Homeಸುದ್ದಿಗಳುಎಲ್ಲರಿಗೂ ಕಾನೂನಿನ ಅರಿವಿರಬೇಕು - ನ್ಯಾಯಾಧೀಶ ರಮೇಶ ಗಾಣಿಗೇರ

ಎಲ್ಲರಿಗೂ ಕಾನೂನಿನ ಅರಿವಿರಬೇಕು – ನ್ಯಾಯಾಧೀಶ ರಮೇಶ ಗಾಣಿಗೇರ

ಸಿಂದಗಿ: 1949 ನವ್ಹಂಬರ 26ರಂದು ಭಾರತದ ಸಂವಿಧಾನವನ್ನು ಅಂಗಿಕರಿಸಿದ ದಿನ ಎಲ್ಲಾ ವಿದ್ಯಾರ್ಥಿಗಳು ಸಂವಿಧಾನವನ್ನು ಗೌರವಿಸಬೇಕು ಅಲ್ಲದೆ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ರಮೇಶ ಗಾಣಗೇರ ಹೇಳಿದರು.

ಪಟ್ಟಣದ ಸಿ.ಎಂ.ಮನಗೂಳಿ ಮಹಾವಿದ್ಯಾಲಯದಲ್ಲಿ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಮತ್ತು ಐಕ್ಯೂಎಸಿ ರಾಜ್ಯ ಶಾಸ್ತ್ರ ವಿಭಾಗ, ಅಪರಾಧ ಶಾಸ್ತ್ರ ವಿಭಾಗ ಸಹಯೋಗದಲ್ಲಿ ಹಮ್ಮಿಕೊಂಡ ಸಂವಿಧಾನ ಸಮರ್ಪಣಾ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಯುವಕರೇ ಭವಿಷ್ಯತ್ತಿನ ಪ್ರಜೆಗಳು. ಶಿಸ್ತು, ಪ್ರಾಮಾಣಿಕತೆ, ಛಲ ಹಾಗೂ ಶ್ರದ್ಧೆಯಿಂದ ಜೀವನ ರೂಪಿಸಿಕೊಳ್ಳಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ದೊಡಮನಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಇರಬೇಕಾಗಿರುವುದು ತುಂಬಾ ಮಹತ್ವದ್ದಾಗಿದೆ. ಕಾನೂನುಗಳ ಬಗ್ಗೆ ತಿಳಿದುಕೊಂಡು ಕಾನೂನಿನ ಅರಿವು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಎ.ಬಿ.ಸಿಂದಗಿ, ಸಹಾಯಕ ಸರಕಾರಿ ವಕೀಲ ಆನಂದ ರಾಠೋಡ, ವ್ಹಿ. ಬಿ. ಪಾಟೀಲ, ಎಂ.ಎಸ್.ಪಾಟೀಲ ವೇದಿಕೆ ಮೇಲಿದ್ದರು.

RELATED ARTICLES

Most Popular

error: Content is protected !!
Join WhatsApp Group