ಬೇವೂರ:-ಮಾದಕ ವಸ್ತುಗಳ ಸೇವನೆ ಜಗತ್ತನ್ನು ಕಾಡುತ್ತಿರುವ ದೊಡ್ಡ ಪಿಡುಗು. ಯುವ ಪೀಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಬಳಸುತ್ತಿರುವುದು ಭವಿಷ್ಯದ ದೃಷ್ಠಿಯಿಂದ ಅಪಾಯಕಾರಿಯಾಗಿದೆ ಎಂದು ಬಾಗಲಕೋಟ ಗ್ರಾಮೀಣ ಪೋಲಿಸ್ ಠಾಣೆಯ ಪಿ.ಎಸ್.ಐ ಶರಣಬಸಪ್ಪ ಸಂಗಳದ ಹೇಳಿದರು.
ಇಲ್ಲಿಯ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಬಾಗಲಕೋಟ ಗ್ರಾಮೀಣ ಪೋಲಿಸ್ ಠಾಣೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾದಕ ದ್ರವ್ಯಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ದಿನಾಚರಣೆ ಉದ್ದೇಶಿಸಿ ಅವರು ಮಾತನಾಡಿದರು.
ತಂಬಾಕು ಉತ್ಪಾದನೆಯಿಂದ ದೇಶಕ್ಕೆ ಆಗುತ್ತಿರುವ ಹಾನಿಯೇ ಹೆಚ್ಚು ಮಾದಕ ವಸ್ತುಗಳ ಚಟವೂ ವ್ಯಕ್ತಿಯ ಮೆದುಳಿನ ಮೇಲೆ ದೀರ್ಘಕಾಲದ ಮತ್ತು ಪ್ರಭಾವಿ ಪರಿಣಾಮ ಬಿರುತ್ತದೆ. ಹೀಗಾಗಿ ಪ್ರತಿಯೊಬ್ಬರು ಮಾದಕ ದ್ರವ್ಯಗಳಿಂದ ದೂರವಿರಬೇಕು ಎಂದರು.
ಆದರ್ಶ ವಿದ್ಯಾವರ್ಧಕ ಸಂಘಕ ಸದಸ್ಯ ಪಿ.ಬಿ.ಹೊಸ್ಸಳ್ಳಿ ಮಾತನಾಡಿ “ವ್ಯಸನಯುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರು ದೃಡಸಂಕಲ್ಪ ಮಾಡಬೇಕು ಎಂದರು.
ಎನ್.ಎಸ್.ಎಸ್.ಯೋಜಾನಾಧಿಕಾರಿ ಡಾ||ಎಸ್.ಬಿ.ಹಂಡಿನಾಳ ಮಾತನಾಡಿ, “ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಯಲ್ಲಿ ಮಾದಕ ವಸ್ತುಗಳಿಂದ ಅನೇಕ ವಿಕೃತ ಮನಸ್ಸುಗಳ ನಿರ್ಮಾಣವಾಗುತ್ತದೆ. ಶಾಲಾ ಕಾಲೇಜಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಅಘೋರ, ಅನಾಚಾರಗಳು ನಡೆಯುತ್ತಿವೆ. ಇದರಿಂದ ದೂರವಿದ್ದರೇ ಶರಣರ ದಾಸರ, ಅವರ ಜೀವನ ಚರಿತ್ರೆಯನ್ನು ಆಲಿಸುವದರಿಂದ ಭಕ್ತಿ ಭಾವದಿಂದ ಎಲ್ಲರೂ ಸನ್ಮಾರ್ಗವನ್ನು ಕಾಣುತ್ತೇವೆ ಎಂದರು.
ಕಾಲೇಜಿನ ಪ್ರಾಚಾರ್ಯ ಜಗದೀಶ ಬೈರಮಟ್ಟಿ, ಡಿ.ವಾಯಿ.ಬುಡ್ಡಿಯವರ, ಎನ್.ಬಿ.ಡೋನಿ, ಪಿ.ಎನ್.ಕಂಠಿ, ಎಸ್.ಎಸ್.ಆದಾಪೂರ, ಎನ್.ಬಿ.ಬೆಣ್ಣೂರ, ಜಿ.ಎಸ್.ಗೌಡರ ಉಪಸ್ಥಿತರಿದ್ದರು. ಕಂದೂರ ಪ್ರಜ್ವಲ್ ಕುರಿ ಸ್ವಾಗತಿಸಿದರು. ಕುಮಾರಿ ಪ್ರತಿಭಾ ಹಳವರ ನಿರೂಪಿಸಿದರು, ಪ್ರಮೀಣ ಹಿರೇಮಠ ವಂದಿಸಿದರು.