ಗುರ್ಲಾಪುರ- ಶ್ರೀ ಬಸವ ಗೋಪಾಲ ನೀಲಮಾಣಿಕ ಮಠ ಸುಕ್ಷೇತ್ರ ಬಂಡಿಗಣಿ ಮಠದ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಅಪ್ಪಾಜಿಯವರ ಪಾರ್ಥಿವ ಶರೀರವು ಬೆಳಗಾವಿಯಿಂದ ಹುಟ್ಟೂರು ಸವದಿಗೆ ಹೋಗುವ ಮಾರ್ಗ ಮಧ್ಯೆ ಗುರ್ಲಾಪುರ ನಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ನಲ್ಲಿ ಪಾರ್ಥಿವ ಶರೀರದ ವಾಹನ ಬರುತ್ತಿದ್ದಂತೆ 2 ಕಿಲೋ ಮೀಟರ್ ರಸ್ತೆ ಉದ್ದಕ್ಕೂ ಸೇರಿದ ಸಾವಿರಾರು ಭಕ್ತರು ದಾನೇಶ್ವರ ಶ್ರೀಗಳಿಗೆ ಹೂ ಹಾರಿಸಿ ಅಂತಿಮ ದರ್ಶನ ಪಡೆದರು
ಭಕ್ತರ ಕಣ್ಣೀರಿನ ವಿದಾಯ, ಪುಷ್ಪಾರ್ಚನೆ ಸಲ್ಲಿಸಿದ ಭಕ್ತ ಸಮೂಹ : ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಾನೇಶ್ವರ ಶ್ರೀಗಳು ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾದರು. ಕೋಟ್ಯಂತರ ಭಕ್ತರನ್ನು ಹೊಂದಿರುವ ಪವಾಡ ಪುರುಷ, ರಾಜ್ಯ ಹೊರ ರಾಜ್ಯಗಳಲ್ಲಿ ಅನ್ನ ದಾಸೋಹ ಜ್ಞಾನ ದಾಸೋಹ ನೀಡಿ ಪ್ರಖ್ಯಾತಿ ಹೊಂದಿ, ನಂಬಿದ ಭಕ್ತರನ್ನು ತನ್ನ ಒಡಲೊಳಿಟ್ಟು ಕಾಯ್ದು, ಭಕ್ತರ ಯಮ ಬಾಧೆ ತಪ್ಪಿಸಿ ಜೀವ ಕಾಯ್ದ ಆಪತ್ಭಾಂದವ ಬೇಡಿದವರಿಗೆ ಬೇಡಿದನ್ನು ಕೊಡುವ ಕಾಮಧೇನು ಕಲ್ಪವೃಕ್ಷ, ಭಕ್ತರನ್ನು ಉದ್ಧಾರ ಮಾಡಿದ ಪರಿಪೂರ್ಣ ಪರಮಾತ್ಮ ಚಕ್ರವರ್ತಿ ದಾನೇಶ್ವರರು ವೈಕುಂಠವಾಸಿಯಾಗಿದ್ದು ಕೋಟ್ಯಂತರ ಭಕ್ತರಿಗೆ ತುಂಬಲಾರದ ನಷ್ಟವಾಗಿದೆ , ಭಕ್ತ ಸಮೂಹಕ್ಕೆ ಶಾಂತಿ ನೀಡುವ ಶಕ್ತಿ ಭಗವಂತ ನೀಡಲಿ.
ಶನಿವಾರ ಸಂಜೆ ಸಮಯದಲ್ಲಿ ಬಂಡಿಗಣಿ ಶ್ರೀ ಬಸವ ಗೋಪಾಲ ಮಠದ ಹತ್ತಿರ ವಿಧಿ ವಿಧಾನಗಳೊಂದಿಗೆ ಪೂಜ್ಯರ ಅಂತ್ಯ ಸಂಸ್ಕಾರ ನಡೆಯಲಿದೆ. ನಾಡಿನ ಮಠಾಧೀಶರು, ರಾಜಕೀಯ ಮುಖಂಡರು ಅಪಾರ ಭಕ್ತ ಸಮೂಹ ಸೇರಿ ಅಂತ್ಯ ಸಂಸ್ಕಾರ ನೆರವೇರಿಸಲಿದ್ದಾರೆ.

