spot_img
spot_img

Mudalagi: ಪ್ರತಿ ವಿದ್ಯಾರ್ಥಿಗೆ ಗುರಿ ಇರಬೇಕು – ವಂಟಗೋಡಿ

Must Read

spot_img
- Advertisement -

ಮೂಡಲಗಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ಸತತ ಪ್ರಯತ್ನ, ಸಮಯ ಪ್ರಜ್ಞೆ, ಏಕಾಗ್ರತೆಯನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ, ಪ್ರತಿಯೊಬ್ಬ ವಿದ್ಯಾರ್ಥಿಗೆ ಉತ್ತಮ ಗುರಿಯಿರಬೇಕು. ಗುರಿಯಿಲ್ಲದವನ ಜೀವನ ಚುಕ್ಕಾಣಿ ಇಲ್ಲದ ಹಡಗಿನಂತೆ ಎಂದು ಮೂಡಲಗಿ ಆರ್.ಡಿ.ಎಸ್ ಕಾಲೇಜಿನ ಉಪನ್ಯಾಸಕ ಹಾಗೂ ಸಾಹಿತಿ ಟಿ.ಎಸ್.ವಂಟಗೋಡಿ ಅಭಿಮತ ವ್ಯಕ್ತಪಡಿಸಿದರು.

ಅವರು ತಾಲೂಕಿನ ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಕಲಾ ಹಾಗೂ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಶ್ರೀಗಳು ಹಾಗೂ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಸುರೇಶ ಬಿ.ಲಂಕೆಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು.

- Advertisement -

ಈ ಸಂದರ್ಭದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಾಧಕ ವಿದ್ಯಾರ್ಥಿಗಳಾದ ರೋಮಿತಾ ಜಿಡ್ಡಿಮನಿ, ಜಯಶ್ರೀ ಹುಣಶ್ಯಾಳ, ಮುತ್ತವ್ವ ಸುಣಧೋಳಿ, ಅಕ್ಷತಾ ಪೂಜೇರಿ, ರಾಧಿಕಾ ಭಜಂತ್ರಿ, ಬೋರವ್ವ ಪೂಜೇರಿ, ಸುನಂದಾ ಕುರಿ ಅವರನ್ನು ಸತ್ಕರಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಚ್.ಎಮ್.ಹತ್ತರಕಿ, ಎಸ್.ಡಿ.ವಾಲಿ, ಎ.ಕೆ.ಬಡಿಗೇರ, ಜಿ.ಜಿ.ನರಗುಂದ, ವಿ.ಪಿ ಉದ್ದನ್ನವರ, ಸಿ.ಎಸ್.ಪಾಟೀಲ, ರಾಜು ಕಿರಣಗಿ, ವಿದ್ಯಾರ್ಥಿ ಪ್ರತಿನಿಧಿಗಳಾದ ರಕ್ಷಿತಾ ಕುಲಗೋಡ, ಭಾಗಶ್ರಿ ಜಕಾತಿಮಠ, ಲಕ್ಷ್ಮೀ ಬಡಿಗೇರ, ಲಕ್ಷ್ಮೀ ದೇವರಮನಿ ಮತ್ತಿತರರು ಇದ್ದರು.

ಲಕ್ಷ್ಮೀ ನರಗುಂದ ನಿರೂಪಿಸಿದರು. ಸೃಷ್ಠಿ ನಾಯಕ ಸ್ವಾಗತಿಸಿ, ಸುಪ್ರಿಯಾ ಮನ್ನಾಪೂರ ವಂದಿಸಿದರು.

- Advertisement -
- Advertisement -

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group