ಮೂಡಲಗಿ: ಇಲ್ಲಿಯ ಲಯನ್ಸ್ ಕ್ಲಬ್ ಆಪ್ ಮೂಡಲಗಿ ಪರಿವಾರದಿಂದ ತಾಲ್ಲೂಕಿನ ಕಮಲದಿನ್ನಿ ಗ್ರಾಮದಲ್ಲಿಯ ಪ್ರವಾಹ ಪೀಡಿತ ಸಂತ್ರಸ್ತರಿಗೆ ಆಹಾರ ಧಾನ್ಯ ಕಿಟ್‍ಗಳನ್ನು ವಿತರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ಪ್ರಕೃತಿಯ ವಿಕೋಪದಲ್ಲಿ ಅಮಾಯಕ ಜನರು ಕಷ್ಟ ಅನುಭವಿಸುವಂತಾಗುತ್ತದೆ. ಇಂಥ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಂತರ್‍ರಾಷ್ಟ್ರೀಯ ಸಂಸ್ಥೆಯ ಸಹಯೋಗದಲ್ಲಿ ಕಡು ಬಡವ ಸಂತ್ರಸ್ತರನ್ನು ಆಯ್ಕೆಮಾಡಿ ನೆರವು ನೀಡಲಾಗಿದೆ. ಇದು ಲಯನ್ಸ್ ಕ್ಲಬ್‍ದ ಅಲ್ಪಸೇವೆಯಾಗಿದೆ ಎಂದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಮಾತನಾಡಿ, ರೋಗಿಗಳಿಗೆ ಅನ್ನದಾಸೋಹ, ಉಚಿತ ಆರೋಗ್ಯ ಶಿಬಿರಗಳು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕಾರ್ಯಾಗಾರಗಳು, ಸಸಿಗಳನ್ನು ನೆಡುವುದು, ಜಾನುವಾರುಗಳಿಗೆ ಉಚಿತ ಚಿಕಿತ್ಸೆಯ ಶಿಬಿರ ಸೇರಿದಂತೆ ಹಲವಾರು ಕಾರ್ಯಚಟುವಟಿಕೆಗಳನ್ನು ಕಳೆದ 6 ವರ್ಷಗಳಿಂದ ಲಯನ್ಸ್ ಕ್ಲಬ್‍ವು ಮಾಡುತ್ತಿದ್ದು, ಸಮಾಜ ಸೇವೆಯೇ ಕ್ಲಬ್‍ದ ಮುಖ್ಯ ಉದ್ಧೇಶವಾಗಿದೆ ಎಂದರು.
ಗ್ರಾಮದ ಲಕ್ಷ್ಮಣ ಹುಚರಡ್ಡಿ, ಲಕ್ಕಪ್ಪ ಹುಚರಡ್ಡಿ, ಆರ್.ಆರ್. ಪಾಟೀಲ, ರಮೇಶ ಗಿರಡ್ಡಿ, ಈರಪ್ಪ ಜಿನಗನ್ನವರ ಅತಿಥಿಯಾಗಿ ಇದ್ದರು.
ಲಯನ್ಸ್ ಕ್ಲಬ್ ಸದಸ್ಯರಾದ ಡಾ. ಎಸ್.ಎಸ್. ಪಾಟೀಲ, ಪುಲಕೇಶ ಸೋನವಾಲಕರ, ಡಾ. ರಾಜೇಂದ್ರ ಗಿರಡ್ಡಿ, ಸುರೇಶ ನಾವಿ, ಶಿವಾನಂದ ಗಾಡವಿ, ಸಂಗಮೇಶ ಕೌಜಲಗಿ ಸಂತ್ರಸ್ತರಿಗೆ ಆಹಾರ ಧಾನ್ಯ ಕಿಟ್‍ಗಳನ್ನು ವಿತರಿಸಿದರು.
ಲಯನ್ಸ್ ಕ್ಲಬ್ ಖಜಾಂಚಿ ಸುಪ್ರೀತ ಸೋನವಾಲಕರ ಸ್ವಾಗತಿಸಿ, ನಿರೂಪಿಸಿದರು.