- Advertisement -
ಮೂಡಲಗಿ: ಕೇಂದ್ರ ಸರ್ಕಾರವು ಕುಟುಂಬಗಳ ಆರ್ಥಿಕ ಹೊರೆ ಇಳಿಸುವ ಸದುದ್ದೇಶದಿಂದ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗೆ ರೂ.200 ಹಾಗೂ ಉಜ್ವಲ ಯೋಜನೆಯಡಿ 400 ರೂಪಾಯಿ ಸಬ್ಸಿಡಿ ಘೋಷಿಸಿದ್ದು, ದೇಶದ 33 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.
ಮಂಗಳವಾರ ಆ-29 ರಂದು ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಈರಣ್ಣ ಕಡಾಡಿ ಅವರು, 2023-24ರ ಹಣಕಾಸು ವರ್ಷದಲ್ಲಿ ಸರ್ಕಾರವು ಈ ಯೋಜನೆಯಡಿ 7,680 ಕೋಟಿ ರೂ. ವ್ಯಯಿಸಲಿದೆ ಹಾಗೂ ಪಿಎಂ ಉಜ್ವಲ ಯೋಜನೆಯಡಿ 75ಲಕ್ಷ ಉಚಿತ ಹೊಸ ಎಲ್ ಪಿಜಿ ಕನೆಕ್ಷನ್ ಗಳನ್ನು ಒದಗಿಸಲು ತೀರ್ಮಾನಿಸಿರುವ ಕ್ರಮ ನಿಜಕ್ಕೂ ಶ್ಲಾಘನೀಯ.
ಈ ಜನಸ್ನೇಹಿ ನಿರ್ಧಾರ ಕೈಗೊಂಡಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವನ್ನು ಅಭಿನಂದನಾರ್ಹ ಎಂದು ಅವರು ತಿಳಿಸಿದರು