ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿ ಕೆ. ಹಿರಿಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ಮತ್ತು ಶ್ರೀ ಶನೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ದಿನಾಂಕ 7-2-2026 ರಿಂದ 4ನೇ ವರ್ಷದ ದನಗಳ ಜಾತ್ರೆ ಆರಂಭವಾಗಿದೆ.
ಈ ಪ್ರಯುಕ್ತ ತಾ. 13 – 2 – 2026ರಂದು ಸಂಜೆ 7 ಗಂಟೆಗೆ ಭಾರತೀಶ ಚಾಮಡಿಹಳ್ಳಿ ನಿರ್ದೇಶನದಲ್ಲಿ ಚಿಗುರು ಜಾನಪದ ಕಲಾ ಸಂಘ, ಚನ್ನರಾಯಪಟ್ಟಣ ತಂಡದವರಿಂದ ಕೋಲಾಟ, ತಾ. 14-2-2026ರಂದು ಸಂಜೆ 7 ಗಂಟೆಗೆ ಬೆನಕ ಕಲಾ ಸೌರಭ, ಹಾಸನ ತಂಡದವರಿಂದ ಗೀತ ಗಾಯನ, ಕುದುರುಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಮಾಡಲಪಾಯ ಯಕ್ಷಗಾನ ಭೀಮಾರ್ಜುನ ಕಾಳಗ, ರಚನೆ ಡಾ.ಚಂದ್ರ ಕಾಳೇನಹಳ್ಳಿ, ಭಾಗವಂತಿಕೆ ರಾಣಿ ಚರಾಶ್ರಿ ತಾ. 15- 2 – 2026ರಂದು ಭಾನುವಾರ ರಾತ್ರಿ 7 ಗಂಟೆಗೆ ಶ್ರೀ ಆಂಜನೇಯ ಶ್ರೀ ಶನೇಶ್ವರಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ಚನ್ನಬಸವೇಶ್ವರ ಡ್ರಾಮ ಸೀನರಿ ದೇವನೂರು ಇವರ ಭವ್ಯ ರಂಗಸಜ್ಜಿಕೆಯಲ್ಲಿ ಹಿರಿಯ ಅರ್ಚಕರು ದಿವಂಗತ ದಾಸೇಗೌಡರು ಮತ್ತು ದಿವಂಗತ ಪುಟ್ಟಮ್ಮ ಸ್ಮರಣಾರ್ಥ ಅರನಹಳ್ಳಿ ಕುಮಾರ ನಿರ್ದೇಶನದಲ್ಲಿ ರಾಜ ಸತ್ಯವ್ರತ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜಕರು, ಕಲಾವಿದರು ಹೆಚ್. ಡಿ.ರವಿ ತಿಳಿಸಿದ್ದಾರೆ.

