ಪ್ರತಿಯೊಬ್ಬರಲ್ಲಿ ಕಾನೂನು ಜ್ಞಾನ ಇರಬೇಕು- ಚಂದ್ರಶೇಖರ್ ದಿಡ್ಡಿ

Must Read

ಬಾಗಲಕೋಟೆ –  ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇರಬೇಕು ಕಾನೂನು ಅರಿವಿದ್ದರೆ ಅನ್ಯಾಯಗಳು ಕಡಿಮೆಯಾಗುತ್ತವೆ ಎಂದು ಜಿಲ್ಲಾ ಹಿರಿಯ ನ್ಯಾಯವಾದಿ ಚಂದ್ರಶೇಖರ ದಿಡ್ಡಿ ಹೇಳಿದರು.

ಅವರು ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಬಾಪೂಜಿ ಪ ಪೂ ಕಾಲೇಜಿನಲ್ಲಿ ದಿ. 24 ರಂದು ಮಂಗಳವಾರ ಆಯೋಜಿಸಿದ್ದ ಮಕ್ಕಳಿಗೆ ಕಾನೂನು ಹರಿವು ನೆರವು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಬಾಲ್ಯ ವಿವಾಹ ಬಾಲಕಾರ್ಮಿಕತೆ ಉಂಟಾಗುವ ದುಷ್ಪರಿಣಾಮಗಳು ಮತ್ತು ಅನಾಥ ಮಕ್ಕಳಿಗೆ ಆಧಾರ್ ಕಾರ್ಡ್ ದಾಖಲಾತಿ ಮಾಡಿಸಲು ಸಖಿ ಯೋಜನೆ ಬಗ್ಗೆ , ವಿವರಿಸಿ ರಲ್ಲದೆ ಮುಂದುವರೆದು ಬದುಕಲು ಆಹಾರ ಬಟ್ಟೆ ಎಷ್ಟು ಅವಶ್ಯವೋ ಸಮಾಜದಲ್ಲಿ ಬದುಕಲು ಕಾನೂನಿನ ಅರಿವು ಅಷ್ಟೇ ಅವಶ್ಯವಾಗಿದೆ ಎಂದು ಹೇಳಿದರು

ಭಾರತದ ಸರ್ವೋಚ್ಛ ನ್ಯಾಯಾಲಯವು ರೂಪಿಸಿದ ಸಾಥಿ,ಆಶು, ಜಾಗೃತಿ, ಸಂವಾದ, ಡಾನ್ ಈ ಯೋಜನೆಯ ಅಡಿಯಲ್ಲಿ ಬರುವ ಸೌಲಭ್ಯಗಳು ಮತ್ತು ಕಾನೂನಿನ ಮಾಹಿತಿಗಳ ಬಗ್ಗೆ ವಿವರಿಸಿದರು

ಇದೇ ಸಂದರ್ಭದಲ್ಲಿ ಅವರನ್ನು ಎಸ್ ಆರ್ ಪಾಟೀಲ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಸ್ ಆರ್ ಪಾಟೀಲರು ಸನ್ಮಾನಿಸಿದರು. ಕಾರ್ಯದರ್ಶಿಗಳಾದ ಎಮ್. ಎನ್.ಪಾಟೀಲ, ಸಲಹಾ ಮಾರ್ಗದರ್ಶಕರಾದ ಎಚ್.ಬಿ. ಧರ್ಮಣ್ಣವರ ಗುರುಗಳು ಅಧ್ಯಕ್ಷತೆ ವಹಿಸಿದ್ದರು ಹಾಗೂ ಬಾಪೂಜಿ ಪ ಪೂ ವಿದ್ಯಾಲಯ ಬಾಡಗಂಡಿಯ ಪ್ರಾಚಾರ್ಯರಾದ ಶಿವಭೋದ ಶೆಟ್ಟಿ ಮತ್ತು ವೈದ್ಯಕೀಯ ಮಹಾವಿದ್ಯಾಲಯದ ಅಧೀಕ್ಷಕರಾದ ಧರ್ಮರಾಯ ಇಂಗಳೆ ಅವರು ಉಪಸ್ಥಿತರಿದ್ದರು.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group