- Advertisement -
ಮೂಡಲಗಿ:- ತಾಲೂಕಿನ ವಿವಿಧ ಗ್ರಾಮಗಳಲ್ಲಿನ ರೈತರ ಕೃಷಿ ಜಮೀನುಗಳಿಗೆ ಜಿಲ್ಲಾ ಕೃಷಿ ಪೀಡೆ ಸರ್ವೆಕ್ಷಣಾ ತಂಡವು ಭೆಟ್ಟಿ ನೀಡಿ ಸದಕ ಹಾಗೂ ಗೋದಿ ಬೆಳೆಯ ತೆನೆ ಒಣಗುವಿಕೆ ಹಾಗೂ ಕೀಟ ಬಾಧೆ ಮತ್ತು ರೋಗದ ಕುರಿತು ರೈತರೊಂದಿಗೆ ಅವಲೋಕಿಸಿ ಮುಂಜಾಗ್ರತೆ ಅನುಸರಿಸಲು ಸಲಹೆ ನೀಡುವುದರ ಜೊತೆಗೆ ತೆನೆ ಒಣಗುವ ರೋಗಕ್ಕೆ ಮುಂಜಾಗ್ರತೆ ಕ್ರಮವಾಗಿ ಪ್ರೋಪಿಕೋನಾಜೋಲ (ಟಿಲ್ಟ) 1ಮೀ.ಲಿ ಹಾಗೂ 13:0:45 ನೀರಿನಲ್ಲಿ ಕರಗುವ ರಸಗೊಬ್ಬರ 5 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.
ತಂಡದ ಕ್ಷೇತ್ರ ಭೆಟ್ಟಿಯಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಿ ಆಯ್ ಹೂಗಾರ, ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಧನಂಜಯ ಚೌಗಲಾ, ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಮ್ ಎಮ್ ನದಾಫ್ ಸಿಬ್ಬಂದಿಗಳಾದ ಪರಸಪ್ಪ ಹುಲಗಬಾಳ, ಎಲ್ಲವ್ವ ನಿಂಗನ್ನವರ ಹಾಗೂ ರೈತರು ಇದ್ದರು.