spot_img
spot_img

ನಶಿಸುತ್ತಿರುವ ಗೀಗಿ ಪದಗಳ – ಜನಪದ ಗೀತ ಸಂಪ್ರದಾಯ : ಎಂ. ವೈ. ಮೆಣಶಿನಕಾಯಿ ಕಳವಳ

Must Read

spot_img
- Advertisement -

ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ  ದಿ. ಮರಿಕಲ್ಲಪ್ಪ ಮಲಶೆಟ್ಟಿ ನಿಮಿತ್ಯ ಗೀಗಿ ಪದ ಕಾರ್ಯಕ್ರಮ

ಬೆಳಗಾವಿ: ಗೀಗೀ ಪದದ ಜನನವಾದುದು 1875ರಲ್ಲಿ. ಮೊದಲಿನಿಂದಲೂ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ಮಾಯಮ್ಮನ ಜಾತ್ರೆಯಲ್ಲಿ ಕನ್ನಡ ಲಾವಣಿಕಾರರೂ ಮರಾಠಿ ಲಾವಣಿಕಾರರೂ ಕೂಡಿ ವಾದದ ಲಾವಣಿಗಳನ್ನು ಹಾಡುತ್ತಿದ್ದರು. ಗೀಗೀ ಪದಗಳು ಜನಮನವನ್ನು ತಿದ್ದುವ, ಜ್ಞಾನ ಹೆಚ್ಚಿಸುವ, ನೀತಿ ತಿಳಿಸುವ, ವೈಚಾರಿಕ ಜನಪದ ಪರಂಪರೆಯ ಗೀತೆಗಳಾಗಿವೆ. ಈ ಪದಗಳಲ್ಲಿ ಜಾನಪದ ಶಬ್ದಸಂಪತ್ತು ಬಹುವಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಗೌರವ ಕಾರ್ಯದರ್ಶಿ ಎಂ. ವೈ. ಮೆಣಶಿನಕಾಯಿ ಅಭಿಪ್ರಾಯಪಟ್ಟರು. 

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಂದ ನಗರದ ಕನ್ನಡ ಭವನದಲ್ಲಿ ಆಯೋಜಿಸಲ್ಪಟ್ಟಿದ್ದ ದಿವಂಗತ ಮರಿಕಲ್ಲಪ್ಪ ರುದ್ರಪ್ಪ ಮಲಶೆಟ್ಟಿ ದತ್ತಿ ನಿಮಿತ್ಯ ಗೀಗೀ ಪದಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. 

- Advertisement -

 ಮುಂದುವರೆದು ಮಾತನಾಡಿದ ಅವರು ಕಿತ್ತೂರು ನಾಡಿನ ತಿಗಡೋಳ್ಳಿ ಗ್ರಾಮದಲ್ಲಿ ಜನಿಸಿದ ದಿವಂಗತ ಮರಿಕಲ್ಲಪ್ಪ ರುದ್ರಪ್ಪ ಮಲಶೆಟ್ಟಿ ರವರು ಖ್ಯಾತ ಲಾವಣಿ ಪದ, ಗೀಗಿ ಪದ ಹಾಡುಗಾರರಾಗಿದ್ದರು. ಗೀಗಿ ಪದಗಳ ಮೂಲಕ ಜನರನ್ನು ಸ್ವಾತಂತ್ರ ಹೋರಾಟಕ್ಕೆ ಜಾಗೃತಗೊಳಿಸಿ ಪ್ರೇರೇಪಣೆ ನೀಡುತ್ತಾ ಗೀಗಿ ಪದಗಳನ್ನು ಸಾರ್ವಜನಿಕ ವಲಯದಲ್ಲಿ ಜನಪ್ರೀಯಗೊಳಿಸಿದ್ದರು. ಜನಪದ ಗೀತ ಸಂಪ್ರದಾಯವಾಗಿರುವ ಗೀಗಿ ಪದಗಳು ಪ್ರಸ್ತುತ ದಿನಗಳಲ್ಲಿ ನಶಿಸುತ್ತಿರುವುದು ಬೇಸರದ ಸಂಗತಿಯಾಗಿದ್ದು ಗೀಗಿ ಪದ ಮತ್ತು ಗೀಗಿ ಪದಗಳನ್ನು ಹಾಡುವ ಗಾಯಕರನ್ನು ಉಳಿಸಿ ಬೆಳೆಸಿ ಜನಪ್ರಿಯಗೋಳಿಸಬೇಕಾಗಿರುವುದು ಇಂದು ಅನಿವಾರ್ಯವಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀಮತಿ ಆಶಾ ಕಡಪಟ್ಟಿ ರಚಿಸಿದ ಬೆಳಗಾವಿ ನಾಡಿನ ಖ್ಯಾತಿಯನ್ನು ಹೇಳುವ ಗೀಗಿ ಪದಗಳನ್ನು ಶ್ರೀಮತಿ ಪ್ರತಿಭಾ ಕಳ್ಳಿಮಠ, ಮಹಾದೇವಿ ಹಿರೇಮಠ ಮತ್ತು ರತ್ನಾ ಜೊಂಡ ಹಾಡಿ  ರಂಜಿಸಿದರು.  ಇದೇ ಸಂಧರ್ಭದಲ್ಲಿ ಕುಮಾರಿ ಸಹನಾ ಮೆಟಗುಡ್ಡ ಭರತ ನಾಟ್ಯ ಪ್ರದರ್ಶಿಸಿದರು.   

