ಸರ್ವರ ಸಮಾನತೆ ಬಯಸಿದ ಡಾ.ಅಂಬೇಡ್ಕರ

Must Read

ಸಿಂದಗಿ; ಭಾರತ ರತ್ನ ವಿಶ್ವದ ಶ್ರೇಷ್ಠ ಪುಸ್ತಕ ಪ್ರೇಮಿ ಡಾ|| ಬಾಬಾಸಾಹೇಬ ಅಂಬೇಡ್ಕರರವರು ಬರೆದ ಸಂವಿಧಾನವನ್ನು ಇಡೀ ವಿಶ್ವವೇ ಮೆಚ್ಚಿಕೊಂಡು ಅಪ್ಪಿಕೊಂಡಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡುವಂತಹ ಅಂಶಗಳನ್ನು ಈ ಗ್ರಂಥದಲ್ಲಿ ಬರೆದಿದ್ದಾರೆ ಎಂದು ತಾಲೂಕು ದಂಡಾಧಿಕಾರಿ ಸಂಜೀವಕುಮಾರ ದಾಸರ ಹೇಳಿದರು.

ಪಟ್ಟಣದ ಡಾ|| ಬಾಬಾಸಾಹೇಬ ಅಂಬೇಡ್ಕರ ವೃತ್ತದಲ್ಲಿ 65 ನೇ ಮಹಾಪರಿನಿರ್ವಾಣ ನಿಮಿತ್ಯವಾಗಿ ನಗರದ ಅಂಬೇಡ್ಕರ ವೃತ್ತಕ್ಕೆ ಪುಪ್ಪ ಅರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ತಾಲೂಕು ಅಧಿಕಾರಿ ಎನ್.ಎಸ್.ಬೂಸಗೊಂಡ ಮೇಡಂ ಹಾಗೂ ತಾಲೂಕಿನ ಇನ್ನು ಹತ್ತು ಹಲವಾರು ಇಲಾಖೆಯ ಅಧಿಕಾರಿಗಳು ಇದ್ದರು.

ಶೋಷಿತರ ಏಳ್ಗೆಗೆ ಅವಿರತ ಶ್ರಮಿಸಿದ ಡಾ. ಅಂಬೇಡ್ಕರ್ – ಡಾ.ಮುಲ್ಲಾ ಅಭಿಮತ

ಸಿಂದಗಿ: ಅಂಬೇಡ್ಕರ್ ಅವರು ದೇಶ ಕಂಡ ಧೀಮಂತ ನಾಯಕ ಹಾಗೂ ಕ್ರಾಂತಿಕಾರಿ ಹೋರಾಟಗಾರರಾಗಿ ಶೋಷಿತರ ಏಳ್ಗೆಗೆ ಅವಿರತ ಶ್ರಮಿಸಿದರು. ಅಂಬೇಡ್ಕರ್ ಅವರ ಆದರ್ಶ ವ್ಯಕ್ತಿತ್ವ ಹಾಗೂ ವಿಚಾರಧಾರೆಗಳನ್ನು ಇಂದಿನ ವಿದ್ಯಾರ್ಥಿಗಳು ಹಾಗೂ ಯುವಜನಾಂಗ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಾಧನೆ ಹೊಂದಬೇಕು ಎಂದು ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ದಸ್ತಗೀರ ಮುಲ್ಲಾ ಹೇಳಿದರು.

