ಬೀದರ: ಬದಲಾಗುತಿರುವ ಸನ್ನಿವೇಶಕ್ಕೆ ಅನುಗುಣವಾಗಿ ನಮ್ಮ ಹಿಂದೂ ಸಮಾಜ ಮತ್ತು ತಮ್ಮ ಆತ್ಮ ರಕ್ಷಣೆಗಾಗಿ ಪ್ರತಿಯೊಬ್ಬರ ಮನೆಯಲ್ಲಿ ಶಸ್ತ್ರಾಸ್ತ್ರ ಇಡುವುದು ಅನಿವಾರ್ಯವಾಗಿದೆ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದರು…
ಜಿಲ್ಲೆಯ ಮನ್ನಾ ಏ ಖೇಳಿ ಗ್ರಾಮದ ಆರ್ಯಸಮಾಜದಲ್ಲಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನೋತ್ಸವ ಹಾಗೂ ಆರ್ಯ ಸಮಾಜದ 150ನೇ ವರ್ಷದ ನಿಮಿತ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಮಾತನಾಡಿದ ಬೀದರ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು,ಆ ಕಡೆ ಪಾಕಿಸ್ತಾನ ಈ ಕಡೆ ಬಾಂಗ್ಲಾದೇಶ ಹಾಗು ಚೀನಾ ದೇಶ ಇದ್ದಿದ್ದ ಈ ಕಾರಣಕ್ಕೆ ನಾವು ಕೂಡ ಮನೆಯಲ್ಲಿ ಹತ್ಯಾರ ಇಡುವುದು ಅನಿವಾರ್ಯವಾಗಿದೆ..ಬದಲಾಗುತಿರುವ ಸನ್ನಿವೇಶಕ್ಕೆ ಅನುಗುಣವಾಗಿ ನಮ್ಮ ಹಿಂದೂ ಸಮಾಜ ಮತ್ತು ತಮ್ಮ ಆತ್ಮ ರಕ್ಷಣೆಗಾಗಿ ಪ್ರತಿಯೊಬ್ಬರ ಮನೆಯಲ್ಲಿ ಶಸ್ತ್ರಾಸ್ತ್ರ ಇಡುವುದು ಅನಿವಾರ್ಯ ಎಂದು ಹೇಳಿದರು.
ವರದಿ : ನಂದಕುಮಾರ ಕರಂಜೆ, ಬೀದರ