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ವಹಿಸಿದ್ದರು. ಅತಿಥಿಗಳಾಗಿ ಸಾಹಿತಿ ಶ್ರೀಮತಿ ಸುನಂದಾ ಎಮ್ಮಿ, ಕನ್ನಡ ಸಾಹಿತ್ಯ ಪರಿಷತ್ ಯರಗಟ್ಟಿ ತಾಲುಕಾ ಅಧ್ಯಕ್ಷ ಟಿ. ಎಂ. ಕಾಮಣ್ಣವರ , ಬೆಳಗಾವಿ ತಾಲುಕಾ ಅಧ್ಯಕ್ಷ ಸುರೇಶ ಹಂಜಿ ಉಪಸ್ಥಿತರಿದ್ದರು.  

- Advertisement -

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸಾ. ರಾ. ಸುಳಕುಡೆ, ಹಿರಿಯ ಪತ್ರಕರ್ತ ಮುರಗೇಶ ಶಿವಪೂಜಿ, ಡಾ. ಸೋಮಶೇಖರ ಹಲಸಗಿ, ಜ್ಯೋತಿ ಬಾದಾಮಿ, ಬಿ.ಡಿ.ಮಠಪತಿ, ಸುರೇಶ ಕರವಿನಕೊಫ್ಪ , ರುದ್ರಮ್ಮ ಯಾಳಗಿ, ಶಿವಾನಂದ ತಲ್ಲೂರ, ವೀರಬದ್ರ ಅಂಗಡಿ, ಗುರು ಪಾಟೀಲ, ಶ್ರೀಧರ ಕುಲಕರ್ಣಿ, ಆರ್. ಬಿ. ಬನಶಂಕರಿ, ಚನ್ನಬಸಯ್ಯಾ ಕಟಾಪುರಿಮಠ ಮುಂತಾದವರು  ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಹುಕ್ಕೇರಿ ತಾಲೂಕಾ ಅಧ್ಯಕ್ಷ ಪ್ರಕಾಶ ಬಸಪ್ರಭು ಅವಲಕ್ಕಿ ಸ್ವಾಗತಿಸಿದರು. ಆಕಾಶ್ ಥಬಾಜ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.


ಮಾಹಿತಿ:ವರದಿ:

ಆಕಾಶ್ ಅರವಿಂದ ಥಬಾಜ 

ಜಿಲ್ಲಾ ಸಹ ಮಾಧ್ಯಮ ಪ್ರತಿನಿಧಿ

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್

ಬೆಳಗಾವಿ 

94486934208

9035419700

- Advertisement -
- Advertisement -

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group