೀಡಬೇಕು. ದೇವದಾಸಿ ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಂಡು ಸಮಾಜದ ಮುಖ್ಯವಾನಿಗೆ ಬರುವಂತೆ

ಅಮ್ಮಾ ಫೌಂಡೇಷನ್ ಕಾರ್ಯದರ್ಶಿ ಶೋಭಾ ಘಸ್ತಿ ಕರೆ ನೀಡಿದರು.

ಬುಧವಾರ ಪಟ್ಟಣದ ಹೊರವಲಯದಲ್ಲಿ ಇರುವ  ಆರ್ 8 ಹೊಟೇಲ್ ಸಭಾಭವನದಲ್ಲಿ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ವತಿಯಿಂದ ಮಾಧ್ಯಮ ಮಿತ್ರರು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಮತ್ತು ಮಕ್ಕಳು ಹಾಗೂ ದೇವದಾಸಿ ಮಹಿಳೆಯರ ಸಮಸ್ಯೆಗಳ ಕುರಿತು ಸರಕಾರದಿಂದ ಹೊರಡಿಸಲಾದ ಆದೇಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ದೇವದಾಸಿಯರು ಸಮಾಜದಲ್ಲಿ ಹಲವಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದಾರೆ. ಅವರ ಸಮಸ್ಯೆ ಬಗೆಹರಿಸಲು ಸರಕಾರ ಕ್ರಮಕೈಗೊಳ್ಳಬೇಕಾಗಿದೆ. ಇದೀಗ ರಾಜ್ಯದಲ್ಲಿ ದೇದಾಸಿಯರ ಮರು ಸಮೀಕ್ಷೆ ನಡೆಸುವಂತೆ ಮನವಿ ಮಾಡಿದರು. ಇಂದಿನ ದಿನಮಾನಗಳಲ್ಲಿ ದೇವದಾಸಿ ಮಕ್ಕಳಿಗೆ ಸರಕಾರ ಉನ್ನತ ಶಿಕ್ಷಣ ಹಾಗೂ ಸರಕಾರಿ ನೌಕರಿಯಲ್ಲಿ ಒಳಮೀಸಲಾತಿ ನೀಡುವಂತೆ ಮನವಿ ಮಾಡಿದರು.

ದೇವದಾಸಿಯರು ಸ್ವಾವಲಂಬಿ, ಆರ್ಥಿಕವಾಗಿ, ಸಬಲರಾಗುವ ನಿಟ್ಟಿನಲ್ಲಿ ಅವರಿಗೆ ಸರಕಾರ ವಿಶೇಷ ಸೌಲಭ್ಯ ನೀಡಲು ಮುಂದಾಗುವಂತೆ ಒತ್ತಾಯಿಸಿದರು.

ಪಂಚಾಯತಿಗಳಲ್ಲಿ ವಸತಿ ಜಾಬ್ ಕಾರ್ಡ ಸಿಗುತ್ತಿಲ್ಲ.ದೇವದಾಸಿಯರು ಉಳುಮೆ ಮಾಡುತ್ತಿರುವ ಜಮೀನುಗಳು ನೀಡಲು ಸರಕಾರ ಗಂಭಿರವಾದ ಚಿಂತನೆ ಮಾಡಬೇಕು ಎಂದರು.

ಅಮ್ಮ ಫೌಂಡೇಶನ್‍ದ ನಿಂಗವ್ವಾ ಕಾಂಬಳೆ ಮಾತನಾಡಿ, ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ನಮ್ಮ ಸಂಸ್ಥೆಯಿಂದ ದೇವಾದಾಸಿ ಮಕ್ಕಳ ಸಮಸ್ಯೆ ಬಗ್ಗೆ ಅವರ ಗಮನಕ್ಕೆ ತರಲಾಗಿತ್ತು. ಅವರು ದೇವದಾಸಿಯರ ಪರವಾಗಿ ಕೆಲವೊಂದು ಆದೇಶಗಳನ್ನು ಜಾರಿಗೆ ತರಲಾಗುವದು ಎಂದು ಭರವಸೆ ನೀಡಿದ್ದಾರೆ ಎಂದರು. ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ದೇವದಾಸಿ ಮಕ್ಕಳು ಆರ್ಥಿಕ ಭದ್ರತೆ ಪಡೆದುಕೊಳ್ಳುವಂತೆ ಕರೆ ನೀಡಿದರು. 

ನಿಂಗವ್ವಾ ಕಾಂಬಳೆ ಹಾಗೂ ಚಂದ್ರಶೇಖರ ಚಿನಕೇಕರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರಾದ ರಾಜು ಸಂಕೇಶ್ವರಿ, ಕೃಷ್ಣಾ ಗಿರಿಯಣ್ಣವರ, ಸಂಜೀವ ಕಾಂಬಳೆ,ಮಾದೇವ ಪೂಜಾರಿ,ಕಾಶಿನಾಥ ಸುಳಕುಡೆ, ರವಿ ಮಂಗಾವೆ, ಡಿ.ಕೆ.ಉಪ್ಪಾರ,ಲಾಲಸಾಬ್ ತಟಗಾರ, ಮಹಾಂತೇಶ ಮಠಪತಿ,ವೆಂಕಟೇಶ ಬಾಲರೆಡ್ಡಿ,ಭೀಮಶಿ ತಳವಾರ, ಈಶ್ವರ ಢವಳೇಶ್ವರ, ಇತರರು ಭಾಗವಹಿಸಿದ್ದರು.

RELATED ARTICLES

Most Popular

error: Content is protected !!
Join WhatsApp Group