ಬೀದರ – ಬೀದರ್‌ನ ಡಿಪೋ ನಂಬರ್-1ರಲ್ಲಿ ಬಸ್ ಚಾಲಕನೊಬ್ಬ ರಾತ್ರಿ ವೇಳೆಯಲ್ಲಿ ಬಸ್ ನಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ರಾಜ್‌ಕುಮಾರ (59) ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕ
ಬೀದರ್ ತಾಲೂಕಿನ ಅಣದೂರು ಗ್ರಾಮದ ನಿವಾಸಿ ರಾಜ್‌ಕುಮಾರ ಬೀದರ್ ನಿಂದ ಬಳ್ಳಾರಿಗೆ ಹೋಗುವ ಸ್ಲಿಪರ್ ಕೋಚ್ ಡ್ರೈವರ್ ಆಗಿದ್ದ.
5 ತಿಂಗಳಲ್ಲಿ ನಿವೃತ್ತಿ ಆಗಬೇಕಾಗಿದ್ದ ರಾಜ್‌ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದು ಚಾಲಕನ ಆತ್ಮಹತ್ಯೆಗೆ ಇನ್ನೂ ಕಾರಣ ತಿಳಿದು ಬಂದಿಲ್ಲ
ರಾಜ್‌ಕುಮಾರ್ ಫೋನ್ ಸ್ವಿಚ್ಡ್‌ಆಫ್ ಆದ ಹಿನ್ನೆಲೆ ಬೇರೆ ಚಾಲಕನ ಮೂಲಕ ಬಳ್ಳಾರಿಗೆ ಕಳುಹಿಸಿದ ಡಿಪೋ ಅಧಿಕಾರಿಗಳು ಬಸ್ ಸ್ವಚ್ಛಗೊಳಿಸಲು ಹೋದಾಗ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಬೀದರ್ ನ್ಯೂ ಟೌನ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