ಪಟ್ಟಣದ ಡಾ. ಅಂಬೇಡ್ಕರ ವೃತ್ತಕ್ಕೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿ, ಮಹಾತ್ಮ ಗಾಂಧೀಜೀ ಅವರ ಸಹಕಾರದಂತೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ವಿಶ್ವದ ಬೇರೆ ದೇಶಗಳ ಸಂವಿಧಾನಗಳ ಬಗ್ಗೆ ತಿಳಿದುಕೊಂಡು ಬೇರೆ ದೇಶಗಳಿಗಿಂತ ವಿಭಿನ್ನವಾಗಿ ಸಂವಿಧಾನವನ್ನು ರಚಿಸಿದ್ದಾರೆ. ಅವರು ರಚಿಸಿರುವ ನಮ್ಮ ಸಂವಿಧಾನದಲ್ಲಿ ದೇಶದ ಒಂದೇ ಜಾತಿ-ಜನಾಂಗಕ್ಕೆ ಮಾತ್ರ ಮೀಸಲಾಗದಂತೆ ಎಲ್ಲಾ ಧರ್ಮ, ಜಾತಿ-ಜನಾಂಗದವರಿಗೆ ಉದ್ಯೋಗಾವಕಾಶಗಳು, ಸೌಲಭ್ಯ ಹಾಗೂ ಸರ್ವಾಂಗೀಣ ಹಕ್ಕುಗಳು ಸಮಾನವಾಗಿರುವಂತೆ ಕಾನೂನು ರಚಿಸಿದ್ದಾರೆ. ವ್ಯಕ್ತಿತ್ವವನ್ನು ವಿಶಾಲವಾಗಿ ರೂಪಿಸಿಕೊಂಡು ಮಾದರಿ ವ್ಯಕ್ತಿಗಳಾಗಬೇಕು. ನಮಗೆ ಅಗಾಧ ಚೈತನ್ಯವನ್ನು ನಿಸರ್ಗ ನೀಡಿದೆ ಅದನ್ನು ಬದುಕಿನಲ್ಲಿ ಆಳವಡಿಸಿಕೊಂಡು ಮುನ್ನಡೆಯುವ ಸ್ವ ಸಾರ್ಮರ್ಥ್ಯ ಬೆಳೆಸಿಕೊಳ್ಳಬೇಕು. ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡಿ, ತನ್ನ ಸುತ್ತಲಿನ ಚಟುವಟಿಕೆಗಳನ್ನು ಗಮನಿಸಿ, ಉತ್ತಮ ಮಾತುಗಳನ್ನು ಆಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ಸಂವಿಧಾನ ವಿಶ್ವದ ಇತರೆ ದೇಶಗಳ ಸಂವಿಧಾನಕ್ಕಿಂತ ದೊಡ್ಡದಾಗಿದೆ. ಸ್ವತಂತ್ರ ಪೂರ್ವದಲ್ಲಿ ನಮ್ಮ ದೇಶದಲ್ಲಿ ಹಾಗೂ ಸಮಾಜದಲ್ಲಿ ಸೇವೆ-ಸೌಲಭ್ಯಗಳು ಹಾಗೂ ಹಕ್ಕುಗಳು ಒಂದೆ ಜಾತಿ-ಜನಾಂಗಕ್ಕೆ ಮೀಸಲಾಗಿತ್ತು. ಆದರೆ ಸ್ವಾತಂತ್ರ್ಯಾನಂತರ ಡಾ. ಅಂಬೇಡ್ಕರ್ ಅವರ ದೂರದೃಷ್ಟಿಯಿಂದ ಹಾಗೂ ಸಮಾಜಮುಖಿ ಚಿಂತನೆಯಿಂದಾಗಿ ಸಂವಿಧಾನ ರೂಪುಗೊಂಡಿತು ಅಂದಿನಿಂದ ಸರ್ವರಿಗೂ ಸಮನಾಗಿ ಮಿಸಲಾತಿ ದೊರಕುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಸು ಕಾಂಬಳೆ, ಜಿಲಾನಿ ನಾಟೀಕಾರ, ಮಹಾವೀರ ಸುಲ್ಪಿ, ಸಂತೋಷ ಜಾಧವ, ಮಲ್ಲು ಕೂಚಬಾಳ, ಗುರು ದಶವಂತ ಸೇರಿದಂತೆ ಅನೇಕರಿದ್ದರು.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group